ಬೆಂಗಳೂರು : ವಯಸ್ಸು ಹೆಚ್ಚಾಗುತ್ತಿದ್ದಂತೆಯೇ ತೂಕವನ್ನು ಕಳೆದುಕೊಳ್ಳುವುದು ಸುಲಭವಲ್ಲ. 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು ಇನ್ನಷ್ಟು ಕಠಿಣವಾಗುತ್ತದೆ. ಈ ವಯಸ್ಸಿನಲ್ಲಿ, ಚಯಾಪಚಯವು ನಿಧಾನಗೊಳ್ಳುತ್ತದೆ. ತೂಕವನ್ನು ಕಳೆದುಕೊಳ್ಳುವ ಬದಲು, ಅದು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಲೇ 30ರ ಹರೆಯದ ಆಹಾರ ಪದ್ಧತಿಯನ್ನು 40ರ ಹರೆಯದಲ್ಲೂ ಅನುಸರಿಸಬೇಕು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

40 ನೇ ವಯಸ್ಸಿನಲ್ಲಿ, ಯಾವುದೇ ವ್ಯಕ್ತಿಯು ಹೆಚ್ಚು ಜ್ಞಾನ, ಅನುಭವ ಮತ್ತು ಆತ್ಮವಿಶ್ವಾಸವನ್ನು ಹೊಂದುತ್ತಾನೆ. 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಚಯಾಪಚಯವು ನಿಧಾನಗೊಳ್ಳುತ್ತದೆ. ಚಯಾಪಚಯ ನಿಧಾನವಾದಾಗ   ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಈ ವಯಸ್ಸಿನಲ್ಲಿಯೂ ತೂಕ ಕಳೆದುಕೊಳ್ಳಲು ಕೆಲವು ವಿಧಾನಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. 


ಇದನ್ನೂ ಓದಿ : ಕೊಬ್ಬೂ ಕರಗುವುದು, ಹೊಟ್ಟೆಯೂ ಕಡಿಮೆಯಾಗುವುದು ! ತುಂಬಾ ಸಿಂಪಲ್ ಟಿಪ್ಸ್ -ಒಮ್ಮೆ ಹೀಗೆ ಮಾಡಿ ನೋಡಿ
 
ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬೇಡಿ : 
 40 ವರ್ಷಗಳ ನಂತರ, ದೈನಂದಿನ ಕಾರ್ಬೋಹೈಡ್ರೇಟ್ ಅಗತ್ಯವು ಕಡಿಮೆಯಾಗುತ್ತದೆ. ಆದ್ದರಿಂದ, ಕಾರ್ಬೋಹೈಡ್ರೇಟ್‌ಗಳನ್ನು ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬದಲು, ಅವುಗಳನ್ನು ಕಡಿಮೆ ಮಾಡಬೇಕು. ಮಹಿಳೆಗೆ ದಿನಕ್ಕೆ 40 ರಿಂದ 50 ಗ್ರಾಂ ಕಾರ್ಬೋಹೈಡ್ರೇಟ್ ಗಳು  ಬೇಕಾಗಬಹುದು. ಇದಕ್ಕಾಗಿ ಚಪಾತಿ ಅಥವಾ ಅನ್ನ, ಬೀನ್ಸ್, ಕಾಳುಗಳು ಮತ್ತು ಸಲಾಡ್ ಅನ್ನು ಸ್ವಲ್ಪ ಮಟ್ಟಕ್ಕೆ ಊಟಕ್ಕೆ ಸೇರಿಸಬಹುದು. ಇವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಒತ್ತಡದಿಂದ ದೇಹಕ್ಕೆ ವಿಶ್ರಾಂತಿ ನೀಡಿ: 
ಈ ಅವಧಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಇದು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಒತ್ತಡದಲ್ಲಿದ್ದರೆ, ಒತ್ತಡದ ಹಾರ್ಮೋನುಗಳು ಸಕ್ರಿಯವಾಗಿರುತ್ತವೆ. ಒತ್ತಡದಿಂದಾಗಿ ಖಂಡಿತವಾಗಿಯೂ ತೂಕ ಹೆಚ್ಚಾಗುವುದು. ಹೀಗಿರುವಾಗ  40 ವರ್ಷ ವಯಸ್ಸಿನ ನಂತರ, ಒತ್ತಡವನ್ನು ಕಡಿಮೆ ಮಾಡಿ  ಶಾಂತವಾಗಿರಲು ಪ್ರಯತ್ನಿಸಿ. 


ಇದನ್ನೂ ಓದಿ : ಅಳು ಬಂದಾಗ ಅತ್ತು ಬಿಡಿ ! ಕಣ್ಣೀರು ಹೊರ ಹಾಕುವುದರಿಂದಲೂ ಆರೋಗ್ಯಕ್ಕಿದೆ ಪ್ರಯೋಜನ


ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳನ್ನು ಸೇರಿಸಿ : 
40 ವರ್ಷದ ನಂತರ ಕೆಲವರು ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ಹೊತ್ತಿನಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು. ತರಕಾರಿಗಳು ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಇನ್ಸುಲಿನ್ ಮಟ್ಟಗಳು ಮತ್ತು ತೂಕವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಎರಡರಿಂದ ಮೂರು ಕಪ್ ತರಕಾರಿಗಳನ್ನು ಸೇರಿಸಿ.


ಉತ್ತಮ ನಿದ್ರೆ ಅತ್ಯಗತ್ಯ : 
40 ನೇ ವಯಸ್ಸಿನಲ್ಲಿ ತೂಕ ಇಳಿಸಿಕೊಳ್ಳಬೇಕಾದರೆ ಉತ್ತಮ ನಿದ್ರೆ  ಮಾಡಲೇಬೇಕು. ಹೀಗಾಗಿ ಮಲಗುವ ವಿಧಾನವನ್ನು ಬದಲಾಯಿಸಿ ಮತ್ತು  ಮಲಗುವ ಸಮಯವನ್ನು ಹೊಂದಿಸಿ. ಮಲಗುವ ಮುನ್ನ ಆಲ್ಕೋಹಾಲ್ ಅಥವಾ ಕೆಫೀನ್ ಸೇವಿಸಬಾರದು ಎನ್ನುವುದು ನೆನಪಿರಲಿ. ಇದರ ಮೂಲಕ ಚಯಾಪಚಯವು ಸುಧಾರಿಸುತ್ತದೆ ಮತ್ತು ತೂಕ ನಷ್ಟ ಪ್ರಾರಂಭವಾಗುತ್ತದೆ.


ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ನಿಂದ ಸಂಭವಿಸುವ ಕಾಯಿಲೆಗಳಿಂದ ಪಾರಾಗಲು ನಿತ್ಯ 3 ಬಾರಿ 1 ಚಮಚೆ ಈ ಸೂಪರ್ ಫುಡ್ ಸೇವಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ