)
Gastric Stomach Cancer: ಸ್ವಲ್ಪ ಊಟ ಹೆಚ್ಚಾದರೂ ಹೊಟ್ಟೆ ನೋವು ಬರಬಹುದು. ಅಲ್ಲದೆ, ಗ್ಯಾಸ್ಟ್ರಿಕ್, ಅಜೀರ್ಣದಂತಹ ಸಮಸ್ಯೆಗಳಿದ್ದಾಗಲೂ ಹೊಟ್ಟೆ ನೋವು ಕಾಡಬಹುದು. ಆದರೆ, ಪದೇ ಪದೇ ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ನೋವು ಬಾಧಿಸುತ್ತಿದ್ದರೆ ಇದು ಸಾಮಾನ್ಯ ಹೊಟ್ಟೆನೋವಲ್ಲ, ಬದಲಿಗೆ ಹೊಟ್ಟೆಯ ಕ್ಯಾನ್ಸರ್ನ ಗುಣಲಕ್ಷಣವೂ ಆಗಿರಬಹುದು.
ಹೌದು, ಸಾಮಾನ್ಯವೆಂದು ನಿರ್ಲಕ್ಷಿಸುವ ಹೊಟ್ಟೆ ನೋವು ಭವಿಷ್ಯದಲ್ಲಿ ಮಾರಣಾಂತಿಕ ಸ್ವರೂಪವನ್ನೂ ಪಡೆಯಬಹುದು. ಮೊದ ಮೊದಲಿಗೆ ತೀರಾ ಸಾಮಾನ್ಯ ಎಂದೆನಿಸುವ ಪದೇ ಪದೇ ಕಾಡುವ ಹೊಟ್ಟೆ ನೋವಿಗೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅತೀ ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ದೇಹದ ತುಂಬ ಹರಡಿ ಅಪಾಯಕಾರಿ ಸ್ಥಿತಿಗೆ ತರುತ್ತದೆ. ಅದರಲ್ಲೂ ನಿಮ್ಮ ಕುಟುಂಬದಲ್ಲಿ ಹಿಂದೆ ಯಾರಾದರೂ ಕ್ಯಾನ್ಸರ್ ಸಮಸ್ಯೆ ಇಂದ ಬಳಲಿದ್ದರೆ ಈ ಸಮಸ್ಯೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುವ ಸಾಧ್ಯತೆ ಇದೆ.
ಪದೇ ಪದೇ ಕಾಡುವ ಹೊಟ್ಟೆ ನೋವು ಯಾವೆಲ್ಲಾ ಆರೋಗ್ಯ ಸಮಸ್ಯೆಯ ಸಂಕೇತ ಎಂದು ನೋಡುವುದಾದರೆ...
ಹೊಟ್ಟೆಯ ಕ್ಯಾನ್ಸರ್:
ಹೊಟ್ಟೆಯ ಕ್ಯಾನ್ಸರ್ ಇದನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಸಹ ಕರೆಯುವರು. ಇದು ಹೊಟ್ಟೆಯ ಒಳಪದರದಲ್ಲಿ ಗಡ್ಢೆಯಂತೆ ಬೆಳೆದು ಮುಂದೆ ಅಪಾಯಕಾರಿಯಾಗಿ ಬೆಳೆಯುತ್ತದೆ. ಈ ಹೊಟ್ಟೆಯ ಕ್ಯಾನ್ಸರ್ ಸಾಮಾನ್ಯವಾಗಿ ಹೊಟ್ಟೆಯ ಒಳಪದರದ ಜೀವಕೋಶದಲ್ಲಿ ಪ್ರಾರಂಭವಾಗುತ್ತದೆ. ಇದು ಉಳಿದ ಕ್ಯಾನ್ಸರ್ಗಳಂತೆ ಅಪಾಯಕಾರಿ ಅಲ್ಲದಿದ್ದರೂ ಇದನ್ನು ಕಂಡುಹಿಡಿದ ಕೂಡಲೇ ಆರಂಭಿಕ ಹಂತಗಳಲ್ಲಿ ಸುಲಭವಾಗಿ ಸರಿಪಡಿಸಲಾಗುವುದಿಲ್ಲ.
ಹೊಟ್ಟೆಯ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಪತ್ತೆ ಮಾಡುವುದು ಸವಾಲಿನ ಸಂಗತಿಯಾಗಿದೆ, ಏಕೆಂದರೆ ಇದು ಸಾಮಾನ್ಯವಾಗಿ ಸೂಕ್ಷ್ಮ ಅಥವಾ ಅನಿರ್ದಿಷ್ಟ ರೋಗಲಕ್ಷಣಗಳೊಂದಿಗೆ ಇರುತ್ತದೆ. ಹೊಟ್ಟೆಯ ಕ್ಯಾನ್ಸರ್ ಈ ಕೆಲವು ಸಾಮಾನ್ಯ ಲಕ್ಷಣಗಳು ಹೊಂದಿದೆ:
ನಿರಂತರ ಹೊಟ್ಟೆ ನೋವು ಅಥವಾ ಅಸ್ವಸ್ಥತೆ:
ಈ ಸಮಸ್ಯೆ ಇರುವವರು ಅಗಾಗ ನಿಯಮಿತ ಹೊಟ್ಟೆನೋವನ್ನು ಅನುಭವಿಸುತ್ತಿರುತ್ತಾರೆ. ಯಾವಾಗಲೂ ಅಶಕ್ತಿ ಮತ್ತು ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ.
ದಿಡೀರ್ ತೂಕ ನಷ್ಟ:
ಇದು ಕೂಡ ಹೊಟ್ಟೆ ಕ್ಯಾನ್ಸರ್ ಣ ಪ್ರಮುಖ ಗುಣಲಕ್ಷಣವಾಗಿದ್ದು ದೇಹದ ತೂಕದಲ್ಲಿ ಏಕಾಏಕಿ ವ್ಯತ್ಯಾಸ ಕಾಣಿಸಿಕೊಳ್ಳುವ ಸಾದ್ಯತೆ ಇದೆ.
ಪದೇ ಪದೇ ಹಸಿವಾಗುವುದು:
ಎಷ್ಟೇ ಹೊಟ್ಟೆ ತುಂಬ ಊಟ ಮಾಡಿದರೂ ತೃಪ್ತಿ ಇಲ್ಲದಿರುವುದು ಯಾವಾಗಲೂ ಅತೀವ ಹಸಿವಾಗುವುದು ಕೂಡ ಹೊಟ್ಟೆ ಕ್ಯಾನ್ಸರ್ ನ ಲಕ್ಷಣವಾಗಿದೆ.
ಇದನ್ನೂ ಓದಿ- ಈ ಸೌತೆಕಾಯಿಂದ ಅಪಾಯಕಾರಿ ಕ್ಯಾನ್ಸರ್ ನಿವಾರಿಸಬಹುದಾ..? ಅಚ್ಚರಿ ಮೂಡಿಸಿದ ಸಂಶೋಧನೆ..!
ವಾಕರಿಕೆ, ವಾಂತಿ ಮತ್ತು ನುಂಗಲು ತೊಂದರೆ (ಡಿಸ್ಫೇಜಿಯಾ):
ಪದೇ ಪದೇ ವಾಕರಿಕೆ ಮತ್ತು ಸಂಕೀರ್ಣ ಆಹಾರ ಪದಾರ್ಥಗಳನ್ನು ತಿನ್ನಲಾಗುವುದಿಲ್ಲ. ಗಂಟಲು ನೋವು ಮತ್ತು ಇನ್ನಿತರ ಜೀರ್ಣಕ್ರಿಯೆ ತೊಂದರೆಗಳು ಇವೆಲ್ಲವೂ ಸಹ ಹೊಟ್ಟೆ ಕ್ಯಾನ್ಸರ್ ನ ಎಚ್ಚರಿಕೆ ಗಂಟೆಯಾಗಿದೆ.
ಇದರೊಂದಿಗೆ ಇನ್ನೂ ದೇಹದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಾದ ಮಲದಲ್ಲಿನ ರಕ್ತವು ಕಪ್ಪಾಗಿರುವುದು, ಟ್ಯಾರಿ ಮಲ (ಮೆಲೆನಾ) ನಂತೆ ಕಾಣುವುದು. ಅಷ್ಟೇ ಅಲ್ಲದೆ ಆಯಾಸ , ದೌರ್ಬಲ್ಯ ಮತ್ತು ಕಾಮಾಲೆ (ಚರ್ಮ ಮತ್ತು ಕಣ್ಣುಗಳ ಹಳದಿ) ಇವೆಲ್ಲ ಗ್ಯಾಸ್ಟ್ರಿಕ್ ಕ್ಯಾನ್ಸರ್ ನ ಲಕ್ಷಣವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.