)
High GI fruits
: ಮಧುಮೇಹಿಗಳು ಹೆಚ್ಚಿನ ಸಕ್ಕರೆ ಅಂಶವಿರುವ ಅಥವಾ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುವ ಹಣ್ಣುಗಳನ್ನ, ಅದರಲ್ಲೂ ಸಂಪೂರ್ಣ ಹಣ್ಣುಗಳ ಬದಲು ಸಂಸ್ಕರಿಸಿದ ರೂಪದಲ್ಲಿರುವ ಹಣ್ಣುಗಳನ್ನ ತಪ್ಪಿಸಬೇಕು. ಒಣದ್ರಾಕ್ಷಿ, ಖರ್ಜೂರ, ಸಿರಪ್ನಲ್ಲಿರುವ ಹಣ್ಣುಗಳು ಮತ್ತು ಹಣ್ಣಿನ ರಸಗಳನ್ನ ಸಾಮಾನ್ಯವಾಗಿ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆ ಉಂಟಾಗಬಹುದು. ಮಧುಮೇಹ ಇರುವವರು ಯಾವ ಹಣ್ಣುಗಳನ್ನ ತಿನ್ನಬಾರದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿದೆ. ಇದನ್ನ ಅತಿಯಾಗಿ ತಿನ್ನುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗಬಹುದು.
ಅನಾನಸ್: ಅನಾನಸ್ ಅಥವಾ ಪೈನಾಪಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ತ್ವರಿತವಾಗಿ ಹೆಚ್ಚಿಸುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ 59 -66 ಇರುತ್ತದೆ.
ಬಾಳೆಹಣ್ಣು: ಬಾಳೆಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕ 52 ಇದೆ. ಇದನ್ನ ಹೆಚ್ಚು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.
ಮಾವಿನ ಹಣ್ಣು: ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ತುಂಬಾ ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ ಸಕ್ಕರೆ ಮಟ್ಟ ಬೇಗನೆ ಏರಬಹುದು.
ಒಣದ್ರಾಕ್ಷಿ: ಒಣದ್ರಾಕ್ಷಿಗಳ ಗ್ಲೈಸೆಮಿಕ್ ಸೂಚ್ಯಂಕ 64 ಇರುತ್ತದೆ. ಇವುಗಳನ್ನ ಹೆಚ್ಚು ತಿನ್ನುವುದು ಮಧುಮೇಹ ಇರುವವರಿಗೆ ಒಳ್ಳೆಯದಲ್ಲ.
ಖರ್ಜೂರ: ಮಧುಮೇಹ ರೋಗಿಗಳು ಹೆಚ್ಚು ಖರ್ಜೂರ ಸೇವಿಸುವುದು ಸೂಕ್ತವಲ್ಲ. ಖರ್ಜೂರ ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಆದರೆ ಮಧುಮೇಹಿಗಳು ಖರ್ಜೂರ ಸೇವಿಸುವುದು ಸೂಕ್ತವಲ್ಲ.
ಅಂಜೂರದ ಹಣ್ಣು: ಅಂಜೂರದ ಹಣ್ಣುಗಳನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಏರಬಹುದು. ಆದ್ದರಿಂದ ಅವುಗಳನ್ನ ತಿನ್ನದಿರುವುದು ಉತ್ತಮ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)