)
Tulsi Tea For Health: ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿ ಕಂಡು ಬರುತ್ತದೆ. ತುಳಸಿ ಸೇವನೆಯಿಂದ ಸಾಮಾನ್ಯ ನೆಗಡಿ, ಶೀತ, ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸಬಹುದು. ಇದರಿಂದ ಹಲವು ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ಅಲ್ಲದೆ, ತುಳಸಿ ಎಲೆಗಳ ಚಹಾ ತಯಾರಿಸಿ ಕುಡಿಯುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ತುಳಸಿ ಟೀ ತಯಾರಿಸುವುದು ಹೇಗೆ? ಅದನ್ನು ಯಾವ ಸಮಯದಲ್ಲಿ ಕುಡಿದರೆ ಆರೋಗ್ಯಕ್ಕೆ ಲಾಭವಾಗುತ್ತದೆ ಎಂಬುತನ್ನು ತಿಳಿಯೋಣ...
ತುಳಸಿ ಟೀ ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನಿರು ಹಾಕಿ ಅದರಲ್ಲಿ ತುಳಸಿ ದಳಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ನಿಮಗೆ ಅಗತ್ಯವಿದ್ದರೆ ಅದರಲ್ಲಿ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಬೆರೆಸಿ ಕುಡಿಯಿರಿ. ಕೊನೆಯಲ್ಲಿ ಚಹಾ ತಯಾರಿಸಲು ಹಾಕಿದ್ದ ತುಳಸಿ ಎಲೆಗಳನ್ನು ಕೂಡ ಜಗಿದು ತಿನ್ನಿರಿ.
ತುಳಸಿ ಟೀ ಕುಡಿಯಲು ಸರಿಯಾದ ಸಮಯ:
ತುಳಸಿ ಟೀ ಉತ್ತಮ ಪ್ರಯೋಜನಕ್ಕಾಗಿ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಲಾಭದಾಯಕವಾಗಿದೆ. ತುಳಸಿ ಟೀಯಲ್ಲಿರುವ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಆದರೂ ಇದರ ಪ್ರಮುಖ ಪ್ರಯೋಜನಗಳ ಬಗ್ಗೆ ತಿಲಿಯುವುದಾದರೆ...
ತುಳಸಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು:
ದೇಹ ಡಿಟಾಕ್ಸ್:
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಚಹಾ ಕುಡಿಯುವುದರಿಂದ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.
ಉಸಿರಾಟದ ಸಮಸ್ಯೆ:
ತುಳಸಿ ಟೀ ನಲ್ಲಿ ಉರಿಯೂತ ನಿವಾರಕ ಗುಣಗಳು ಹೆಚ್ಚಾಗಿರುವುದರಿಂದ ಇದು ಉಸಿರಾಟದ ಸಮಸ್ಯೆಗಳಿಂದ ದೂರ ಉಳಿಯಲು ಸಹಕಾರಿ ಆಗಿದೆ.
ಮಾನಸಿಕ ಆರೋಗ್ಯ:
ತುಳಸಿ ಟೀ ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು ಇದು ಒತ್ತಡ, ಆತಂಕದ ಭಾವನೆಯನ್ನು ನಿವಾರಿಸಿ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಕಾಂತಿಯುತ ಚರ್ಮ:
ತುಳಸಿ ಚಹಾವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಚರ್ಮದ ಸುಕ್ಕುಗಳನ್ನು ಹೋಗಲಾಡಿಸಿ ಕಾಂತಿಯುತ ಚರ್ಮವನ್ನು ಹೊಂದಲು ಸಹಕಾರಿ ಆಗಿದೆ.
ಹಾರ್ಮೋನ್ ಸಮತೋಲನ:
ಪ್ರತಿನಿತ್ಯ ತುಳಸಿ ಚಹಾ ಕುಡಿಯುವುದರಿಂದ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ ಹಾರ್ಮೋನುಗಳ ಸಮಸ್ಯೆಯಿಂದ ದೂರ ಉಳಿಯುವಲ್ಲಿ ಇದು ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ.
ಬಿಪಿ ಕಂಟ್ರೋಲ್:
ಬಿಪಿ ಸಮಸ್ಯೆ ಇದ್ದವರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಟೀ ಕುಡಿಯುವುದರಿಂದ ದೇಹದಲ್ಲಿ ರಕ್ತದ ಹರಿವು ಸುಧಾರಣೆಗೊಳ್ಳುವುದರ ಜೊತೆಗೆ ರಕ್ತದೊತ್ತಡ ಎಂದರೆ ಬಿಪಿ ನಿಯಂತ್ರಿಸಲು ಕೂಡ ಸಹಕಾರಿ ಆಗಿದೆ.
ಜೀರ್ಣಕ್ರಿಯೆ ಸುಧಾರಣೆ:
ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಟೀ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.