ಈ ತರಕಾರಿ ಕಹಿಯಾದರೂ ಇದರ ಪ್ರಯೋಜನ ಕೇಳಿದ್ರೆ ನೀವು ಶಾಕ್‌ ಆಗ್ತಿರಾ..! ಮಧುಮೇಹಿಗಳಿಗೆ ರಾಮಬಾಣ ಈ ಎಲೆ..!

ಹಾಗಲಕಾಯಿ ಎಲೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದರಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್‌, ಮಿನರಲ್‌ ಹೇರಳವಾಗಿ ದೊರೆಯುತ್ತದೆ.ಇದರೊಂದಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.

Written by - Manjunath Naragund | Last Updated : Mar 13, 2025, 05:17 PM IST
  • ಮುನ್ನೆಚ್ಚರಿಕಾ ಕ್ರಮವಾಗಿ ಇದನ್ನು ಸೇವಿಸುವ ಮೊದಲು ವ್ಯದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು
  • ಮೂತ್ರಪಿಂಡದ ಸಮಸ್ಯೆ ಇರುವ ವ್ಯಕ್ತಿಗಳು ಇದನ್ನು ಮಿತವಾಗಿ ತಿನ್ನುವುದು ಮುಖ್ಯ,
  • ಏಕೆಂದರೆ ಈ ಎಲೆಯ ಅತಿಯಾದ ಸೇವನೆಯು ಮೂತ್ರಪಿಂಡದ ಕಾರ್ಯವನ್ನು ದುರ್ಬಲಗೊಳಿಸಬಹುದು
ಈ ತರಕಾರಿ ಕಹಿಯಾದರೂ ಇದರ ಪ್ರಯೋಜನ ಕೇಳಿದ್ರೆ ನೀವು ಶಾಕ್‌ ಆಗ್ತಿರಾ..! ಮಧುಮೇಹಿಗಳಿಗೆ ರಾಮಬಾಣ ಈ ಎಲೆ..!

ಹಾಗಲಕಾಯಿಯು ಹೆಚ್ಚು ಕಹಿಯಾಗಿರುವ ತರಕಾರಿಯಾಗಿದ್ದು, ಇದನ್ನು ಇಷ್ಟಪಟ್ಟು ತಿನ್ನುವವರು ಬಹಳ ವಿರಳ, ಆದರೂ ಆರೋಗ್ಯದ ದೃಷ್ಟಿಯಿಂದ ಇದನ್ನು ಆಗಾಗ್ಗೆ ಆಹಾರದಲ್ಲಿ ಬಳಸುತ್ತಾರೆ. ಅದರೆ ನೀವೆಲ್ಲಾ ತಿಳಿದುಕೊಂಡಂತೆ ಕೇವಲ ಹಾಗಲಕಾಯಿ ಮಾತ್ರವಲ್ಲ, ಅದರ ಎಲೆಯೂ ಸಹ ಅಷ್ಟೇ ಪೋಷಕಾಂಶಗಳನ್ನು ಹೊಂದಿದೆ.

Add Zee News as a Preferred Source

ಹಾಗಲಕಾಯಿ ಎಲೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದರಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್‌, ಮಿನರಲ್‌ ಹೇರಳವಾಗಿ ದೊರೆಯುತ್ತದೆ.ಇದರೊಂದಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.ಇದರಲ್ಲಿ ಅನೇಕ ಔಷದ ಗುಣಗಳೂ ಸಹ ಇದೆ.ಹಾಗಲಕಾಯಿ ಎಲೆಯು ವಿಟಮಿನ್ ಎ ಮತ್ತು ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ.

ಇದನ್ನೂ ಓದಿ: ವಾಹನಗಳ ಮೇಲೆ ಪೊಲೀಸ್ ಅಂತಾ ಬರೆಸಿಕೊಳ್ಳುವಂತಿಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್

ಹಾಗಲಕಾಯಿ ಎಲೆಯ ಪ್ರಯೋಜನಗಳು:

ಈ ಎಲೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹ ನಿರ್ವಹಣೆಗೆ ಸಹಾಯ ಮಾಡುತ್ತದೆ.ಇದರಲ್ಲಿರುವ ಹೇರಳವಾದ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಈ ಎಲೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಪಾಯಕಾರಿ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದರೊಂದಿಗೆ ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.ಕಡಿಮೆ ಕ್ಯಾಲೋರಿ ಮತ್ತು  ಅಧಿಕ ಫೈಬರ್ ಇದರಲ್ಲಿದ್ದು, ಪದೇ ಪದೇ ಹಸಿವಾಗುವುದನ್ನು ಕಡಿಮೆಮಾಡುತ್ತದೆ.ಅಷ್ಟೇ ಅಲ್ಲದೆ ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹವನ್ನು ಸದೃಡಗೊಳಿಸುವುದರೊಂದಿಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

ಹಾಗಲಕಾಯಿ ಎಲೆಗಳನ್ನು ಸೇವಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಈ ಎಲೆಯನ್ನು ಸೇವಿಸುವ ಮುನ್ನ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮಟ್ಟವನ್ನು ತಿಳಿದ ನಂತರ ಈ ಎಲೆಯನ್ನು ತಿನ್ನುವುದು ಸೂಕ್ತ, ಏಕೆಂದರೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇದನ್ನು ಸೇವಿಸುವ ಮೊದಲು ವ್ಯದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.

ಮೂತ್ರಪಿಂಡದ ಸಮಸ್ಯೆ ಇರುವ ವ್ಯಕ್ತಿಗಳು ಇದನ್ನು ಮಿತವಾಗಿ ತಿನ್ನುವುದು ಮುಖ್ಯ, ಏಕೆಂದರೆ ಈ ಎಲೆಯ ಅತಿಯಾದ ಸೇವನೆಯು ಮೂತ್ರಪಿಂಡದ ಕಾರ್ಯವನ್ನು ದುರ್ಬಲಗೊಳಿಸಬಹುದು.

ಇದನ್ನೂ ಓದಿ: ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲು ಹೈಜಾಕ್‌ ಪ್ರಕರಣ : 350 ಒತ್ತೆಯಾಳು ಪ್ರಯಾಣಿಕರ ರಕ್ಷಣೆ

ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಇದನ್ನು ತಿನ್ನುವುದು ಒಳ್ಳೆಯದಲ್ಲ.

ಸೂಚನೆ: ಈ ಮೇಲಿನ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News