Ghee With water: ನೀರಿನ ಜೊತೆಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಪ್ರಯೋಜನೆಗಳೇನು ಗೊತ್ತಾ? ಅಮೃತ್ತಕ್ಕೂ ಕಮ್ಮಿಯಿಲ್ಲ ಇದರಲ್ಲಿ ಅಡಗಿರುವ ಆರೋಗ್ಯ ಗುಣಗಳು

Ghee With water: ಎಲ್ಲರಿಗೂ ಸಾಮಾನ್ಯವಾಗಿ ಆಹಾರದೊಂದಿಗೆ ತುಪ್ಪ ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಆದರೆ, ನೀರಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳನ್ನು ತಿಳಿದರೆ ನೀವು ಶಾಕ್‌ ಆಗುತ್ತೀರಿ..  

Written by - Zee Kannada News Desk | Last Updated : Mar 29, 2025, 06:21 PM IST
  • ಅನೇಕ ಆರೋಗ್ಯ ತಜ್ಞರು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ದಿನವನ್ನು ಪ್ರಾರಂಭಿಸಲು ಶಿಫಾರಸು ಮಾಡುತ್ತಾರೆ.
  • ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೆಚ್ಚಗಿನ ತುಪ್ಪದ ನೀರನ್ನು ಕುಡಿಯಲು ಪ್ರಯತ್ನಿಸಬೇಕು.
  • ತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ಮೆದುಳಿಗೆ ತುಂಬಾ ಪ್ರಯೋಜನೆಕಾರಿ.
Ghee With water: ನೀರಿನ ಜೊತೆಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಪ್ರಯೋಜನೆಗಳೇನು ಗೊತ್ತಾ? ಅಮೃತ್ತಕ್ಕೂ ಕಮ್ಮಿಯಿಲ್ಲ ಇದರಲ್ಲಿ ಅಡಗಿರುವ ಆರೋಗ್ಯ ಗುಣಗಳು

Ghee With water: ಅನೇಕ ಆರೋಗ್ಯ ತಜ್ಞರು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ದಿನವನ್ನು ಪ್ರಾರಂಭಿಸಲು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ದಿನವಿಡೀ ನೀವು ಸೇವಿಸುವ ಆಹಾರದಿಂದ ಸಂಗ್ರಹವಾಗಿರುವ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

Add Zee News as a Preferred Source

ಇದನ್ನೂ ಓದಿ: ಮಜ್ಜಿಗೆಗೆ ಈ ಪುಟ್ಟ ಬೀಜ ಬೆರೆಸಿ ಕುಡಿಯಿರಿ.. ಬ್ಲಡ್‌ ಶುಗರ್‌ ಕಂಪ್ಲೀಟ್‌ ನಾರ್ಮಲ್‌ ಆಗುವುದು! ಮಧುಮೇಹಕ್ಕೆ ಬೆಸ್ಟ್‌ ಮನೆಮದ್ದು

ಬೆಚ್ಚಗಿನ ನೀರನ್ನು ಕುಡಿಯುವುದರಿಂದಾಗುವ ಪ್ರಯೋಜನಗಳನ್ನು ದ್ವಿಗುಣಗೊಳಿಸಲು, ನೀರಿಗೆ ಒಂದು ಚಮಚ ತುಪ್ಪ ಸೇರಿಸಿ. ಇದನ್ನು ಒಂದು ವಾರ ಕುಡಿದು ನೋಡಿ. ನಿಮ್ಮಲ್ಲಿ ಆಗುವ ಬದಲಾವಣೆಯನ್ನು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. ಖಾಲಿ ಹೊಟ್ಟೆಯಲ್ಲಿ ತುಪ್ಪ ಬೆರೆಸಿದ ನೀರು ಕುಡಿಯುವುದರಿಂದ ದೇಹದಲ್ಲಿನ ಕೊಬ್ಬು ಕರಗಲು ಪ್ರಾರಂಭಿಸುತ್ತದೆ. ಇದು ಸಂಗ್ರಹವಾಗಿರುವ ಕೊಬ್ಬನ್ನು ಸುಡುವಲ್ಲಿ ತುಂಬಾ ಸಹಾಯಕವಾಗಿದ್ದು, ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೆಚ್ಚಗಿನ ತುಪ್ಪದ ನೀರನ್ನು ಕುಡಿಯಲು ಪ್ರಯತ್ನಿಸಬೇಕು.

ಇದನ್ನೂ ಓದಿ: ಊಟದ ನಂತರ ಈ ಮೊಗ್ಗನ್ನು ಬಾಯಲ್ಲಿಟ್ಟುಕೊಂಡ್ರೆ ಸಾಕು ಕ್ಷಣಾರ್ಧದಲ್ಲಿ ನಾರ್ಮಲ್‌ ಆಗುತ್ತೆ ಶುಗರ್!‌ ಮತ್ತೆ ಹೆಚ್ಚಾಗೋದೇ ಇಲ್ಲ..

ಚರ್ಮದ ಹೊಳಪ:
ತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಚರ್ಮವು ಆರೋಗ್ಯಕರ ಮತ್ತು ಹೊಳೆಯುತ್ತದೆ. ಏಕೆಂದರೆ ತುಪ್ಪದಲ್ಲಿ ವಿಟಮಿನ್ ಇ ಇರುತ್ತದೆ. ಇದು ಚರ್ಮವನ್ನು ಪೋಷಿಸುತ್ತದೆ. ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ, ಈ ತುಪ್ಪದ ನೀರು ನಿಮ್ಮ ಚರ್ಮದ ಹೊಳಪನ್ನು ಕಾಪಾಡಲು ತುಂಬಾ ಉಪಯುಕ್ತವಾಗಿದೆ. ತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ಮೆದುಳಿಗೆ ತುಂಬಾ ಪ್ರಯೋಜನೆಕಾರಿ.

ಹೃದಯದ ಆರೋಗ್ಯ:
ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ತುಪ್ಪ ಬೆರೆಸಿದ ನೀರು ಕೂಡ ತುಂಬಾ ಸಹಾಯಕವಾಗಿದೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೃದಯ ಸಮಸ್ಯೆ ಇರುವವರು ಒಂದು ವಾರದವರೆಗೆ ಒಂದು ಚಮಚ ತುಪ್ಪವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಿರಿ, ಇದರಿಂದ ನೀವು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಮಧುಮೇಹ ನಿಯಂತ್ರಿಸಲು ಈ ಸರಳ ಟಿಪ್ಸ್ ಫಾಲೋ ಮಾಡಿ..!

ಕಣ್ಣಿನ ಆರೋಗ್ಯ:
ಕಣ್ಣಿನ ಆರೋಗ್ಯವನ್ನು ಸುಧಾರಿಸಲು ತುಪ್ಪದೊಂದಿಗೆ ಬೆರೆಸಿದ ನೀರು ಸಹ ತುಂಬಾ ಸಹಾಯಕವಾಗಿದೆ. ಇದು ನಿಮ್ಮ ದೃಷ್ಟಿಯನ್ನು ಬಲಪಡಿಸುತ್ತದೆ. ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಕಣ್ಣಿನ ದೃಷ್ಟಿ ಮಂದವಾಗಿದೆ ಎಂದುಕೊಳ್ಳುವವರು, ಬೆಚ್ಚಗಿನ ನೀರನ್ನು ತುಪ್ಪದೊಂದಿಗೆ ಬೆರೆಸಿ ಕುಡಿಯುವುದು ತುಂಬಾ ಆರೋಗ್ಯಕರ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ,ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News