)
ತೂಕ ಇಳಿಸಿಕೊಳ್ಳಲು ಆಹಾರ ಮತ್ತು ವ್ಯಾಯಾಮ ಮಾತ್ರ ಸಾಕಾಗುವುದಿಲ್ಲ. ನಿಮ್ಮ ಜೀವನಶೈಲಿಯನ್ನು ಒಟ್ಟಾರೆಯಾಗಿ ಆರೋಗ್ಯಕರವಾಗಿಸಿಕೊಳ್ಳಬೇಕು. ಮಾನಸಿಕವಾಗಿಯೂ ಸದೃಢರಾಗಿರಬೇಕು. ಇವೆಲ್ಲವೂ ಒಂದು ಹಂತದಲ್ಲಿ ಒಟ್ಟಿಗೆ ಸೇರಿದಾಗ ಮಾತ್ರ ಆರೋಗ್ಯಕರ ತೂಕ ಇಳಿಕೆ ಸಾಧ್ಯ.
ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ 23 ಕೆಜಿ ವೈಟ್ ಲಾಸ್ ಮಾಡಿಕೊಂಡ ಯುವತಿ :
ಸಿಮ್ರುನ್ ಚೋಪ್ರಾ ಎನ್ನುವ ಯುವತಿ 5 ತಿಂಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮಾರ್ಚ್ 11 ರಂದು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಅವರು ತಮ್ಮ ಫಿಟ್ನೆಸ್ ಗುರಿಯನ್ನು ಸಾಧಿಸಲು ಯಾವ ವಸ್ತುವಿನಿಂದ ದೂರವಿದ್ದರು ಎನ್ನುವ ಬಗ್ಗೆ ತಿಳಿಸಿ ಹೇಳಿದ್ದಾರೆ.
ಹೊರಗೆ ಊಟಕ್ಕೆ ಫುಲ್ ಸ್ಟಾಪ್ :
ತೂಕ ಇಳಿಸಿಕೊಳ್ಳುವ ಬಗ್ಗೆ ಗಂಭೀರವಾಗಿದ್ದರೆ, ಹೊರಗಿನ ಊಟಕ್ಕೆ ಫುಲ್ ಸ್ಟಾಪ್ ಹಾಕಲೇ ಬೇಕು. 23 ಕೆಜಿ ತೂಕ ಇಳಿಸಿಕೊಂಡ ಸಿಮ್ರುನ್ ಚೋಪ್ರಾ ಕೂಡಾ ಅನುಸರಿಸಿದ್ದು ಇದೇ ಪ್ರಯತ್ನವನ್ನು. ಅವರು ಮನೆ ಊಟ ಬಿಟ್ಟು ಹೊರಗೆ ಏನನ್ನೂ ತಿನ್ನುತ್ತಿರಲಿಲ್ಲ.
ಸಿಹಿ ಪಾನೀಯ :
ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿಗಳನ್ನು ಸೇವಿಸುವುದು ಅತ್ಯಗತ್ಯ. ಆದ್ದರಿಂದ, ಅವರು ಹೆಚ್ಚಿನ ಕ್ಯಾಲೋರಿಗಳನ್ನು ಒದಗಿಸುವ ಸಕ್ಕರೆ ಪಾನೀಯಗಳನ್ನು ಸೇವಿಸುವುದನ್ನು ನಿಲ್ಲಿಸಿದರು. ಜ್ಯೂಸ್ಗಳು, ಸ್ಮೂಥಿಗಳು, ಸಿಹಿ ಸೋಡಾಗಳು ಮತ್ತು ಕಾಕ್ಟೇಲ್ಗಳನ್ನು ಸೇವಿಸುವುದನ್ನು ನಿಲ್ಲಿಸಿದರು. ತಂಪು ಪಾನೀಯಗಳನ್ನು ಕುಡಿಯಲು ಇಷ್ಟಪಡುವ ಕಾರಣ, ಪ್ಲೈನ್ ಸೋಡಾ ಮಾತ್ರ ಸೇವಿಸುತ್ತಿದ್ದರು.
ಸಿಹಿತಿಂಡಿ :
ಸಿಹಿತಿಂಡಿಗಳು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಸಿಹಿತಿಂಡಿಗಳು ಅನೇಕರ ದೌರ್ಬಲ್ಯವೂ ಹೌದು. ಸಿಮ್ರುನ್ ಚೋಪ್ರಾಗೂ ಸಿಹಿ ಇಷ್ಟವಾಗಿದ್ದರೂ ಅವರು ತೂಕ ಇಳಿಸಿಕೊಳ್ಳುವ ಸಲುವಾಗಿ ಸಿಹಿತಿಂಡಿಗಳನ್ನು ಮುಟ್ಟಿಯೂ ನೋಡಲಿಲ್ಲ.
ಕರಿದ ಆಹಾರ :
ಹುರಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಅಡಗಿರುತ್ತವೆ. ಅವು ತೂಕ ಇಳಿಸಿಕೊಳ್ಳಲು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ತನ್ನ ತೂಕ ಇಳಿಸುವ ಪ್ರಯತ್ನಗಳಿಗೆ ಸಿಹಿ ತಿಂಡಿ ಅಡ್ಡಿಯಾಗುತ್ತಿದ್ದ ಕಾರಣ ಅವುಗಳ ಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ದರು.
ರಾತ್ರಿ ಸುತ್ತಾಟಕ್ಕೆ ಬ್ರೇಕ್ :
ರಾತ್ರಿ ಪಾರ್ಟಿಗಳು, ನೈಟ್ ಔಟ್ ಇದೆಲ್ಲದ್ದಕ್ಕೂ ಸಿಮ್ರಾನ್ ಬ್ರೇಕ್ ಹಾಕಿದ್ದಾರೆ. ರಾತ್ರಿ ಹೊರಗೆ ಹೋದರೆ, ಬೆಳಗ್ಗೆ ಬೇಗ ಏಳುವುದು ಸಾಧ್ಯವಾಗುವುದಿಲ್ಲ. ಆಗ ಬೆಳಗಿನ ವ್ಯಾಯಾಮವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಸಿಮ್ರಾನ್ ನೈಟ್ ಔಟ್, ಪಾರ್ಟಿಗಳನ್ನು ನಿಲ್ಲಿಸಿದ್ದಾರೆ.
ಇದೆಲ್ಲದರ ಪರಿಣಾಮ ಅವರು 5 ತಿಂಗಳಲ್ಲಿ 23 ಕೆಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಾಯಿತು.
(ಸೂಚನೆ : ಇವೆಲ್ಲವೂ ಸಿಮ್ರಾನ್ ಚೋಪ್ರಾ ಅವರ ವೈಯಕ್ತಿಕ ತೂಕ ಇಳಿಕೆಯ ಅನುಭವಗಳು. ಅವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಜೀ ಕನ್ನಡ ನ್ಯೂಸ್ ಇದನ್ನು ದೃಢಪಡಿಸಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.