World Hepatitis Day 2025:ದೇಹದಲ್ಲಿ ಹೀಗಾಗುತ್ತಿದ್ದರೆ ಅದು ಹೆಪಟೈಟಿಸ್ ಲಕ್ಷಣ : ತಕ್ಷಣವೇ ಗುರುತಿಸಿಕೊಂಡರೆ ಅಪಾಯದಿಂದ ಪಾರು

ಹೆಪಟೈಟಿಸ್‌ ಎಂಬುವುದು ಒಂದು ಲಿವರ್‌ಗೆ ಸಂಬಂಧಿಸಿದ ಖಾಯಿಲೆ. ಇದರ ಬಗ್ಗೆ ಅಷ್ಟಾಗಿ ಜನರಿಗೆ ಅರಿವಿಲ್ಲದ ಕಾರಣ ಈ ಖಾಯಿಲೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ (World Hepatitis Day)ವನ್ನು ಆಚರಿಸಲಾಗುತ್ತದೆ.

Written by - Ranjitha R K | Last Updated : Jul 28, 2025, 03:12 PM IST
  • ಹೆಪಟೈಟಿಸ್ ಪದದದ ಅರ್ಥ "ಯಕೃತ್‌ನ ಉರಿಯೂತ".
  • ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ ಆಚರಣೆ
  • ಹೆಪಟೈಟಿಸ್‌ನಿಂದ ಲಿವರ್ ತನ್ನ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಅಸಾಧ್ಯವಾಗುತ್ತದೆ.
World Hepatitis Day 2025:ದೇಹದಲ್ಲಿ ಹೀಗಾಗುತ್ತಿದ್ದರೆ ಅದು ಹೆಪಟೈಟಿಸ್ ಲಕ್ಷಣ : ತಕ್ಷಣವೇ ಗುರುತಿಸಿಕೊಂಡರೆ ಅಪಾಯದಿಂದ ಪಾರು

Add Zee News as a Preferred Source

ಹೆಪಟೈಟಿಸ್ ಪದದದ ಅರ್ಥ "ಯಕೃತ್‌ನ ಉರಿಯೂತ". ಸಾಮಾನ್ಯವಾಗಿ ಇದು ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಅನವಶ್ಯಕ ಔಷಧಿಗಳ ಸೇವನೆ, ಮಾದಕವಸ್ತುಗಳ ಸೇವನೆ, ಮದ್ಯಪಾನ ಅಥವಾ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು ಹೆಪಟೈಟಿಸ್‌ ಕಾಣಿಸಿಕೊಳ್ಳಲು ಪ್ರಮುಖ ಕಾರಣ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಇದು ವೈರಲ್ ಇನ್ಫೆಕ್ಷನ್ ನಿಂದ ಬಾಧಿಸುತ್ತದೆ. ಹೆಪಟೈಟಿಸ್‌ನಿಂದ ಯಕೃತ್ (ಲಿವರ್)‌ ನಲ್ಲಿ ಉರಿಯೂತ ಕಾಣಿಸಿಕೊಂಡು ಲಿವರ್ ತನ್ನ ಕೆಲಸಗಳನ್ನು ಸರಿಯಾಗಿ ನಿರ್ವಹಿಸುವುದು ಕಷ್ಟವಾಗುತ್ತದೆ. ಯಕೃತ್ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ, ಪಿತ್ತರಸ ನಿರ್ಮಾಣ, ರಕ್ತದ ಶುದ್ಧೀಕರಣ ಕಾರ್ಯಗಳನ್ನು ನಿರ್ವಹಿಸುತ್ತದೆ.

ಹೆಪಟೈಟಿಸ್‌ನ ಪ್ರಕಾರಗಳು:

ಹೆಪಟೈಟಿಸ್‌ನಲ್ಲಿ ಐದು ಪ್ರಮುಖ ಪ್ರಕಾರಗಳಿವೆ – A, B, C, D ಮತ್ತು E. ಈ ಪ್ರತಿಯೊಂದು ಪ್ರಕಾರವು ವಿಭಿನ್ನ ರೀತಿಯಲ್ಲಿ ಹರಡುತ್ತದೆ ತನ್ನದೇ ಆದ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ಯೂಟ್ಯೂಬ್‌ನಲ್ಲಿ ಫ್ರುಟ್‌ ಜ್ಯೂಸ್‌ ಡಯಟ್ ವಿಡಿಯೋ ನೋಡಿ ಪ್ರಾಣ ಕಳೆದುಕೊಂಡ ಯುವಕ..!!

ಹೆಪಟೈಟಿಸ್ A:

ಹರಡುವುದು: ಮಲದ ಮೂಲಕ – ಅಶುದ್ಧ ಆಹಾರ ಅಥವಾ ನೀರಿನಿಂದ

ಸ್ವಭಾವ: ತಾತ್ಕಾಲಿಕ, ಸಾಮಾನ್ಯವಾಗಿ ಗಂಭೀರವಲ್ಲ

ತಡೆಗಟ್ಟುವಿಕೆ: ಲಸಿಕೆ ಲಭ್ಯವಿದೆ, ಶುಚಿತ್ವ ಮುಖ್ಯ

ಹೆಪಟೈಟಿಸ್ B:

ಹರಡುವುದು: ರಕ್ತ, ಲೈಂಗಿಕ ಸಂಪರ್ಕ, ತಾಯಿಯಿಂದ ಮಗುವಿಗೆ

ಸ್ವಭಾವ: ತೀವ್ರ ಹಾಗೂ ದೀರ್ಘಕಾಲದವರ್ಗೆಗೆ ಬಾಧಿಸಬಹುದು.

ಪರಿಣಾಮಗಳು: ಲಿವರ್ ಕ್ಯಾನ್ಸರ್, ಸಿರೋಷಿಸ್ (ಲಿವರ್ ನಾಶ)

ತಡೆಗಟ್ಟುವಿಕೆ: ಶಕ್ತಿಶಾಲಿ ಲಸಿಕೆ ಲಭ್ಯವಿದೆ

ಹೆಪಟೈಟಿಸ್ C:

ಹರಡುವುದು: ರಕ್ತದ ಸಂಪರ್ಕ – ಇಂಜೆಕ್ಷನ್, ಟ್ಯಾಟೂ, ಬ್ಲಡ್ ಡೊನೇಶನ್

ಸ್ವಭಾವ: ಬಹುತೇಕ ದೀರ್ಘಕಾಲದವೆಗೆ ಕಾಡುತ್ತದೆ. (chronic), ಹೆಚ್ಚಾಗಿ ಲಕ್ಷಣವಿಲ್ಲದೇ ಇರುತ್ತದೆ

ಪರಿಣಾಮಗಳು: ಯಕೃತ್ ಕ್ಯಾನ್ಸರ್, ಯಕೃತ್ ವೈಫಲ್ಯ

ತಡೆಗಟ್ಟುವಿಕೆ: ಲಸಿಕೆ ಇಲ್ಲ; ಆದರೆ ಚಿಕಿತ್ಸೆ ಲಭ್ಯವಿದೆ

ಹೆಪಟೈಟಿಸ್ D:

ಹರಡುವುದು: ಹೆಪಟೈಟಿಸ್ B ಇರುವ ವ್ಯಕ್ತಿಯಲ್ಲಷ್ಟೆ ಹರಡುತ್ತದೆ

ಸ್ವಭಾವ: ಹೆಚ್ಚು ಅಪಾಯಕಾರಿಯಾದ ಸೋಂಕು

ತಡೆಗಟ್ಟುವಿಕೆ: B ಲಸಿಕೆ ಹಾಕಿಸಿಕೊಂಡರೆ D ತಡೆಗೊಳ್ಳಬಹುದು

ಹೆಪಟೈಟಿಸ್ E:

ಹರಡುವುದು: ಅಶುದ್ಧ ನೀರಿನಿಂದ

ಸ್ವಭಾವ: ತಾತ್ಕಾಲಿಕ, ಗರ್ಭಿಣಿಯರಿಗೆ ಹೆಚ್ಚು ಅಪಾಯ

ತಡೆಗಟ್ಟುವಿಕೆ: ಶುದ್ಧ ನೀರಿನ ಬಳಕೆ ಮುಖ್ಯ

ಹೆಪಟೈಟಿಸ್ ಹರಡುವ ಮಾರ್ಗಗಳು :

ಸಾಮಾನ್ಯವಾಗಿ ಹೆಪಟೈಟಿಸ್‌ ಒಬ್ಬ ಸೋಂಕಿತ ವ್ಯಕ್ತಿಯ ರಕ್ತದ ಸಂಪರ್ಕದಿಂದ ಇನ್ನೊಬ್ಬರಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಟ್ಯಾಟೂ, ಶೇವಿಂಗ್, ಇಂಜೆಕ್ಷನ್‌ಗಳಿಗೆ ಬಳಸುವ ಅಶುದ್ಧ ಉಪಕರಣಗಳಿಂದ, ತಾಯಿಯಿಂದ ಗರ್ಭದಲ್ಲಿ ಅಥವಾ ಡೆಲಿವರಿಯ ವೇಳೆ ಮಗುವಿಗೆ ಮತ್ತು ಅಶುದ್ಧ ನೀರು ಮತ್ತು ಆಹಾರ ಸೇವನೆಯಿಂದ ಹರಡುತ್ತದೆ.

ಇದನ್ನೂ ಓದಿ : ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಸಂಧಿವಾತ ಆಗಿರ್ಬೋದು: ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ...

ಲಕ್ಷಣಗಳು (Symptoms):

ಹೆಪಟೈಟಿಸ್‌ನ ಲಕ್ಷಣಗಳು ಕೆಳಗಿನಂತಿರುತ್ತವೆ :

ಜ್ವರ, ವಾಂತಿ, ಹೊಟ್ಟೆ ನೋವು

ಹಸಿವು ಕಡಿಮೆಯಾಗುವುದು

ಪಿತ್ತಸ್ರಾವ ಹೆಚ್ಚಾಗಿ ಮೂತ್ರ, ಕಣ್ಣು ಮತ್ತು ಚರ್ಮ ಹಳದಿಯಾಗುವುದು (ಜಾಂಡಿಸ್)

ಮೂತ್ರ ಬೂದು ಬಣ್ಣದಲ್ಲಿ ಕಾಣುವುದು

ಕೆಲವು ಸಂದರ್ಭಗಳಲ್ಲಿ ರಕ್ತಸ್ರಾವ

ಹೆಪಟೈಟಿಸ್‌ ತಡೆಗಟ್ಟುವಿಕೆ ಹೇಗೆ ಸಾಧ್ಯ? :

ಈಗಿನ ಅಭಿವೃದ್ದಿ ಹೊಂದಿದ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಕಾಯಿಲೆಗಾದರೂ ಸುಲಭವಾಗಿ ಲಸಿಕೆ ಮತ್ತು ಜಿಕಿತ್ಸೆಗಳನ್ನು ಕಂಡುಕೊಳ್ಳಬಹುದು. ಅದೇ ರೀತಿ ಈ ಮಾರಕ ಹೆಪಟೈಟಿಸ್‌ ಖಾಯಿಲೆಗೂ ಇದರ ಗುಣಲಕ್ಷಣಗಳಿಗನುಸಾರವಾಗಿ A ಮತ್ತು B ಲಸಿಕೆಗಳು ಲಭ್ಯವಿದೆ. ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.

ಶುದ್ಧ ನೀರು ಮತ್ತು ಆಹಾರ ಸೇವನೆ.

ಲೈಂಗಿಕ ನಡವಳಿಕೆಯಲ್ಲಿ ಎಚ್ಚರಿಕೆ.

ಇಂಜೆಕ್ಷನ್‌ ಬಳಸುವಾಗ ಹೊಸ ಸೂಜಿಗಳ ಬಳಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಸೊಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವುದು ಅಗತ್ಯ.

ಇದನ್ನೂ ಓದಿ : ನಮ್ಮ ದೇಹದ ಈ ಅಂಗವು ಸಾವಿನ ನಂತರವೂ 10 ವರ್ಷಗಳ ಕಾಲ ಜೀವಂತವಾಗಿರುತ್ತದೆ..! ಯಾವುದು ಗೊತ್ತೆ..?

ಚಿಕಿತ್ಸೆ ಏನು?

A ಮತ್ತು E ಪ್ರಕಾರಗಳು ಸ್ವತಃ ಗುಣಮುಖವಾಗಬಹುದು – ಸಮರ್ಥ ವಿಶ್ರಾಂತಿ, ಸರಿಯಾದ ಆಹಾರ ಹಾಗೂ ನೀರಿನ ಸೇವನೆ ಮುಖ್ಯ. ಇನ್ನು B ಮತ್ತು C ಪ್ರಕಾರದ ರೋಗ ಲಕ್ಷಣಗಳಿಗೆ ಚಿಕಿತ್ಸೆ ಲಭ್ಯವಿದೆ. Bಗೆ ಲಸಿಕೆ ಇದೆ. Cಗೆ ನಿರ್ದಿಷ್ಟವಾದ ಔಷಧಗಳು ಈಗ ಬಹಳ ಪರಿಣಾಮಕಾರಿಯಾಗಿವೆ. ಇದರ ಕುರಿತು ಪ್ರತಿಯೊಬ್ಬರು ಜಾಗೃತಿ ಹೊಂದಿರುವುದು ಬಹಳ ಮುಖ್ಯ ಇಲ್ಲವಾದರೆ ಚಿಕಿತ್ಸೆ ವಿಳಂಬವಾಗಿ ಲಿವರ್ ಡ್ಯಾಮೇಜ್ ಆಗಬಹುದು.

ಹೆಪಟೈಟಿಸ್ ಎಂಬುದು ಬಹುಮಟ್ಟಿಗೆ ತಡೆಯಬಹುದಾದ ಕಾಯಿಲೆಯಾಗಿದೆ. ಆದರೆ ತಿಳಿವಳಿಕೆ, ಮುಂಚಿತ ಪತ್ತೆ, ಸರಿಯಾದ ಚಿಕಿತ್ಸೆ ಇಲ್ಲದಿದ್ದರೆ ಇದು ಜೀವಕ್ಕೇ ಕುತ್ತು ತರಬಹುದು. ಲಸಿಕೆ, ಶುದ್ಧ ಆಹಾರ, ಸುರಕ್ಷಿತ ಜೀವನಶೈಲಿ ಮತ್ತು ಜಾಗೃತಿ – ಈ ನಾಲ್ಕು ಅಸ್ತ್ರಗಳೊಂದಿಗೆ ನಾವು ಹೆಪಟೈಟಿಸ್ ವಿರುದ್ಧ ಹೋರಾಡಬಹುದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News