)
ಎಷ್ಟೋ ಯುವಕರು ಮದುವೆಯಾಗಬೇಕು ಅಂತಾರೆ ಆದರೆ ವಧುನೇ ಸಿಗುತ್ತಿರಲ್ಲ. ಹಾಗೇ ಎಷ್ಟೋ ಯುವತಿಯರು ಮದುವೆಯಾಗಬೇಕು ಎಂದು ಕಾದುಕುಳಿತ್ತಿದ್ದರೂ ಕೆಲವೊಂದು ಸಮಸ್ಯೆಗಳಿಂದ ಮದುವೆ ಅನ್ನೋದು ದೂರವಾಗುತ್ತಿರುತ್ತದೆ. ಹೀಗೆ ವಿವಾಹವಾಗದೇ ಇರುವುದಕ್ಕೆ ಕೆಲವೊಂದು ದೋಷಗಳು ಇರುತ್ತವೆ. ಅವುಗಳನ್ನು ಜ್ಯೋತಿಷ್ಯ ತಜ್ಞರಿಂದ ಕೇಳಿ ಪರಿಹಾರ ಕಂಡುಕೊಳ್ಳಬಹುದು. ಅದರಂತೆ ಮದುವೆ ಸಮೀಪ ಬಂದು..ಬಂದು ಕ್ಯಾನ್ಸಲ್ ಆಗುತ್ತದೆ, ಅಡೆತಡೆಗಳು ಆಗುತ್ತಿವೆ ಎಂದರೆ ನಿಮ್ಮ ಮನೆಯಲ್ಲಿ ಈ 6 ಸಸ್ಯಗಳನ್ನು ಬೆಳೆಸಿ ಅದೃಷ್ಟ ಪರೀಕ್ಷಿಸಿಕೊಳ್ಳಿ.
ಯಾರ ಮನೆ ಮುಂದಾಗಲಿ ತುಳಸಿ ಗಿಡ ಇರಬೇಕು. ಏಕೆಂದರೆ ಇದು ನಮ್ಮ ಆರೋಗ್ಯದಿಂದ ಮನೆಯ ಇತರೆ ಸಮಸ್ಯೆಗಳನ್ನು ತಾನಾಗಿಯೇ ದೂರ ಮಾಡುತ್ತದೆ. ಶುದ್ಧತೆಯ ಸಂಕೇತವೆಂದು ಪರಿಗಣಿಸಲ್ಪಡುವ ಈ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿ ದಿನ ಅಥವಾ ವಾರಕ್ಕೊಮ್ಮೆ ಪೂಜಿಸುವುದರಿಂದ ಸಕಾರಾತ್ಮಕ ಶಕ್ತಿ ನೀಡುತ್ತದೆ. ಇದರಿಂದ ಮನೆಯಲ್ಲಿ ಮದುವೆಯಾಗದವರಿಗೆ ಕಾಲ ಕೂಡಿಬರಲಿದೆ. ತುಳಸಿ ಪೂಜೆಯಿಂದ ಮದುವೆಗೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಯಾಗುತ್ತವೆ.
ಬಾಳೆ ಗಿಡ ವರ್ಷ ಪೂರ್ತಿ ಹಣ್ಣುಗಳನ್ನು ಕೊಡುವ ಈ ಗಿಡ ನಮ್ಮ ಮನೆಯಲ್ಲಿ ಬೆಳೆಸಿದರೆ ಮದುವೆಯ ಅಡೆತಡೆ ಮತ್ತು ಸಮಸ್ಯೆಗಳನ್ನು ನಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳುತ್ತದೆ. ಈ ಗಿಡ ಮನೆಗೆ ಧನಾತ್ಮಕ ಶಕ್ತಿ ತರುತ್ತದೆ. ಇದಕ್ಕೂ ನೀವು ಪೂಜೆ ಮಾಡಿದರೆ ವೈವಾಹಿಕ ಜೀವನದ ಸಮಸ್ಯೆಗಳಿಗೆ ಪರಿಹಾರ ನಾವು ಕಂಡುಕೊಳ್ಳಬಹುದು. ಮದುವೆಗೆ ಇರುವ ಅಡೆತಡೆಗಳನ್ನು ಉಂಟುಮಾಡುವ ಕುಜ ದೋಷ ಇರುವರು ಪರಿಹಾರ ಕಾಣಬಹುದು.
ಮಲ್ಲಿಗೆ ಹೂವುಗಳ ಸುವಾಸನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಮಲ್ಲಿಗೆ ಗಿಡವನ್ನು ಮನೆಯಲ್ಲಿ, ತೋಟದಲ್ಲಿ ಬೆಳೆಸುವುದರಿಂದ ಕುಟುಂಬದಲ್ಲಿ ಸಂತೋಷ ವೃದ್ಧಿಯಾಗುತ್ತದೆ. ಕುಟುಂಬದ ಸದಸ್ಯರ ನಡುವೆ ಅನುಬಂಧ ಸೃಷ್ಟಿಸುತ್ತದೆ. ಇದು ಕೂಡ ಮದುವೆಯಾಗದವರ ಅಡೆತಡೆ ತೆಗೆದು ಹಾಕಿ ಶುಭಸುದ್ದಿಯನ್ನು ಕೊಡುತ್ತದೆ.
ಚೆಂಡು ಹೂ ಜಾತಿಗೆ ಸೇರುವ ಮಾರಿಗೋಲ್ಡ್ ಗಿಡವೂ ಮನೆಯಲ್ಲಿ ಇರುವುದರಿಂದ ಧನಾತ್ಮಕ ಸಮಯಗಳು ಮೂಡುತ್ತದೆ. ವಾಸ್ತವವಾಗಿ ಇದು ಶಾಂತಿ ಮತ್ತು ನೆಮ್ಮದಿ ಸೃಷ್ಟಿಸುತ್ತದೆ. ಶಾಂತಿ, ಶುದ್ಧತೆ ಹಾಗೂ ಸಮತೋಲನಕ್ಕೆ ಸಂಬಂಧಿಸಿದ ಈ ಹೂವು ಮದುವೆ ಆಗದೇ ಇರುವವರಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತದೆ. ಈ ಸಸ್ಯವನ್ನು ಮನೆಯ ಪೂರ್ವ ಭಾಗದಲ್ಲಿ ಇಟ್ಟುಕೊಂಡ್ರೆ ಉತ್ತಮ.
ಹೂವುಗಳ ರಾಣಿ ಎಂದೇ ಖ್ಯಾತಿ ಆದ ಪಿಯೋನಿ ಹೂವಿನ ಗಿಡ ಮನೆಯಲ್ಲಿ ಬೆಳೆಸಿಕೊಳ್ಳಬೇಕು. ಏಕೆಂದರೆ ಇದು ಸೌಂದರ್ಯ ಮತ್ತು ಪ್ರೀತಿಯ ಸಂಕೇತವಾಗಿದೆ. ಜೀವನದಲ್ಲಿ ಹೊಸ ಆರಂಭಗಳನ್ನು ಸಂಕೇತಿಸುತ್ತದೆ. ಜೊತೆಗೆ ವಿವಾಹಕ್ಕೂ ಹೊಸ ಅಧ್ಯಾಯದ ಮಾರ್ಗಗಗಳನ್ನು ತರುತ್ತದೆ. ಇದರ ಪರಿಮಳ ಇದೆಯಲ್ಲ, ಅದು ಮನೆಯ ಶಾಂತಿಗೆ ಒಳ್ಳೆಯದು. ಇನ್ನೊಂದು ವಿಷಯ ಎಂದರೆ ಅವಿವಾಹಿತ ಮಹಿಳೆಯರು ಇದನ್ನು ಬೆಳೆಸಿದರೆ ಫಲ ಸಿಗುವುದು ದಟ್ಟವಾಗಿದೆ.
ಆರ್ಕಿಡ್ ಗಿಡವನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇಟ್ಟರೇ ಎಲ್ಲವೂ ಕೂಡಿ ಬರತ್ತದೆ. ಆರ್ಕಿಡ್ ಗಿಡಗಳು ಪ್ರೀತಿ, ಸೌಂದರ್ಯ ಮತ್ತು ಹೊಸ ಆರಂಭದ ಸಂಕೇತವಾಗಿದೆ. ಪ್ರೀತಿ, ಪ್ರೇಮಾ ಹಾಗೂ ಜೀವನದಲ್ಲಿನ ಸಮಸ್ಯೆಗಳನ್ನು ನಿವಾರಿಸುವಂತಹ ಧನಾತ್ಮಕತೆಯನ್ನು ಒದಗಿಸುತ್ತದೆ. ನಮ್ಮ ವಿವಾಹಕ್ಕೆ ಇರುವ ಅಡೆತಡೆಗಳನ್ನು ಶಮನಗೊಳಿಸುತ್ತದೆ.