)
ಭಾರತದಲ್ಲಿ ಕಾಲಮಾನಕ್ಕೆ ತಕ್ಕಂತೆ ಆಹಾರ ತಿನ್ನುವುದು ಮೊದಲಿನಿಂದಲೂ ನಡೆದು ಬಂದಿದೆ. ಮಳೆಗಾಲ, ಬೇಸಿಗೆ ಕಾಲ ಹಾಗೂ ಚಳಿಗಾಲ ಈ ಮೂರು ಕಾಲಮಾನಕ್ಕೆ ಸರಿ ಹೊಂದುವ ಆಹಾರ, ಪಾನೀಯ ಸೇವನೆ ಮಾಡುತ್ತಾರೆ. ಸದ್ಯ ಈಗ ಚಳಿಗಾಲ ಆಗಿದ್ದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಬೇಕಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಆದರೆ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಲು ನೆಲ್ಲಿಕಾಯಿನ ನೀವು ಆಯ್ಕೆ ಮಾಡಿಕೊಳ್ಳಬಹುದು.
ನೆಲ್ಲಿಕಾಯಿಯಲ್ಲಿ ಶಕ್ತಿ, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಅನೇಕ ಅಗತ್ಯ ವಿಟಮಿನ್ಗಳು ಇರುತ್ತವೆ. ಹಿಂದಿನ ಕಾಲದಿಂದಲೂ ನೆಲ್ಲಿಕಾಯಿನ ಆರೋಗ್ಯಕ್ಕಾಗಿ ಬಳಕೆ ಮಾಡಲಾಗುತ್ತಿದೆ. ನೆಲ್ಲಿಕಾಯಿ ತಿನ್ನುವುದರಿಂದ ನಮಗೆ ಸಾಕಷ್ಟು ಆರೋಗ್ಯ ಪ್ರಯೋಜನಾಗಳು ಲಭ್ಯವಾಗುತ್ತವೆ. ಇದರಿಂದ ನಮಗೆ ಯಾವೆಲ್ಲಾ ರೀತಿಯಲ್ಲಿ ಅನುಕೂಲಗಳು ಇವೆ ಎಂದು ಹೇಳುವುದಾದರೆ..
ಕ್ಯಾನ್ಸರ್ಕಾರಕ ಕೋಶಗಳನ್ನು ಆರಂಭದ ಹಂತದಲ್ಲೀಯೇ ಕೊಲ್ಲುತ್ತದೆ. ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ನೆಲ್ಲಿಕಾಯಿ ಪಾತ್ರ ಅತಿ ಮುಖ್ಯವಾಗಿದೆ. ಏಕೆಂದರೆ ಇದರಲ್ಲಿ ರೇಡಿಯೋ, ಕೀಮೋ ಮಾಡ್ಯುಲೇಟರ್, ಉರಿಯೂತ ವಿರೋಧಿ, ಆಂಟಿ ಮ್ಯುಟಾಜೆನಿಕ್, ಫ್ರೀ ರಾಡಿಕಲ್ ಸ್ಕ್ಯಾವೆಂಜಿಂಗ್ನಂತಹ ಜೈವಿಕ ಗುಣಗಳು ಇವೆ. ಇವು ಕ್ಯಾನ್ಸರ್ ವಿರುದ್ಧ ಬಲವಾಗಿ ಹೋರಾಡುತ್ತದೆ. ಇಷ್ಟೇ ಅಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನೆಲ್ಲಿಕಾಯಿ ನಿಯಂತ್ರಿಸುತ್ತದೆ.
ನೆಲ್ಲಿ ಕಾಯಿಯಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ಗ್ಯಾಸ್ಟ್ರಿಕ್ಟ್ ಅನ್ನು ನಿಯಂತ್ರಣ ಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿನ ಆಹಾರ ಉತ್ತಮವಾದ ರೀತಿಯಲ್ಲಿ ಜೀರ್ಣವಾಗುತ್ತದೆ. ಫೈಬರ್ ಹೆಚ್ಚು ಇರುವುದರಿಂದ ಮಲಬದ್ಧತೆಯನ್ನು ನಿಯಂತ್ರಣ ಮಾಡುತ್ತದೆ. ಯಾರಿಗೆ ಆಗಲಿ ಜೀರ್ಣಕ್ರಿಯೆ ಸಮಸ್ಯೆಗಳು, ತೊಂದರೆಗಳು ಇದ್ದರೇ ಇಂದಿನಿಂದಲೇ ಈ ನೆಲ್ಲಿಕಾಯಿಗಳನ್ನು ತಿನ್ನಲು ಆರಂಭ ಮಾಡಹುದು. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ನೆಲ್ಲಿಕಾಯಿಯು ಚಯಾಪಚಯವನ್ನು ಉತ್ತಮ ರೀತಿಯಲ್ಲಿ ಇರುವಂತೆ ಮಾಡುತ್ತದೆ
ಮಧುಮೇಹ ಹೊಂದಿರುವವರ ದೇಹದಲ್ಲಿ ಸಕ್ಕರೆ ಪ್ರಮಾನವನ್ನು ಸಮತೋಲನಗೊಳಿಸುತ್ತದೆ
ನೆಲ್ಲಿಕಾಯಿಯು ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕಕ್ಕೆ ಸಹಾಯ ಮಾಡುವ ಗುಣ ಹೊಂದಿದೆ
ಮಹಿಳೆಯರ ಋತುಚಕ್ರದ ಸಮಯದಲ್ಲಿ ವಿಷ ಕಣಗಳನ್ನು ಹೊರ ಹಾಕಲು ಸಹಾಐ ಮಾಡುತ್ತದೆ