ಬೆಂಗಳೂರು : ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ತೂಕ ಇಳಿಸುವ ಪ್ರಕ್ರಿಯೆ ಎಂದರೆ ಅದೊಂದು ತಪ್ಪಸ್ಸು. ಸಾಕಷ್ಟು ತ್ಯಾಗ, ನಿರ್ಬಂಧಗಳು, ಶಿಸ್ತು ಮತ್ತು ಬದ್ಧತೆಯ ಅಗತ್ಯವಿರುತ್ತದೆ. ತೂಕ ಇಳಿಸುವ ಪ್ಕ್ರಿಯೆಯಲ್ಲಿ ತೊಡಗುವವರು ತೀವ್ರವಾದ ದೈಹಿಕ ಪರಿಶ್ರಮ ಮತ್ತು ಕಟ್ಟುನಿಟ್ಟಾದ ಆಹಾರ ನಿರ್ಬಂಧಗಳಿಗೆ ಒಳಗಾಗಬೇಕಾಗುತ್ತದೆ.
ವೇಟ್ ಲಾಸ್ ಜರ್ನಿ :
ನೇಹಾ ಎನ್ನುವ ಯುವತಿ ಕೇವಲ 19 ವರ್ಷವಿರುವಾಗ 91 ಕೆಜಿ ತೂಕವನ್ನು ಹೊಂದಿದ್ದರು. ಅವರ ಹಾರ್ಮೋನುಗಳು ಅಸಮತೋಲನವಾಗಿತ್ತು. ನೇಹಾ ತಮ್ಮ ತೂಕ ಇಳಿಸಿಕೊಳ್ಳುವ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಶೇರ್ ಮಾಡಿದ್ದರು.
ಇದನ್ನೂ ಓದಿ : ಡ್ಯಾಮೇಜ್ ಆಗಿರುವ ಲಿವರ್ ಅನ್ನು ಗುಣಪಡಿಸಬಲ್ಲ 5 ಅದ್ಭುತ ಆಹಾರಗಳು
35 ಕೆಜಿ ತೂಕ ಇಳಿಸಿಕೊಂಡ ಯುವತಿ :
ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಿ 8 ತಿಂಗಳಲ್ಲಿ 35 ಕೆಜಿ ತೂಕ ಇಳಿಸಿಕೊಂಡಿದ್ದಾರೆ ನೇಹಾ. 91 ಕೆಜಿಯಿಂದ ತನ್ನ ತೂಕವನ್ನು 56 ಕೆಜಿಗೆ ಇಳಿಸಿಕೊಂಡಿದ್ದಾರೆ. ತೂಕ ಇಳಿಸಿಕೊಳ್ಳುವ ತನ್ನ ಆಸೆ ಈಡೇರಿರುವ ಬಗ್ಗೆ ಅತ್ಯಂತ ಸಂಭ್ರಮದಲ್ಲಿದ್ದಾರೆ ನೇಹಾ.
ಈ ಆಹಾರಗಳಿಗೆ ಗುಡ್ ಬೈ ಹೇಳಿದ ನೇಹಾ :
ನೇಹಾ ತನ್ನ ತೂಕ ಇಳಿಸುವ ಅನುಭವಗಳನ್ನು ಹಂಚಿಕೊಂಡಿದ್ದು, ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತಾನು ಯಾವ ಆಹಾರವನ್ನು ಸೇವಿಸಿಲ್ಲ ಎನ್ನುವುದನ್ನು ಕೂಡಾ ಹಂಚಿಕೊಂಡಿದ್ದಾರೆ.
- ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ಸೋಡಾ, ಕ್ಯಾಂಡಿಗಳು, ಸಿಹಿತಿಂಡಿಗಳು ಮತ್ತು ಲಸ್ಸಿಯಂತಹ ಸಕ್ಕರೆ ಮಿಶ್ರಿತ ಆಹಾರಗಳು ಮತ್ತು ಪಾನೀಯಗಳನ್ನು ಸೇವಿಸುವಂತಿಲ್ಲ. ಹೆಚ್ಚು ಸಕ್ಕರೆ ಸೇವಿಸುವುದರಿಂದ ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ. ಇದು ನಿಮ್ಮ ದೇಹದಲ್ಲಿ ಅದರಲ್ಲಿಯೂ ವಿಶೇಷವಾಗಿ ಸೊಂಟದ ಸುತ್ತಲೂ ಹೆಚ್ಚು ಕೊಬ್ಬನ್ನು ಸಂಗ್ರಹಿಸಲು ಕಾರಣವಾಗುತ್ತದೆ.
- ವೈಟ್ ಬ್ರೆಡ್, ಬಿಳಿ ಅಕ್ಕಿ, ಪಾಸ್ತಾ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬಾರದು. ಇವು ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಏರಲು ಮತ್ತು ಕಡಿಮೆಯಾಗಲು ಕಾರಣವಾಗುತ್ತವೆ. ಇದು ಹಸಿವು ಮತ್ತು ಆಲಸ್ಯವನ್ನುಂಟು ಮಾಡುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಇದನ್ನೂ ಓದಿ : ಯುವಕರ ಕೂದಲು ಸಮಸ್ಯೆಗೆ ಇಲ್ಲಿವೆ ನಾಲ್ಕು ಸೂತ್ರಗಳು..! ತಕ್ಷಣದಲ್ಲಿಯೇ ಸಮಸ್ಯೆ ಪರಿಹಾರ
- ಪ್ಯಾಕ್ ಮಾಡಿದ ತಿಂಡಿಗಳು, ಬೆಣ್ಣೆ ಮತ್ತು ಹುರಿದ ಆಹಾರಗಳನ್ನು ತಪ್ಪಿಸಬೇಕು. ಇವು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.
- ಚಿಪ್ಸ್, ಬಿಸ್ಕತ್ತು ಮತ್ತು ಕ್ಯಾಂಡಿಗಳಂತಹ ಹೆಚ್ಚಿನ ಕ್ಯಾಲೋರಿ ತಿಂಡಿಗಳನ್ನು ಸೇವಿಸಬಾರದು. ಈ ತಿಂಡಿಗಳು ಹೆಚ್ಚಾಗಿ ಬಹಳಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತವೆ.
- ಕೊಬ್ಬಿನಂಶ ಹೆಚ್ಚಿರುವ ಡೈರಿ ಆಹಾರಗಳಾದ ಚೀಸ್, ಕ್ರೀಮ್ ಮತ್ತು ಸಂಪೂರ್ಣ ಹಾಲನ್ನು ತಪ್ಪಿಸಿ.
- ಫ್ರೆಂಚ್ ಫ್ರೈಸ್, ಫ್ರೈಡ್ ಚಿಕನ್ ಮತ್ತು ಡೀಪ್ ಫ್ರೈಡ್ ತಿಂಡಿಗಳನ್ನು ಕೂಡಾ ತಪ್ಪಿಸಬೇಕು. ಇವುಗಳಲ್ಲಿ ಕ್ಯಾಲೋರಿಗಳು ಮತ್ತು ಅನಾರೋಗ್ಯಕರ ಕೊಬ್ಬುಗಳು ಕೂಡಾ ಅಧಿಕವಾಗಿರುತ್ತವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಇವೆಲ್ಲವೂ ನೇಹಾ ಅವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









