)
Salt side effects : ಆಹಾರದ ರುಚಿಯ ಬಗ್ಗೆ ಮಾತನಾಡುವಾಗ... ಮೊದಲು ನೆನಪಿಗೆ ಬರುವುದು ಉಪ್ಪು. ಪ್ರತಿಯೊಂದು ಖಾದ್ಯದಲ್ಲೂ ಇದು ಅತ್ಯಗತ್ಯ. ಉಪ್ಪು ಇಲ್ಲದ ಇಷ್ಟವಾಗುವುದಿಲ್ಲ. ಇತ್ತೀಚಿನ ಅಧ್ಯಯನಗಳು ಈ ಉಪ್ಪೇ ನಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಎಚ್ಚರಿಸಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಅತಿಯಾದ ಉಪ್ಪು ಸೇವನೆಯಿಂದ ಪ್ರಸ್ತುರ ದೇಶಾದ್ಯಂತ ಸದ್ದಿಲ್ಲದೆ ಜನರು ಅನಾರೋಗ್ಯಕ್ಕೆ ಒಳಲಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಇದು ಪ್ರಮುಖ ಕಾರಣವಾಗಿದೆ.
ವೈದ್ಯರ ಪ್ರಕಾರ, ನಮ್ಮ ದೇಹಕ್ಕೆ ವಾಸ್ತವವಾಗಿ ತುಂಬಾ ಕಡಿಮೆ ಉಪ್ಪು ಬೇಕಾಗುತ್ತದೆ. ಆದರೆ ನಾವು ತಿನ್ನುವ ಆಹಾರದಲ್ಲಿ ಹೆಚ್ಚು ಉಪ್ಪು ಹಾಕಲಾಗುತ್ತದೆ. ಈ ರೀತಿಯ ಆಹಾರ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗುತ್ತದೆ. ಇದು ರಕ್ತನಾಳಗಳು ಗಟ್ಟಿಯಾಗಲು ಮತ್ತು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತದೆ ಎನ್ನುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಆದರೆ ಭಾರತದಲ್ಲಿ ಅನೇಕ ಜನರು ಸುಮಾರು 10 ಗ್ರಾಂ ಉಪ್ಪನ್ನು ಸೇವಿಸುತ್ತಾರೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ವಿಶೇಷವಾಗಿ ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರದ ಸೇವನೆಯಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ..
ಅದಕ್ಕಾಗಿಯೇ ಉಪ್ಪನ್ನು 'ಮೂಕ ಕೊಲೆಗಾರ' ಎಂದು ಕರೆಯಲಾಗುತ್ತದೆ. ಇದು ಒಮ್ಮೆಲೇ ಆನಾರೋಗ್ಯಕ್ಕೆ ಗುರಿಮಾಡಲ್ಲ, ಬದಲಿಗೆ ದೀರ್ಘಕಾಲದವರೆಗೆ ದೇಹವನ್ನು ನಿಧಾನವಾಗಿ ಆವರಿಸುತ್ತದೆ. ಇದರಿಂದ ಮಧುಮೇಹ, ಬಿಪಿ ಮತ್ತು ಹೃದ್ರೋಗಗಳು ಪ್ರೌಢಾವಸ್ಥೆಗೆ ಮುಂಚೆಯೇ ದಾಳಿ ಮಾಡುವ ಸಾಧ್ಯತೆಯಿದೆ.
ಇದನ್ನು ತಪ್ಪಿಸಲು, ನಾವು ನಮ್ಮ ಆಹಾರದಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅಡುಗೆ ತಯಾರಿಸಿದ ನಂತರ ಮತ್ತೆ ಉಪ್ಪನ್ನು ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು. ಪ್ಯಾಕ್ ಮಾಡಿದ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು. ವಾರಕ್ಕೊಮ್ಮೆಯಾದರೂ ಉಪ್ಪು ರಹಿತ ಆಹಾರವನ್ನು ಸೇವಿಸುವ ಮೂಲಕ ನಾವು ದೇಹವನ್ನು ನಿರ್ವಿಷಗೊಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ..