ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಗೆ ಶೀಘ್ರದಲ್ಲಿಯೇ ಲಸಿಕೆ ಸಿದ್ಧವಾಗುವ ನಿರೀಕ್ಷೆ ಇದೆ. ವಿಶ್ವಾದ್ಯಂತ ಈ ಲಸಿಕೆಗೆ ಹಲವೆಡೆ ಕ್ಲಿನಿಕಲ್ ಟ್ರಯಲ್ ಗಳು ಆರಂಭಗೊಂಡಿವೆ. ಭಾರತದಲ್ಲಿಯೂ ಕೂಡ ಹಲವು ಫಾರ್ಮಾ ಕಂಪನಿಗಳು ಈ ವೈರಸ್ ವಿರುದ್ಧ ಹೋರಾಡುವ ಔಷಧಿಯ ತಯಾರಿಕೆಯಲ್ಲಿ ತೊಡಗಿವೆ. ಈಗಾಗಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಗ್ಲೆನ್ ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ತಯಾರಿಸಿರುವ ಮತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುವ ಮಾತ್ರೆ 'ಫೈವಿಪಿರಾವಿರ್ ನ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿದೆ.
ಹೊಸ ಔಷಧಿಯ ಘೋಷಣೆ
ಈಗಾಗಲೇ ಗ್ಲೆನ್ ಮಾರ್ಕ್ ಫೈವಿಪಿರಾವಿಯರ್ ಹೆಸರಿನ ಔಷಧಿಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇಂದು ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಕಾಂಬಿನೇಶನ್ ಜೊತೆಗೆ ಮತ್ತೊಂದು ನೂತನ ಔಷಧಿಯ ಟ್ರಯಲ್ ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಇದಕ್ಕಾಗಿ ಸರ್ಕಾರದಿಂದಲೂ ಕೂಡ ಅನುಮೋದನೆ ಸಿಕ್ಕಿದೆ ಎಂದು ಕಂಪನಿ ಹೇಳಿದೆ. ಈ ಕುರಿತು 'ಝಿ ಬಿಸಿನೆಸ್'ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಗ್ಲೆನ್ ಮಾರ್ಕ್ ಕಂಪನಿಯ ಉಪಾಧ್ಯಕ್ಷೆ ಡಾ.ಮೋನಿಕಾ ಟಂಡನ್, ಯಾವುದು ಈ ಹೊಸ ಔಷಧಿ? ಮತ್ತು ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಹೇಳಿದ್ದಾರೆ.
ಕೊರೊನಾ ವೈರಸ್ ನ ಈ ಹೊಸ ಟ್ರಯಲ್ ಏನು?
ಡಾ. ಮೋನಿಕಾ ಟಂಡನ್ ನೀಡಿರುವ ಮಾಹಿತಿ ಪ್ರಕಾರ, ಈ ನೂತನ ಡ್ರಗ್ ಟ್ರಯಲ್ ಈ ಹಿಂದಿನ ಪ್ರಯೋಗಕ್ಕಿಂತ ಭಿನ್ನವಾಗಿದೆ. ಕೊರೊನಾ ವೈರಸ್ ನ ಚಿಕಿತ್ಸೆಗಾಗಿ ನೂತನ ಔಷಧಿಯ ಡ್ರಗ್ ಟ್ರಯಲ್ ಆರಂಭಿಸಲಾಗುತ್ತಿದೆ. ಈ ಹೊಸ ಔಷಧಿ ಎರಡು ಔಷಧಿಗಲಾಗಿರುವ ಫೈವಿಪಿರಾವಿರ್ ಹಾಗೂ ಉಮಿಫೆನೋವಿರ್ ಗಳ ಸಂಯೋಜನೆ ಆಗಿದೆ. ಕಂಪನಿಯ ಈ ಹೊಸ ಔಷಧಿಯ ಕಾಂಬಿನೇಶನ್ ಪ್ರಯೋಗಕ್ಕೆ DCGI ಅನುಮೋದನೆ ಕೂಡ ನೀಡಿದೆ ಎಂದು ಡಾ. ಟಂಡನ್ ಹೇಳಿದ್ದಾರೆ.
ಈ ಔಷಧಿ ಹೇಗೆ ಕಾರ್ಯನಿರ್ವಹಿಸಲಿದೆ?
ಈ ಕುರಿತು ಹೇಳಿಕೆ ನೀಡಿರುವ ಡಾ.ಮೋನಿಕಾ ಟಂಡನ್ 'ಫೈವಿಪಿರಾವಿರ್' ಸೋಂಕಿನಿಂದ ಪ್ರಭಾವಿತ ಕೋಶಗಳನ್ನು ನಿವಾರಿಸುತ್ತದೆ ಹಾಗೂ ಮುಂದಿನ ದುಷ್ಪ್ರಭಾವವನ್ನು ತಡೆಯುತ್ತದೆ. ಇನ್ನೊಂದೆಡೆ, ಉಮಿಫೆನೋವಿರ್ ಕೋಶಗಳಲ್ಲಿ ಕೊರೊನಾ ವೈರಸ್ ಸೊಂಕಿನ ಪ್ರವೇಶವನ್ನು ತಡೆಯುತ್ತದೆ. ದೇಶಾದ್ಯಂತ ಈ ಔಷಧಿಯನ್ನು ಸುಮಾರು 158 ಕೊರೊನಾ ಸೋಂಕಿತ ರೋಗಿಗಳ ಮೇಲೆ ಟ್ರಯಲ್ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಮೊದಲ ಡೋಸ್ ನಲ್ಲಿ 1800 mg ಫೈವಿಪಿರಾವಿರ್ ಹಾಗೂ 800 mg ಉಮಿಫೆನೋವಿರ್ ನೀಡಲಾಗುವುದು. ನಂತರದ ಡೋಸ್ ನಲ್ಲಿ 800mg +800mg ನೀಡಲಾಗುವುದು. ಒಟ್ಟು 14 ದಿನಗಳ ಕಾಲ ರೋಗಿಗಳಿಗೆ ಈ ಔಷಧಿ ನೀಡಿ ನಂತರ ಟೆಸ್ಟ್ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಈಗಾಗಲೇ ಫೈವಿಪಿರಾವಿರ್ ಔಷಧಿಯ ಕ್ಲಿನಿಕಲ್ ಟ್ರಯಲ್ ಆರಂಭಗೊಂಡಿದೆ ಎಂದು ಅವರು ಹೇಳಿದ್ದಾರೆ.