ಯಾವುದೇ ಔಷಧ, ಪಥ್ಯವಿಲ್ಲದೇ.. ಮಧುಮೇಹವನ್ನು ಸಂಪೂರ್ಣ ಕಂಟ್ರೋಲ್‌ ಮಾಡುತ್ತೆ ಒಂದು ಲೋಟ ನೀರು! ಹೇಗೆ ಗೊತ್ತೇ?

Water for control Blood Sugar: ಇಂದಿನ ಒತ್ತಡದ ಜೀವನದಲ್ಲಿ, ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಖ್ಯ ಸಮಸ್ಯೆ ಎಂದರೇ ಮಧುಮೇಹ.  

Written by - Savita M B | Last Updated : Apr 16, 2025, 11:25 AM IST
  • ಇಂದಿನ ಒತ್ತಡದ ಜೀವನದಲ್ಲಿ, ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
  • ಅದರಲ್ಲಿ ಮುಖ್ಯ ಸಮಸ್ಯೆ ಎಂದರೇ ಮಧುಮೇಹ.
 ಯಾವುದೇ ಔಷಧ, ಪಥ್ಯವಿಲ್ಲದೇ.. ಮಧುಮೇಹವನ್ನು ಸಂಪೂರ್ಣ ಕಂಟ್ರೋಲ್‌ ಮಾಡುತ್ತೆ ಒಂದು ಲೋಟ ನೀರು! ಹೇಗೆ ಗೊತ್ತೇ?

Health Tips: ಇಂದಿನ ಒತ್ತಡದ ಜೀವನದಲ್ಲಿ, ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಖ್ಯ ಸಮಸ್ಯೆ ಎಂದರೇ ಮಧುಮೇಹ. ಇದು ಅತ್ಯಂತ ಅಪಾಯಕಾರಿ. ಒಮ್ಮೆ ಇದು ಬಂದರೇ, ನಿಮ್ಮ ಜೀವನದುದ್ದಕ್ಕೂ ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ತಿನ್ನುವುದು, ಮಲಗುವುದು ಮತ್ತು ಕೆಲಸ ಮಾಡುವಂತಹ ಹಲವು ವಿಷಯಗಳನ್ನು ಹತೋಟಿಯಲ್ಲಿಡಬೇಕಾಗುತ್ತದೆ.. ಮಧುಮೇಹ ಸಮಸ್ಯೆಯಿಂದ ಪರಿಹಾರ ಪಡೆಯಲು ಅನೇಕ ಜನರು ಔಷಧಿಗಳಿಂದ ಹಿಡಿದು ಆಯುರ್ವೇದದವರೆಗೆ ಎಲ್ಲವನ್ನೂ ಅನುಸರಿಸುತ್ತಾರೆ. ಆದರೆ, ಮಧುಮೇಹಿಗಳು ಈ ಔಷಧಿಗಳನ್ನು ಬಳಸುವುದರ ಜೊತೆಗೆ, ಉತ್ತಮ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ದೇಹವು ಮೂತ್ರದ ಮೂಲಕ ಹೆಚ್ಚುವರಿ ಗ್ಲೂಕೋಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಬೇಸಿಗೆಯಲ್ಲಿ ಮಧುಮೇಹ ರೋಗಿಗಳು ವಿಶೇಷವಾಗಿ ನಿರ್ಜಲೀಕರಣದ ಅಪಾಯವನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ಬಹಳ ಜಾಗರೂಕರಾಗಿರಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು ಎಂದು ಸೂಚಿಸಲಾಗುತ್ತದೆ. ನೀರನ್ನು ಹೇಗೆ ಸೇವಿಸಬೇಕು? ಯಾವ ಸಮಯದಲ್ಲಿ ಕುಡಿಯಬೇಕು? ಎಷ್ಟು ಕುಡಿಯಬೇಕು? ಬನ್ನಿ, ಈಗ ವಿವರಗಳನ್ನು ತಿಳಿದುಕೊಳ್ಳೋಣ..

Add Zee News as a Preferred Source

ಊಟಕ್ಕೂ ಮುನ್ನ ನೀರು ಕುಡಿಯಿರಿ: 
ಮಧುಮೇಹಿಗಳು ಊಟಕ್ಕೆ ಮೊದಲು ನೀರು ಕುಡಿಯಬೇಕೆಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ನೀವು ಮನೆಯಲ್ಲಾಗಲಿ ಹೊರಗಾಗಲಿ ಊಟ ಮಾಡುವ ಮೊದಲು ನೀರು ಕುಡಿಯುವುದು ಒಳ್ಳೆಯದು.  

ಇದನ್ನೂ ಓದಿ: ಈ ರೀತಿ ಮುಖಕ್ಕೆ ʼಗ್ಲಿಸರಿನ್ʼ ಬಳಸಿ ಅದ್ಭುತ ಪ್ರಯೋಜನ ಪಡೆಯಿರಿ! ಹೊಳಪು ತ್ವಚೆ ನಿಮ್ಮದಾಗುವುದು

ಇಂತಹ ಆಹಾರವನ್ನು ಸೇವಿಸಬೇಕು: 
ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ನೀರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಇದು ದೇಹಕ್ಕೆ ನೀರನ್ನು ಒದಗಿಸುವುದಲ್ಲದೆ ಶಕ್ತಿಯನ್ನು ಸಹ ನೀಡುತ್ತದೆ ಎಂದು ಹೇಳಲಾಗುತ್ತದೆ.

ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ: 
ಮಧುಮೇಹ ಇರುವವರು ಯಾವಾಗಲೂ ನೀರಿನ ಬಾಟಲಿಯನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ಹೊರಗೆ ಹೋದಾಗ.. ಆಗ್ಗಾಗೆ ನೀರು ಕುಡಿಯಬೇಕು. ಇದರಿಂದ ನಿರ್ಜಲೀಕರಣದ ಸಮಸ್ಯೆ ಉದ್ಭವಿಸುವುದಿಲ್ಲ.

ಗಂಟೆಗೊಮ್ಮೆ ನೀರು ಕುಡಿಯುವಂತೆ ಅಲರಾಂ: 
ಅನೇಕ ಜನರು ಕೆಲಸದಲ್ಲಿ ಮುಳುಗಿ ನೀರು ಕುಡಿಯುವುದನ್ನು ಮರೆತುಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಸ್ಮಾರ್ಟ್ ವಾಚ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ನೀವು ಅಲಾರಾಂ ಸೆಟ್‌ ಮಾಡಬೇಕು. ಇದರಿಂದ ನೀವು ಪ್ರತಿ ಗಂಟೆಗೆ ಒಮ್ಮೆ ಅಥವಾ ಅರ್ಧ ಗಂಟೆಗೆ ಒಮ್ಮೆ ನೀರು ಕುಡಿಯುವಂತಾಗುತ್ತದೆ.. 

ಮತ್ತೊಂದು ವಿಧಾನ: 
ಯಾರಿಗಾದರೂ, ಪದೇ ಪದೇ ಖಾಲಿ ನೀರನ್ನು ಕುಡಿಯುವುದು ಸ್ವಲ್ಪ ಬೇಡವೆನಿಸಿಬಹುದು. ಆ ಸಂದರ್ಭದಲ್ಲಿ, ನೀವು ನೀರಿಗೆ ನಿಂಬೆ, ಸೌತೆಕಾಯಿ ಅಥವಾ ಇತರ ಹಣ್ಣಿನ ಹೋಳುಗಳನ್ನು ಸೇರಿಸಿ ಕುಡಿಯಬಹುದು. ಇದು ರುಚಿಕರವಾಗಿರುವುದಲ್ಲದೆ, ಹೆಚ್ಚು ನೀರು ಕುಡಿಯಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ರೀತಿ ಮುಖಕ್ಕೆ ʼಗ್ಲಿಸರಿನ್ʼ ಬಳಸಿ ಅದ್ಭುತ ಪ್ರಯೋಜನ ಪಡೆಯಿರಿ! ಹೊಳಪು ತ್ವಚೆ ನಿಮ್ಮದಾಗುವುದು

ನೀರಿನ ಮಟ್ಟದ ಟ್ರ್ಯಾಕಿಂಗ್: 
ಇದು ಬೇಸಿಗೆ. ಈ ಋತುವಿನಲ್ಲಿ ಮಧುಮೇಹ ರೋಗಿಗಳು ನಿರ್ಜಲೀಕರಣಕ್ಕೆ ಹೆಚ್ಚು ಒಳಗಾಗುತ್ತಾರೆ. ಅದಕ್ಕಾಗಿಯೇ ನೀವು ನಿಮ್ಮ ದೇಹದಲ್ಲಿನ ನೀರಿನ ಅಂಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು.  

ಗಮನಿಸಿ : ಮೇಲಿನ ಮಾಹಿತಿಯು ಸಾರ್ವಜನಿಕರ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುತ್ತಿಲ್ಲ. ನೀವು ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಬಳಿಕ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

...Read More

Trending News