Dry Fruits Side Effect: ಡ್ರೈಪ್ರೂಟ್ಸ್ ಆರೋಗ್ಯಕ್ಕೆ ಲಾಭದಾಯಕ. ಪ್ರತಿನಿತ್ಯ ವೈವಿದ್ಯಮಯ ಡ್ರೈಪ್ರೂಟ್ಸ್ಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳು ಲಭ್ಯವಾಗುತ್ತವೆ. ಆದರೆ, ಎಲ್ಲರಿಗೂ ಈ ನಿಯಮ ಹೊಂದಿಕೆಯಾಗುವುದಿಲ್ಲ. ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಹೋರಾಡುತ್ತಿರುವವರಿಗೆ ಡ್ರೈಪ್ರೂಟ್ಸ್ಗಳ ಸೇವನೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

Who Should Avoid Dry Fruits: ಡ್ರೈಫ್ರೂಟ್ಸ್ ಅಥವಾ ಒಣ ಹಣ್ಣುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಇವು ದೇಹಕ್ಕೆ ಶಕ್ತಿಯನ್ನು ನೀಡುವ ಮೂಲಕ ಆರೋಗ್ಯವಂತ ದೇಹವನ್ನು ವೃದ್ದಿಸಿಕೊಳ್ಳಲು ಸಹಾಯಕವಾಗಿವೆ. ನಮ್ಮ ದೈನಂದಿನ ಆಹಾರದಲ್ಲಿ ಇವುಗಳ ಬಳಕೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ, ಕೆಲವು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವವರಿಗೆ ಡ್ರೈಫ್ರೂಟ್ಸ್ ಸೇವನೆ ಅಪಾಯಕಾರಿ ಆಗಿದ್ದು, ಅಂತಹವರು ಯಾವುದೇ ಕಾರಣಕ್ಕೂ ಇವುಗಳನ್ನು ಸೇವಿಸಬಾರದು ಎನ್ನಲಾಗುತ್ತದೆ.
ಡ್ರೈಪ್ರೂಟ್ಸ್ ಗಳ ಪಟ್ಟಿಯಲ್ಲಿ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ವಾಲ್ನಟ್ಸ್, ಅಂಜೂರ, ಖರ್ಜೂರ, ಗೋಡಂಬಿ ಮತ್ತು ಪಿಸ್ತಾ ಮುಂತಾದ ಒಣಹಣ್ಣುಗಳು ಬರುತ್ತವೆ. ಇವುಗಳನ್ನು ಆರೋಗ್ಯಕ್ಕೆ "ಸೂಪರ್ ಫುಡ್ಗಳು" ಎಂದು ಕರೆಯಲಾಗುತ್ತದೆ. ಈ ಒಣ ಹಣ್ಣುಗಳು ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತವವೆ. ಇವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಆದರೆ ಕೆಲವು ಜನರು ಇವುಗಳನ್ನು ತಿನ್ನಬಾರದು ಇಲ್ಲವೇ ಮಿತಿಯಂದ ಸೇವಿಸಬೇಕು. ಇಲ್ಲದಿದ್ದರೆ, ಇವುಗಳಿಂದ ಆರೋಗ್ಯಕ್ಕೆ ಲಾಭವಾಗುವ ಬದಲಿಗೆ ಸಮಸ್ಯೆಗಳು ಉಲ್ಬಣಿಸಬಹುದು.
ಹೌದು, ಯಾವ ಸಮಸ್ಯೆ ಇದ್ದವರು ಡ್ರೈಪ್ರೂಟ್ಸ್ಗಳನ್ನು ತಿನ್ನಬಾರದು ಅಥವಾ ತಿಂದರೆ ಏನಾಗುತ್ತದೆ ಎಂಬುವುದರ ಬಗ್ಗೆ ತಿಳಿಯಲು ಮುಂದೆ ಓದಿ...
ಅಲರ್ಜಿ:
ಸಾಮಾನ್ಯವಾಗಿ ಅಲರ್ಜೀ ಇರುವವರು ಈ ಒಣಹಣ್ಣುಗಳನ್ನು ತಿನ್ನಬಾರದು. ಅದರಲ್ಲೂ ವಿಶೇಷವಾಗಿ ಗೋಡಂಬಿ, ಬಾದಾಮಿ ಮತ್ತು ವಾಲ್ನಟ್ನಂತಹ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಾರದು. ಒಂದೊಮ್ಮೆ ಇವನ್ನೂ ಸೇವಿಸಿದರೆ ತುರಿಕೆ, ಊತ, ಉಸಿರಾಟದ ತೊಂದರೆಗಳು ಅಥವಾ ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳಿಗೆ (ಅನಾಫಿಲ್ಯಾಕ್ಸಿಸ್) ಕಾರಣವಾಗಬಹುದು.
ತೂಕ ಇಳಿಕೆ:
ಡ್ರೈ ಫ್ರೋಟ್ಸ್ ಆರೋಗ್ಯಕ್ಕೆ ಉತ್ತಮವೇ ಆದರೂ ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಅಡಕವಾಗಿರುತ್ತವೆ. ಒಂದೊಮ್ಮೆ ನೀವೇನದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಒಣಹಣ್ಣುಗಳನ್ನು ಅದಷ್ಟು ತ್ಯಜಿಸಿ ಇಲ್ಲವಾದರೆ ಇದು ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು
ಡಯಾಬಿಟಿಸ್:
ಒಣ ಹಣ್ಣುಗಳಾದ ಒಣದ್ರಾಕ್ಷಿ, ಖರ್ಜೂರ ಮತ್ತು ಅಂಜೂರಗಳು ನೈಸರ್ಗಿಕವಾಗಿಯೇ ಸಕ್ಕರೆಯಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ಶುಗರ್ ಇದ್ದವರು ಇವುಗಳನ್ನು ಸೇವಿಸಿದಾಗ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗಬಹದು. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವವರು ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಅಥವಾ ವೈದ್ಯರ ಮಾರ್ಗದರ್ಶನದಲ್ಲಿ ಸೇವಿಸುವುದು ಒಳಿತು.
ಜೀರ್ಣಕ್ರಿಯೆ:
ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಮತ್ತುಇನ್ನಿತರ ಸಮಸ್ಯೆ ಇರುವವರು ಈ ರೀತಿಯ ಒಣಹಣ್ಣುಗಳನ್ನು ತಿನ್ನುವ ಮೊದಲು ವೈದ್ಯರಿಂದ ಸೂಕ್ತ ಸಲಹೆ ಪಡೆಯುವುದು ಉತ್ತಮವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.