)
Curd Health Benefits: ಮೊಸರಿನ ನಿಯಮಿತ ಸೇವನೆಯು ದೇಹಕ್ಕೆ ಅಮೃತವೆಂದು ಪರಿಗಣಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಸಾವಿರಾರು ವರ್ಷಗಳಿಂದ ಬಳಸಲ್ಪಡುವ ಮೊಸರು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ವಿಟಮಿನ್ ಬಿ ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿಯೇ, ದೈನಂದಿನ ಆಹಾರದಲ್ಲಿ ಮೊಸರಿನ ಬಳಕೆ, ಪ್ರತಿದಿನ ಅರ್ಧ ಕಪ್ ಮೊಸರನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.
ಮೊಸರಿನ ಸೇವನೆಯಿಂದ ಆರೋಗ್ಯಕ್ಕಿರುವ ಪ್ರಯೋಜನಗಳೆಂದರೆ...
* ಹಲ್ಲು ಮತ್ತು ಮೂಳೆಗಳಿಗೆ ಬಲ:
ಮೊಸರಿನಲ್ಲಿ ಹಾಲಿಗಿಂತ 18 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದ್ದು ಇದು ಹಲ್ಲು ಮತ್ತು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
* ಜೀರ್ಣಕ್ರಿಯೆ:
ಹಾಲು ಮೊಸರಾಗಿ ಬದಲಾದಾಗ, ಅದರ ಸಕ್ಕರೆ ಆಮ್ಲವಾಗಿ ಬದಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದರ ಜೊತೆಗೆ ಹಸಿವು ಹೆಚ್ಚಾಗುತ್ತದೆ.
* ರಕ್ತಹೀನತೆ:
ಮೊಸರಿನ ಸೇವನೆಯು ದೇಹದಲ್ಲಿ ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ದೌರ್ಬಲ್ಯವನ್ನು ಸಹ ನಿವಾರಿಸುತ್ತದೆ.
* ಹೊಟ್ಟೆಯ ಶಾಖ ನಿವಾರಣೆ:
ಮೊಸರನ್ನು ಕಡೆದು ಬಳಸುವುದರಿಂದ ಇದು ಹೊಟ್ಟೆಯಿಂದ ಶಾಖವನ್ನು ನಿವಾರಿಸುತ್ತದೆ. ಅತಿಸಾರ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
* ಕರುಳಿನ ಕಾಯಿಲೆ:
ಪ್ರತಿದಿನ ಮೊಸರು ತಿನ್ನುವುದರಿಂದ ಇದು ಕರುಳಿನ ಸಮಸ್ಯೆಗಳನ್ನು ಶಮನಗೊಳಿಸುತ್ತದೆ.
* ಹೃದಯದ ಕಾಯಿಲೆ:
ಪ್ರತಿದಿನ ಅರ್ಧ ಕಪ್ ಮೊಸರು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿದ್ದು ಹೃದಯ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು.
* ಕೀಲು ನೋವು:
ಮೊಸರಿನಲ್ಲಿ ಇಂಗು ಬೆರೆಸಿ ತಿನ್ನುವುದರಿಂದ ಇದು ಕೀಲು ನೋವಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.