)
Weight Lose Jouney : ಪ್ರಾಂಜಲ್ ಪಾಂಡೆ ಇನ್ಸ್ಟಾಗ್ರಾಮ್ನಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಇವರು 154 ಕೆ.ಜಿಯಿಂದ 65 ಕೆಜಿಗೆ ತೂಕ ಇಳಿಸಿಕೊಂಡಿರುವ ವಿಧಾನವನ್ನು ವಿವರಿಸಿದ್ದಾರೆ. ತೂಕ ಇಳಿಸಿಕೊಳ್ಳಲು ತಾನು ಅನುಸರಿಸಿದ ಸಲಹೆಗಳ ಬಗ್ಗೆಯೂ ಹಂಚಿಕೊಂಡಿದ್ದಾರೆ.
ತೂಕ ಇಳಿಕೊಳ್ಳುವ ಸಲುವಾಗಿ ತಾನು ಇತರರಂತೆ ಹೆಚ್ಚು ಜಿಮ್ಗೆ ಹೋಗುವುದಿಲ್ಲ ಎನ್ನುವುದನ್ನು ಈ ಯುವತಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಫಿಟ್ನೆಸ್ ಜರ್ನಿಯಲ್ಲಿ ತನ್ನ ದೇಹಕ್ಕೆ ಸರಿಹೊಂದುವಂತೆ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡಿದ್ದಾರೆ. ಜೊತೆಗೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಸರಿಯಾದ ಆಹಾರ ಪದ್ಧತಿ:
ತೂಕ ಇಳಿಸಿಕೊಳ್ಳುವವರು ಕಡಿಮೆ ಆಹಾರ ತಿನ್ನಬೇಕು ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಎಲ್ಲಾ ಪರಿಸ್ಥಿತಿಯಲ್ಲಿಯೂ ಇದು ಸತ್ಯ ಅಲ್ಲ. ಇದನ್ನೇ ಪ್ರಾಂಜೆಲ್ ಕೂಡಾ ಹೇಳಿರುವುದು. ನೀವು ಏನನ್ನು ತಿನ್ನುತ್ತೀರಿ ಎನ್ನುವುದರ ಮೇಲೆ ನಿಮ್ಮ ಫಿಟ್ನೆಸ್ ಜರ್ನಿ ನಿಂತಿರುತ್ತದೆ ಎಂದು ಅವರು ಹೇಳುತ್ತಾರೆ.
ಪ್ರೋಟೀನ್ ಮತ್ತು ಫೈಬರ್:
ತೂಕ ಇಳಿಸುವಲ್ಲಿ ಪ್ರೋಟೀನ್ ಮತ್ತು ಫೈಬರ್ ಪ್ರಮುಖ ಪಾತ್ರ ವಹಿಸುತ್ತವೆ. ಇವೆಲ್ಲವೂ ಒಟ್ಟಾಗಿ ಹಸಿವನ್ನು ಕಡಿಮೆ ಮಾಡಲು ಮತ್ತು ಪದೇ ಪದೇ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಬೇಳೆ, ಪನೀರ್, ಮೊಟ್ಟೆ, ತರಕಾರಿಗಳು, ಬೀನ್ಸ್ ಮತ್ತು ಕ್ಯಾರೆಟ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಆಹಾರಗಳಾಗಿವೆ.
ವೇಟ್ ಟ್ರೇನಿಂಗ್ :
ಪ್ರಾಂಜಲ್ ಪ್ರತಿದಿನ 45-60 ನಿಮಿಷಗಳ ತೂಕ ತರಬೇತಿ (ವೇಟ್ ಟ್ರೇನಿಂಗ್ )ಮಾಡುತ್ತಾರೆ. ನಂತರ, ಅವರು 15-30 ನಿಮಿಷಗಳ ಲಘು ಕಾರ್ಡಿಯೋ ಮಾಡುತ್ತಾರೆ. ಅವರಿಗೆ ಜಂಪಿಂಗ್ ವರ್ಕೌಟ್ಗಳು ಅಥವಾ ಅತಿಯಾದ ವರ್ಕ್ ಔಟ್ ಇಷ್ಟವಾಗುವುದಿಲ್ಲವಂತೆ.
ಮಾಡಿಕೊಂಡಿರುವ 5 ಸಣ್ಣ ಬದಲಾವಣೆಗಳು:
ಪ್ರಾಂಜಲ್ ತೂಕ ಇಳಿಸಿಕೊಳ್ಳಲು ತಮ್ಮ ಲೈಫ್ ಸ್ಟೈಲ್ ನಲ್ಲಿ ಈ 5 ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
> ಪ್ರಾಂಜಲ್ ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರು ಕುಡಿಯುತ್ತಾರೆ. ಆದರೆ ಖಾಲಿ ನೀರಲ್ಲ ಅದಕ್ಕೆ ಆಪಲ್ ಸೈಡರ್ ವಿನೆಗರ್ ಅಥವಾ ನಿಂಬೆ ರಸ ಸೇರಿಸಿ ಕುಡಿಯುತ್ತಾರೆ.
> ಊಟಕ್ಕೆ ಮುಂಚೆ ಹಸಿ ಕ್ಯಾರೆಟ್ ತಿನ್ನುತ್ತಾರೆ.
>ಪ್ರತಿದಿನ ಒಂದು ಟೀಚಮಚ ತುಳಸಿ ಬೀಜಗಳನ್ನು ಸೇವಿಸುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.
>ಜೀರ್ಣಕ್ರಿಯೆಗೆ ಸಹಾಯ ಮಾಡಲು ಅವನು ಪ್ರತಿದಿನ ಊಟಕ್ಕೆ ಮೊದಲು 15 ನಿಮಿಷಗಳ ಕಾಲ ವಾಕ್ ಮಾಡುತ್ತಾರೆ. ವಾಕ್ ಮಾಡದಿದ್ದರೆ 10 ಸ್ಕ್ವಾಟ್ಗಳನ್ನು ಮಾಡುತ್ತಾರೆ.
(ಸೂಚನೆ :ಈ ಲೇಖನವು ಪ್ರಾಂಜಲ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದನ್ನು ತಜ್ಞರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ಈ ಲೇಖನದಲ್ಲಿ ಉಲ್ಲೇಖಿಸಲಾದ ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ. ಇದಕ್ಕೆ ZEE NEWS ಜವಾಬ್ದಾರರಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.