)
Hanuman fruit for diabetes : ಹೆಚ್ಚಿನ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇಬು, ಬಾಳೆಹಣ್ಣು, ದ್ರಾಕ್ಷಿ ಮತ್ತು ಕಿತ್ತಳೆ ಮುಂತಾದ ಹಣ್ಣುಗಳ ತಿನ್ನುವುದು ಒಳ್ಳೆಯದು ಅಂದುಕೊಂಡಿರುತ್ತಾರೆ. ಅಷ್ಟೇ ಅಲ್ಲ ಈ ಹಣ್ಣುಗಳು ಎಷ್ಟೇ ದುಬಾರಿಯಾಗಿದ್ದರು ಅವುಗಳನ್ನು ಖರೀದಿಸುತ್ತಾರೆ. ಆದರೆ ನಾವು ಹೇಳಲು ಹೊರಟಿರುವ ಈ ವಿಶೇಷ ಹಣ್ಣಿನ ಬಗ್ಗೆ ನೀವು ಕೇಳಿದರೆ ಇನ್ನು ಮುಂದೆ ಈ ಹಣ್ಣುಳನ್ನು ಬಿಟ್ಟು ಈ ವಿಶೇಷ ಫಲವನ್ನೇ ಮನೆಗೆ ತರುತ್ತೀರಾ.. ಏಕೆಂದರೆ ಈ ಎಲ್ಲ ಹಣ್ಣಗಳನ್ನು ತಿಂದಾಗ ಸಿಗುವ ಪ್ರಯೋಜನ ಈ ಒಂದು ಫಲದಲ್ಲಿ ಇದೆ. ಈ ಅಪರೂಪದ ಹಣ್ಣಿನ ಹೆಸರು ಹನುಮಾನ್ ಹಣ್ಣು. ಇದರ ಪ್ರಯೋಜನಗಳು ಇಲ್ಲಿವೆ.
ಹನುಮಾನ್ ಹಣ್ಣು ಎಲ್ಲಿ ಸಿಗುತ್ತದೆ? : ಹನುಮಾನ್ ಹಣ್ಣು ಹೆಚ್ಚಾಗಿ ಮೆಕ್ಸಿಕೋ, ದಕ್ಷಿಣ ಅಮೆರಿಕಾ ಹಾಗೂ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಇದು ಹೆಚ್ಚು ಸಾಮಾನ್ಯವಾಗಿಲ್ಲ, ಆದರೆ ಕೆಲ ಕಡೆಗಳಲ್ಲಿ ಬೆಳೆದಿರುವುದು ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಅನ್ನೋನಾ ಮುರಿಕಾಟಾ.
ರುಚಿ ಹೇಗಿರುತ್ತದೆ? : ಹನುಮಾನ್ ಹಣ್ಣಿನ ರುಚಿ ವಿಶೇಷವಾಗಿದ್ದು, ಒಂದೇ ಸಮಯದಲ್ಲಿ ಸಿಹಿ ಹಾಗೂ ಸ್ವಲ್ಪ ಹುಳಿ ಮಿಶ್ರಿತವಾಗಿರುತ್ತದೆ. ಇದನ್ನು ತಿಂದವರು ಇದಕ್ಕೆ ಅನಾನಸ್ ಮತ್ತು ಸ್ಟ್ರಾಬೆರಿ ಮಿಶ್ರಣದಂತೆ ರುಚಿ ಇದೆ ಎಂದು ಹೇಳುತ್ತಾರೆ. ಹೀಗಾಗಿ ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಇದರಲ್ಲಿರುವ ಪೌಷ್ಟಿಕಾಂಶಗಳು
100 ಗ್ರಾಂ ಹನುಮಾನ್ ಹಣ್ಣಿನಲ್ಲಿ –
81 ಗ್ರಾಂ ನೀರು
276 ಕೆ.ಜೆ. ಶಕ್ತಿ
3.3 ಗ್ರಾಂ ನಾರಿನಾಂಶ (Fiber)
1 ಗ್ರಾಂ ಪ್ರೋಟೀನ್
278 ಮಿಗ್ರಾಂ ಪೊಟ್ಯಾಸಿಯಂ
14 ಮಿಗ್ರಾಂ ಕ್ಯಾಲ್ಸಿಯಂ
21 ಮಿಗ್ರಾಂ ಮೆಗ್ನೀಸಿಯಮ್
0.6 ಮಿಗ್ರಾಂ ಕಬ್ಬಿಣ
ಫೋಲೇಟ್ ಮತ್ತು ವಿಟಮಿನ್ C ಸಮೃದ್ಧವಾಗಿವೆ.
ಹನುಮಾನ್ ಹಣ್ಣು ದೇಹಕ್ಕೆ ಅಗತ್ಯವಾದ ಶಕ್ತಿ, ಆರೋಗ್ಯ, ರಕ್ತದ ಹರಿವು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತವೆ.
ಆರೋಗ್ಯ ಪ್ರಯೋಜನಗಳು
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ: ಹನುಮಾನ್ ಹಣ್ಣಿನಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ದೇಹವನ್ನು ಫ್ರೀರ್ಯಾಡಿಕಲ್ಗಳಿಂದ ರಕ್ಷಿಸುತ್ತವೆ. ಇವು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ದೇಹವನ್ನು ತಾಜಾಗೊಳಿಸುತ್ತವೆ.
ಬ್ಯಾಕ್ಟೀರಿಯಾ ವಿರೋಧಿ ಗುಣ: ದೇಹದಲ್ಲಿ ಬ್ಯಾಕ್ಟೀರಿಯಾ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಸೋಂಕುಗಳನ್ನು ತಡೆಯಲು ಸಹಾಯವಾಗುತ್ತದೆ.
ಉರಿಯೂತ ಕಡಿಮೆ ಮಾಡುವುದು: ಸಂಶೋಧನೆಗಳ ಪ್ರಕಾರ, ಹನುಮಾನ್ ಹಣ್ಣು ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದರಿಂದ ಸಂಧಿವಾತ ಮತ್ತು ಇತರೆ ಉರಿಯೂತ ಸಂಬಂಧಿತ ಸಮಸ್ಯೆಗಳನ್ನು ಕಡಿಮೆಮಾಡಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು: ಇದರಲ್ಲಿ ವಿಟಮಿನ್ C ಅಧಿಕವಾಗಿರುವುದರಿಂದ ದೇಹದಲ್ಲಿ ರೋಗನಿರೋದಕ ಶಕ್ತಿ (Immunity) ಹೆಚ್ಚುತ್ತದೆ. ಇದು ಸಾಮಾನ್ಯ ಜ್ವರ, ಕೆಮ್ಮು ಮುಂತಾದ ಸೋಂಕುಗಳಿಂದ ರಕ್ಷಿಸುತ್ತದೆ.
ಕ್ಯಾನ್ಸರ್ ವಿರೋಧಿ ಗುಣ: ಕೆಲವು ಅಧ್ಯಯನಗಳು ಹನುಮಾನ್ ಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿರಬಹುದು ಎಂದು ಸೂಚಿಸುತ್ತವೆ. ಆದರೆ ಇದನ್ನು ದೃಢೀಕರಿಸಲು ಇನ್ನಷ್ಟು ಸಂಶೋಧನೆ ಅಗತ್ಯ.
ಇತರೆ ಪ್ರಯೋಜನಗಳು:
ಮಧುಮೇಹ ನಿಯಂತ್ರಣಕ್ಕೆ ಸಹಾಯಕ
ರಕ್ತದ ಒತ್ತಡವನ್ನು ನಿಯಂತ್ರಿಸುವುದು
ಯಕೃತ್ತಿನ ಆರೋಗ್ಯವನ್ನು ಕಾಪಾಡುವುದು
ಜೀರ್ಣಕ್ರಿಯೆ ಸುಧಾರಿಸುವುದು
ಸಂಶೋಧನಾ ಮಾಹಿತಿ
ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಹನುಮಾನ್ ಹಣ್ಣಿನ ಸಸ್ಯದಲ್ಲಿ ಸುಮಾರು 212 ಫೈಟೊಕೆಮಿಕಲ್ಗಳು ಪತ್ತೆಯಾಗಿವೆ. ಇವುಗಳಲ್ಲಿ ಆಲ್ಕಲಾಯ್ಡ್ಗಳು, ಫ್ಲೇವನಾಯ್ಡ್ಸ್, ಸಾರಭೂತ ತೈಲಗಳು ಮುಂತಾದವು ಸೇರಿವೆ. ಇವು ದೇಹದ ವಿವಿಧ ಅಂಗಾಂಗಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಒಟ್ಟಿನಲ್ಲಿ, ಹನುಮಾನ್ ಹಣ್ಣು ಅಪರೂಪವಾದರೂ ಅದ್ಭುತ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ, ಅನೇಕ ಕಾಯಿಲೆಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಆದರೆ, ಇದನ್ನು ಔಷಧಿಯಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯಕ.