Natural constipation remedies
: ಹೊಟ್ಟೆಯ ಆರೋಗ್ಯವೆಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಆರೋಗ್ಯಕಾರಿ ಆಹಾರಪದ್ಧತಿ, ಜೀವನಶೈಲಿಯನ್ನ ಅನುಸರಿಸುವುದು ಬಹುಮುಖ್ಯ. ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದಿಂದ ಬೊಜ್ಜು, ಮಧುಮೇಹ ಮತ್ತು ಹೃದಯ ಕಾಯಿಲೆಗಳ ಅಪಾಯ ಕಾಣಿಸಿಕೊಳ್ಳುವ ಅಪಾಯದ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗುತ್ತವೆ. ಈ ಪೈಕಿ ಮಲಬದ್ಧತೆ ಅನೇಕರನ್ನ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಕೆಲವು ಆಹಾರಗಳನ್ನ ಸೇವಿಸುವುದರಿಂದ ನೀವು ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು...
ಇದನ್ನೂ ಓದಿ: ಕ್ಯಾನ್ಸರ್ ಗುಣಪಡಿಸುವ ಅಮೃತ ಈ ಹಣ್ಣು... ವರ್ಷಕ್ಕೆ ಒಮ್ಮೆ ತಿನ್ನಿ ಸಾಕು ರಕ್ತದಲ್ಲಿನ ಕೊಲೆಸ್ಟ್ರಾಲ್ ಜನ್ಮವಿಡೀ ಹೆಚ್ಚಾಗಲ್ಲ!
ಕಿವಿ ಹಣ್ಣು: ಕಿವಿ ಹಣ್ಣು ಫೈಬರ್ ಮತ್ತು ಪಾಲಿಫಿನಾಲ್‌ಗಳನ್ನ ಹೊಂದಿದ್ದು, ಮಲಬದ್ಧತೆಯನ್ನ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದು ಮಲವನ್ನ ಮೃದುಗೊಳಿಸಲು ಸಹ ಸಹಾಯ ಮಾಡುತ್ತದೆ.
ಸೇಬಿನ ಜ್ಯೂಸ್: ಸೇಬಿನ ರಸವು ಸೋರ್ಬಿಟೋಲ್ ಎಂಬ ನೈಸರ್ಗಿಕ ಪೋಷಕಾಂಶದ ಉಪಸ್ಥಿತಿಯಿಂದ ಮಲಬದ್ಧತೆಯನ್ನ ನಿವಾರಿಸಲು ಸಹಾಯ ಮಾಡುತ್ತದೆ.
ಬೆರ್ರಿ ಹಣ್ಣುಗಳು: ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬೆರ್ರಿ ಹಣ್ಣುಗಳು ಮಲಬದ್ಧತೆಯನ್ನ ತಡೆಯಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನ ನಿವಾರಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು: ಒಂದು ಬಾಳೆಹಣ್ಣಿನಲ್ಲಿ ಸುಮಾರು 3 ಗ್ರಾಂ ಫೈಬರ್ ಇದ್ದು, ಇದು ಮಲಬದ್ಧತೆಯನ್ನ ತಡೆಯಲು ಸಹಾಯ ಮಾಡುತ್ತದೆ.
ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ನಾರಿನಂಶ ಹೇರಳವಾಗಿದ್ದು, ಮಲಬದ್ಧತೆಯನ್ನ ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿಮಗೆ ಉಳಿದ ಅನ್ನ ತಿನ್ನುವ ಅಭ್ಯಾಸವಿದೆಯೇ? ಖಂಡಿತ ನೀವು ಇದನ್ನ ತಿಳಿಯಲೇಬೇಕು...
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)









