)
Ginger For Health: ಶುಂಠಿ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆಯುರ್ವೇದದಲ್ಲಿ ಶತಮಾನಗಳಿಂದ ಬಳಸಲ್ಪಡುವ ಜಿಂಜರಾಲ್ ಹಲವು ಅರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಆಯುರ್ವೇದ ತಜ್ಞರ ಪ್ರಕಾರ, ಪ್ರತಿದಿನ ಒಂದರ್ಧ ಇಂಚಿನಷ್ಟು ಶುಂಠಿ ತಿನ್ನುವುದರಿಂದ (ನೇರವಾಗಿ ತಿನ್ನಲು ಸಾಧ್ಯವಾಗದಿದ್ದರೆ ಆಹಾರದಲ್ಲಿ ಬಳಸಬಹುದು) ಹಲವು ರೋಗಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಎನ್ನಲಾಗುತ್ತದೆ.
ಪ್ರತಿದಿನ ಶುಂಠಿ ಬಳಕೆಯಿಂದ ಏನೆಲ್ಲಾ ಪ್ರಯೋಜನ ಎಂದು ನೋಡುವುದಾದರೆ...
* ಉತ್ತಮ ಜೀರ್ಣಕ್ರಿಯೆ:
ಶುಂಠಿಯಲ್ಲಿ ಜೀರ್ಣಕಾರಿ ಕಿಣ್ವಗಳನ್ನೂ ಉತ್ತೇಜಿಸುವ ಶಕ್ತಿ ಇದ್ದು, ಇದು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣದಂತಹ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
* ವಾಂತಿ, ವಾಕರಿಕೆ:
ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವ ಕಿಮೊಥೆರಪಿಯಿಂದ ಕೆಲವರಲ್ಲಿ ಉಂಟಾಗಬಹುದಾದ ವಾಂತಿ, ವಾಕರಿಕೆಯಂತಹ ಸಮಸ್ಯೆಗಳಿಗೆ ಶುಂಠಿ ಅತ್ಯುತ್ತಮ ಮನೆಮದ್ದು.
* ಉರಿಯೂತ ನಿವಾರಕ:
ಉರಿಯೂತ ಕಡಿಮೆ ಮಾಡಬಲ್ಲ ಪ್ರಬಲ ಸಂಯುಕ್ತವಾದ ಜಿಂಜರಾಲ್ ಶುಂಠಿಯಲ್ಲಿದ್ದು ಇದು ಅತ್ಯುತ್ತಮ ಉರಿಯೂತ ನಿವಾರಕವಾಗಿದೆ.
* ರೋಗನಿರೋಧಕ ಶಕ್ತಿ:
ಶುಂಠಿಯಲ್ಲಿ ಕಂಡು ಬರುವ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಆಗಿದೆ.
* ಡಯಾಬಿಟಿಸ್:
ಶುಂಠಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಜೊತೆಗೆ ಮಧುಮೇಹಿಗಳಿಗೆ ಬ್ಲಡ್ ಶುಗರ್ ಕಂಟ್ರೋಲ್ ಮಾಡುವಲ್ಲಿ ತುಂಬಾ ಸಹಾಯಕವಾಗಿದೆ. ಹಾಗಾಗಿ ಇದನ್ನು ಡಯಾಬಿಟಿಸ್ ರೋಗಿಗಳಿಗೆ ಅತ್ಯುತ್ತಮ ಮದ್ದು ಎನ್ನಲಾಗುತ್ತದೆ.
* ತೂಕ ಇಳಿಕೆ:
ಶುಂಠಿ ಚಯಾಪಚಯವನ್ನು ಹೆಚ್ಚಿಸಿ, ದೇಹದಲ್ಲಿ ಶೇಖರವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
* ಹೃದಯದ ಆರೋಗ್ಯ:
ಶುಂಠಿ ದೈನಂದಿನ ಬಳಕೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಅಲ್ಲದೆ ಇದು ರಕ್ತಪರಿಚಲನೆಯನ್ನು ಬೆಂಬಲಿಸುವುದರಿಂದ ಹೃದಯದ ಆರೋಗ್ಯಕ್ಕೆ ವರದಾನ.
* ಮೆದುಳಿನ ಆರೋಗ್ಯ:
ಶುಂಠಿ ಸೇವನೆಯಿಂದ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ದೊರೆತು ಇದು ಏಕಾಗ್ರತೆಯನ್ನು ಸುಧಾರಿಸುತ್ತದೆ.
* ಚರ್ಮ ಮತ್ತು ಕೂದಲಿನ ಆರೋಗ್ಯ:
ಶುಂಠಿಯಲ್ಲಿ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದರ ಬಳಕೆಯಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.