Benefits of Ghee: ಹಸುವಿನ ತುಪ್ಪ, ದೇಸೀ ತುಪ್ಪವನ್ನು ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ತುಪ್ಪವನ್ನು ತಿನ್ನುವುದರಿಂದ ಮಾತ್ರವಲ್ಲ ಪ್ರತಿ ದಿನ ಹೊಕ್ಕಳಿಗೆ ಒಂದೇ ಒಂದು ಹನಿ ತುಪ್ಪ ಸವರುವುದರಿಂದಲೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.

Desi Ghee Benefits: ತುಪ್ಪ ಅದರಲ್ಲೂ ದೇಸೀ ತುಪ್ಪ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ತುಪ್ಪವನ್ನು ತಿನ್ನುವುದರಿಂದ ಮಾತ್ರವಲ್ಲ ಒಂದು ಹನಿ ತುಪ್ಪವನ್ನು ದಿನ ಹೊಕ್ಕಳಿಗೆ ಲೇಪಿಸುವುದರಿಂದಲೂ ಉತ್ತಮ ಆರೋಗ್ಯ ಲಭಿಸುತ್ತದೆ. ಆಯುರ್ವೇದದ ಪ್ರಕಾರ, ಹೊಕ್ಕುಳನ್ನು ದೇಹದ ಕೇಂದ್ರ ಶಕ್ತಿಯ ಬಿಂದು ಎನ್ನಲಾಗುತ್ತದೆ. ಇದು ದೇಹದ ಒಳಗೆ ಆಂತರಿಕ ವ್ಯವಸ್ಥೆಗಳೊಂದಿಗೆ ಲೆಕ್ಕವಿಲ್ಲದಷ್ಟು ಕ್ಷೀಣತೆಗಳೊಂದಿಗೆ ಸಂಪರ್ಕ ಹೊಣಿದೃವುದರಿಂದ ಪ್ರತಿದಿನ ರಾತ್ರಿ ಮಲಗುವ ಮೊದಲು ಹೊಕ್ಕುಳಿಗೆ ಹನಿ ತುಪ್ಪ ಹಚ್ಚಿದ್ರೆ ಆರೋಗ್ಯ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
ಪ್ರತಿದಿನ ಹೊಕ್ಕುಳಿಗೆ ಹನಿ ತುಪ್ಪ ಹಚ್ಚಿದ್ರೆ ಸಿಗುವ 5 ಪ್ರಮುಖ ಲಾಭಗಳೆಂದರೆ...
* ಜೀರ್ಣಕ್ರಿಯೆಯಲ್ಲಿ ಸುಧಾರಣೆ:
ಪ್ರತಿದಿನ ಹೊಕ್ಕುಳಿನ ಭಾಗಕ್ಕೆ ಹನಿ ತುಪ್ಪ ಸವರುವುದರಿಂದ ಆ ಭಾಗವನ್ನು ಮಸಾಜ್ ಮಾಡುವುದರಿಂದ ಇದು ವೇಗಸ್ ನರವನ್ನು ಉತ್ತೇಜಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಇದು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
* ಚರ್ಮದ ಆರೈಕೆ:
ಸೆಬಾಸಿಯಸ್ ಗ್ರಂಥಿಗಳು ಮತ್ತು ಕ್ಯಾಪಿಲ್ಲರಿಗಳಲ್ಲಿ ಸೂಕ್ಷ್ಮವಾಗಿರುವ ತುಪ್ಪವನ್ನು ರಾತ್ರಿ ಮಲಗುವ ಮೊದಲು ಹೊಕ್ಕುಳ ಭಾಗಕ್ಕೆ ಸವರಿ ಹೊಟ್ಟೆಯ ಸುತ್ತಲಿನ ಚರ್ಮಕ್ಕೆ ಮಸಾಜ್ ಮಾಡಿ ಮಲಗುವುದರಿಂದ ಇದು ದೇಹವನ್ನು ವಿಶ್ರಾಂತಿ ಸ್ಥಿತಿಗೆ ತರಲು ಸಹಾಯಕವಾಗುವುದಷ್ಟೇ ಅಲ್ಲ, ಹೆಚ್ಚು ಶಾಂತ ಸ್ಥಿತಿಗೆ ಲಿಂಕ್ ಮಾಡಲಾದ ಪ್ಯಾರಾಸಿಂಪಥೆಟಿಕ್ ನರಗಳನ್ನು ಕೂಡ ಆಕ್ಟಿವ್ ಮಾಡುತ್ತದೆ.
* ಬಿರುಕು ತುಟಿ:
ಆಯುರ್ವೇದದ ಪ್ರಕಾರ, ಹೊಕ್ಕುಳ ಮತ್ತು ತುಟಿಗಳು ನೇರ ಸಂಪರ್ಕವನ್ನು ಹೊಂದಿಲ್ಲದಿದ್ದರೂ ರಾತ್ರಿಯಲ್ಲಿ ಹೊಕ್ಕುಳ ಭಾಗಕ್ಕೆ ತುಪ್ಪ ಸವರುವುದರಿಂದ ಇದು ದೇಹದಲ್ಲಿ ಜಲಸಂಚಯನ, ಕೊಬ್ಬಿನಾಮ್ಲ ಅಂಶವನ್ನು ಸುಧಾರಿಸುತ್ತದೆ. ಇದು ಒಟ್ಟಾರೆ ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುವುದಲ್ಲದೆ. ಬಿರುಕು ತುಟಿ ಸಮಸ್ಯೆಗೂ ಪರಿಹಾರ ನೀಡುತ್ತದೆ.
* ಮುಟ್ಟಿನ ಸಮಸ್ಯೆ:
ಋತುಚಕ್ರದ ಸಮಯದಲ್ಲಿ ಮಹಿಳೆಯರನ್ನು ಬಾಧಿಸುವ ಮುಟ್ಟಿನ ಸೆಳೆತವನ್ನು ನಿಭಾಯಿಸಲು ಕೂಡ ತುಪ್ಪ ಅತ್ಯುತ್ತಮ ಮದ್ದು. ಪ್ರತಿದಿನ ಹೊಕ್ಕುಳಿನ ಭಾಗಕ್ಕೆ ಹನಿ ತುಪ್ಪ ಸವರಿ ಮಸಾಜ್ ಮಾಡುವುದರಿಂದ ಇದು , ಕಿಬ್ಬೊಟ್ಟೆಯ ಸ್ನಾಯುಗಳಿಗೆ ಸೌಮ್ಯವಾದ ಉಷ್ಣತೆ ಮತ್ತು ವಿಶ್ರಾಂತಿಯನ್ನು ಒದಗಿಸುತ್ತದೆ. ಇದರಿಂದ ಮುಟ್ಟಿನ ಸೆಳೆತವೂ ಕಡಿಮೆಯಾಗುತ್ತದೆ.
* ಶಾಂತ ಮನಸ್ಸು:
ದೇಹದ ಶಕ್ತಿ ಕೇಂದ್ರ ಎನ್ನಲಾಗುವ ಹೊಕ್ಕುಳ ಭಾಗಕ್ಕೆ ತುಪ್ಪ ಸವರುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.