ಈ ತರಕಾರಿಯನ್ನು ಫ್ರಿಡ್ಜ್‌ನಲ್ಲಿಟ್ಟು ತಿಂದರೆ ದಿಢೀರನೆ ಹೆಚ್ಚಾಗುತ್ತೆ ಬ್ಲಡ್‌ ಶುಗರ್‌! ಆರೋಗ್ಯಕ್ಕಿದೆ ಇಷ್ಟೆಲ್ಲ ಹಾನಿ

potato side effects: ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಡುವುದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Written by - Chetana Devarmani | Last Updated : May 19, 2025, 05:39 PM IST
  • ಆಲೂಗಡ್ಡೆ ಅಡ್ಡಪರಿಣಾಮಗಳು ಯಾವುವು?
  • ಮಧುಮೇಹಿಗಳು ಆಲೂಗಡ್ಡೆ ತಿನ್ನಬಹುದೆ?
  • ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಡುವುದರ ಹಾನಿ
ಈ ತರಕಾರಿಯನ್ನು ಫ್ರಿಡ್ಜ್‌ನಲ್ಲಿಟ್ಟು ತಿಂದರೆ ದಿಢೀರನೆ ಹೆಚ್ಚಾಗುತ್ತೆ ಬ್ಲಡ್‌ ಶುಗರ್‌! ಆರೋಗ್ಯಕ್ಕಿದೆ ಇಷ್ಟೆಲ್ಲ ಹಾನಿ

potato side effects:  ಆಲೂಗಡ್ಡೆ ಹಾಳಾಗದಂತೆ ಸುರಕ್ಷಿತವಾಗಿಡಲು ಕೆಲವರು ಅದನ್ನು ಫ್ರಿಜ್‌ನಲ್ಲಿ ಇಡುತ್ತಾರೆ. ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಟ್ಟು ತಿನ್ನುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಆರೋಗ್ಯದ ಮೇಲೆ ಸಾಕಷ್ಟು ಅಡ್ಡಪರಿಣಾಮಗಳನ್ನ ಬೀರುತ್ತದೆ. 

ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದು ಅಪಾಯಕಾರಿ ಎಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸಿವೆ. ಆಲೂಗಡ್ಡೆಯಲ್ಲಿ ಪಿಷ್ಟವಿರುತ್ತದೆ ಮತ್ತು ಅದನ್ನು ಫ್ರೀಜ್‌ನಲ್ಲಿ ಇಡುವುದರಿಂದ, ಈ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದೆಲ್ಲವೂ ಫ್ರೀಜರ್‌ನ ತಂಪಾದ ತಾಪಮಾನದಿಂದಾಗಿ ಸಂಭವಿಸುತ್ತದೆ. ಇದು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಈ ಸಕ್ಕರೆ ಅಪಾಯಕಾರಿ ರಾಸಾಯನಿಕಗಳಾಗಿ ಪರಿವರ್ತನೆಗೊಂಡು ಕ್ಯಾನ್ಸರ್‌ಗೆ ಕಾರಣವಾಗಬಹುದು.

ರೆಫ್ರಿಜರೇಟರ್‌ನಲ್ಲಿ ಇಟ್ಟ ಆಲೂಗಡ್ಡೆಯನ್ನು ಮಧುಮೇಹಿಗಳು ತಿನ್ನುವುದು ತುಂಬಾ ಅಪಾಯಕಾರಿಯಾಗಿದೆ. ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿಟ್ಟು ತಿನ್ನುವುದರಿಂದ ಶುಗರ್‌ ಮಟ್ಟ ಹೆಚ್ಚಾಗವುದು. ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಟ್ಟಾಗ ಅದರಲ್ಲಿರುವ ಸಕ್ಕರೆಯ ಪ್ರಮಾಣವು ಏರಿಕೆಯಾಗುವುದೇ ಇದಕ್ಕೆ ಕಾರಣ. 

ಇದನ್ನೂ ಓದಿ:ಈ ತರಕಾರಿಯ ಬೀಜ ಹಾಲಿನಲ್ಲಿ ನೆನೆಸಿ ತಿನ್ನಿ.. ಕಿಡ್ನಿ ಸ್ಟೋನ್‌ ಕರಗಿ ನೋವಿಲ್ಲದೇ ಹೊರ ಹೋಗುವುದು

ಆಲೂಗಡ್ಡೆಯಲ್ಲಿರುವ ಅಮೈನೋ ಆಮ್ಲ ಆಸ್ಪ್ಯಾರಜಿನ್‌ನೊಂದಿಗೆ ಸೇರಿಕೊಂಡು ಅಕ್ರಿಲಾಮೈಡ್ ರಾಸಾಯನಿಕವನ್ನು ರೂಪಿಸುತ್ತದೆ ಎಂದು ಸಂಶೋಧನೆ ತೋರಿಸಿದೆ, ಇದು ಆರೋಗ್ಯಕ್ಕೆ ಮಾರಕವೆಂದು ಸಾಬೀತುಪಡಿಸುತ್ತದೆ. ಇದು ಕಾಗದ ಮತ್ತು ಪ್ಲಾಸ್ಟಿಕ್ ತಯಾರಿಸಲು ಬಳಸುವ ರಾಸಾಯನಿಕವೂ ಹೌದು. ಆಲೂಗಡ್ಡೆಯನ್ನು ಫ್ರೀಜರ್‌ನಲ್ಲಿ ಇಡುವುದರಿಂದ ನೀವು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಇದರಿಂದ ನೀವು ಅರ್ಥಮಾಡಿಕೊಳ್ಳಬಹುದು.

ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು ಅವು ಹಾಳಾಗದಂತೆ ಒಣ ಸ್ಥಳದಲ್ಲಿ ಇರಿಸಿ. ಏಕೆಂದರೆ ನೀವು ಫ್ರೀಜ್‌ನಲ್ಲಿ ಇಟ್ಟ ಆಲೂಗಡ್ಡೆಯನ್ನು ಶೇಖರಿಸಿದಾಗ, ಅದರಲ್ಲಿರುವ ಸಕ್ಕರೆ ಅಕ್ರಿಲಾಮೈಡ್ ರಾಸಾಯನಿಕವಾಗಿ ಬದಲಾಗುತ್ತದೆ ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯನ್ನು ನಿಮಗೆ ನೀಡುತ್ತದೆ.

ಅಕ್ರಿಲಾಮೈಡ್ ಒಂದು ರಾಸಾಯನಿಕ. ಈ ರಾಸಾಯನಿಕವು ಪಿಷ್ಟವನ್ನು ಹೊಂದಿರುವ ಆಹಾರಗಳಲ್ಲಿ ಕಂಡುಬರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಆಹಾರಗಳಲ್ಲಿ ಪಿಷ್ಟವು ಹೇರಳವಾಗಿ ಕಂಡುಬರುತ್ತದೆ. ಇವುಗಳಲ್ಲಿ ಚಿಪ್ಸ್, ಬ್ರೆಡ್, ಫ್ರೆಂಚ್ ಫ್ರೈಸ್ ಮತ್ತು ಒಲೆಯಲ್ಲಿ ಬೇಯಿಸಿದ ವಸ್ತುಗಳು ಸೇರಿವೆ. ಸ್ವೀಡಿಷ್ ವಿಜ್ಞಾನಿಗಳು ಇದನ್ನು 2002 ರಲ್ಲಿ ಕಂಡುಹಿಡಿದರು.

ಇದನ್ನೂ ಓದಿ: ಪ್ರತಿದಿನವೂ ಈ ನೈಸರ್ಗಿಕ ಜ್ಯೂಸ್‌ ಕುಡಿದ್ರೆ ನೀವು ಬೇಗನ ತೂಕ ನಷ್ಟ ಮಾಡಿಕೊಳ್ಳಬಹುದು!!

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News