)
High blood pressure: ಒತ್ತಡ, ಅನಾರೋಗ್ಯಕರ ಆಹಾರ, 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡದಿರುವುದು, ಬೊಜ್ಜು ಮುಂತಾದ ಅಂಶಗಳು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗಬಹುದು. ಕೆಲವು ಸೂಪರ್ ಫುಡ್ಗಳ ಸೇವನೆಯಿಂದ ಅಧಿಕ ರಕ್ತದೊತ್ತಡಕ್ಕೆ ಪರಿಹಾರ ಪಡೆಯಬಹುದು. ಇವುಗಳನ್ನ ಸೇವಿಸುವುದರಿಂದ ನೀವು ರಕ್ತದೊತ್ತಡವನ್ನ ಸುಲಭವಾಗಿ ನಿಯಂತ್ರಿಸಬಹುದು.
ರಕ್ತದೊತ್ತಡವನ್ನ ನಿಯಂತ್ರಿಸಲು ಕಿತ್ತಳೆ, ನಿಂಬೆ, ನೆಲ್ಲಿಕಾಯಿ ಮತ್ತು ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸಬಹುದು. ಇಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ʼಸಿʼ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ಪೋಷಕಾಂಶಗಳನ್ನ ಒಳಗೊಂಡಿರುತ್ತವೆ, ಇದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯನ್ನ ರಕ್ತದೊತ್ತಡ ಕಡಿಮೆ ಮಾಡಲು ಸಹ ಸೇವಿಸಬಹುದು. ಸೇಬುಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನ ಸಹ ನಿಯಂತ್ರಿಸಬಹುದು. ಆದರೆ ಉತ್ತಮ ಫಲಿತಾಂಶ ಪಡೆಯಲು ಈ ಸೂಪರ್ ಫುಡ್ಗಳನ್ನ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯ.
ಅಧಿಕ ರಕ್ತದೊತ್ತಡವನ್ನ ನಿಯಂತ್ರಿಸಲು ಬಯಸಿದರೆ, ವೈದ್ಯರನ್ನು ಸಂಪರ್ಕಿಸಿದ ನಂತರ ನೀವು ಅಗಸೆ ಬೀಜಗಳನ್ನ ಸಹ ತಿನ್ನಬಹುದು. ಅಗಸೆ ಬೀಜಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಅರ್ಜಿನೈನ್ನಂತಹ ಪೋಷಕಾಂಶಗಳನ್ನ ಹೊಂದಿರುತ್ತವೆ. ಇದು ಅಧಿಕ ರಕ್ತದೊತ್ತಡವನ್ನ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಅಧಿಕ ರಕ್ತದೊತ್ತಡದ ಸಮಸ್ಯೆಯನ್ನ ತೊಡೆದುಹಾಕಲು, ನೀವು ಪೊಟ್ಯಾಸಿಯಮ್ ಭರಿತ ಬಾಳೆಹಣ್ಣನ್ನ ನಿಮ್ಮ ಆಹಾರ ಯೋಜನೆಯ ಭಾಗವಾಗಿ ಮಾಡಿಕೊಳ್ಳಬಹುದು. ನಿಯಮಿತವಾಗಿ ಬಾಳೆಹಣ್ಣು ಸೇವನೆಯಿಂದ ನಿಮ್ಮ ರಕ್ತದೊತ್ತಡ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)