ಹೊಟ್ಟೆ ಭಾಗದ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತೆ ಒಂದೆಲಗ, ಒಂದೇ ತಿಂಗಳಿನಲ್ಲಿ ಸೈಜ್ ಝೀರೋಗೆ ಆಗುವಿರಿ!

Health News In KannadaL ಗೋಟು ಕೋಲದ ಚಿಕ್ಕ ಎಲೆಗಳಲ್ಲಿ ಹಲವು ಔಷಧೀಯ ಗುಣಗಳಿದ್ದು, ಕೊಬ್ಬನ್ನು ಸುಡುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.  

Written by - Nitin Tabib | Last Updated : Aug 17, 2023, 09:19 PM IST
  • ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ಗೋಟು ಕೋಲದ ಎಲೆಗಳನ್ನು ಸ್ವಚ್ಛಗೊಳಿಸಿ ನಂತರ ಅದನ್ನು ಪುಡಿಮಾಡಿ ಪೇಸ್ಟ್ ಮಾಡಿ.
  • ನಿತ್ಯ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಇದನ್ನು ಕುಡಿಯಿರಿ.
  • ನೀವು ಇದನ್ನು ನಿಯಮಿತವಾಗಿ ಮಾಡಿದರೆ, ಕೆಲವೇ ದಿನಗಳಲ್ಲಿ ದೇಹದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಅದರ ಪರಿಣಾಮವನ್ನು ನೀವು ಸ್ಪಷ್ಟವಾಗಿ ನೋಡಬಹುದು.
ಹೊಟ್ಟೆ ಭಾಗದ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತೆ ಒಂದೆಲಗ, ಒಂದೇ ತಿಂಗಳಿನಲ್ಲಿ ಸೈಜ್ ಝೀರೋಗೆ ಆಗುವಿರಿ! title=

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದ ಕಾರಣದಿಂದಾಗಿ ತೂಕ ಹೆಚ್ಚಾಗುವ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿದೆ. ತೂಕವನ್ನು ಹೆಚ್ಚಿಸುವುದು ಸುಲಭ, ಆದರೆ ಅದನ್ನು ಕಳೆದುಕೊಳ್ಳುವುದು ಹೆಚ್ಚು ಕಷ್ಟಕರ. ಇದರಿಂದಾಗಿ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ತೂಕವನ್ನು ಕಳೆದುಕೊಳ್ಳಲು, ಹೆಚ್ಚಿನ  ಜನರು ಕಡಿಮೆ ಕ್ಯಾಲೋರಿ, ತಾಲೀಮು ಮತ್ತು ಹಗುರ ಆಹಾರವನ್ನು ಅವಲಂಬಿಸಿರುತ್ತಾರೆ. ಆದರೆ, ಇಂದು ನಾವು ನಿಮಗೆ ಒಂದು ಹಸಿರು ಎಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದರ ಸಹಾಯದಿಂದ ನೀವು ನಿಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬಹುದು. ಆಯುರ್ವೇದದಲ್ಲಿ ಈ ಹಸಿರು ಎಲೆಯನ್ನು ಅನೇಕ ರೋಗಗಳನ್ನು ಗುಣಪಡಿಸಲು ವರ್ಷಗಳಿಂದ ಬಳಸಲಾಗುತ್ತಿದೆ. ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಈ ಹಸಿರು ಎಲೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಗೋಟು ಕೋಲ ಅಥವಾ ಒಂದೆಲಗ ಅಂದರೇನು?
ಒಂದೆಲಗ ಸೊಪ್ಪಿನ ಬಗ್ಗೆ ಹೇಳುವುದಾದರೆ, ಗೋಟು ಕೋಲ ಒಂದು ಗಿಡಮೂಲಿಕೆ ಸಸ್ಯ ಮತ್ತು ಅದರ ಎಲೆಗಳು ಚಿಕ್ಕ ವೃತ್ತಾಕಾರ ಮತ್ತು ಹಸಿರು ಬಣ್ಣವನ್ನು ಹೊಂದಿರುತ್ತವೆ. ಗೋಟು ಕೋಲದ ಚಿಕ್ಕ ಎಲೆಗಳಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಇದು ತುಂಬಾ ಪ್ರಯೋಜನಕಾರಿ ಸಸ್ಯವಾಗಿದೆ, ಆದರೆ ಅದನ್ನು ಸೇವಿಸುವ ಮೊದಲು, ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಿ. ಏಕೆಂದರೆ ಜ್ಞಾನವಿಲ್ಲದೆ ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವು ಅನಾನುಕೂಲತೆಗಳೂ ಉಂಟಾಗಬಹುದು.

ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ
ಒಂದೆಲಗದಲ್ಲಿರುವ  ಪೋಷಕಾಂಶಗಳು ಮತ್ತು ಗುಣಲಕ್ಷಣಗಳಿಂದಾಗಿ, ಇದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಬೊಜ್ಜು ವಿರೋಧಿ ಗುಣಗಳು ಗೋಟು ಕೋಲದಲ್ಲಿ ಕಂಡುಬರುತ್ತವೆ, ಇದು ದೇಹದಲ್ಲಿ ಇರುವ ಹೆಚ್ಚುವರಿ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಗೋಟು ಕೋಲ ಮೂಲಿಕೆ ಆತಂಕ, ಒತ್ತಡ, ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿದ್ರಾಹೀನತೆ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಯನ್ನು ಗುಣಪಡಿಸಲು ಸಹ ಇದನ್ನು ಬಳಸಲಾಗುತ್ತದೆ.

ಸೇವಿಸುವ ಸರಿಯಾದ ಮಾರ್ಗ ಯಾವುದು?
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ಗೋಟು ಕೋಲದ ಎಲೆಗಳನ್ನು ಸ್ವಚ್ಛಗೊಳಿಸಿ ನಂತರ ಅದನ್ನು ಪುಡಿಮಾಡಿ ಪೇಸ್ಟ್ ಮಾಡಿ. ನಿತ್ಯ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಇದನ್ನು ಕುಡಿಯಿರಿ. ನೀವು ಇದನ್ನು ನಿಯಮಿತವಾಗಿ ಮಾಡಿದರೆ, ಕೆಲವೇ ದಿನಗಳಲ್ಲಿ ದೇಹದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಅದರ ಪರಿಣಾಮವನ್ನು ನೀವು ಸ್ಪಷ್ಟವಾಗಿ ನೋಡಬಹುದು.

ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ 5 ಹಣ್ಣುಗಳ ಸಿಪ್ಪೆಗಳು ರಾಮಬಾಣ!

ಒಂದೆಲಗ ಯಾರು ಬಳಸಬಾರದು?
>>ಗರ್ಭಾವಸ್ಥೆ ಮತ್ತು ಹಾಲುಣಿಸುವ ತಾಯಂದಿರರು ಸೇವಿಸಬಾರದು
>>ಹೆಪಟೈಟಿಸ್ ಅಥವಾ ಯಕೃತ್ತಿನ ರೋಗ ಹೊಂದಿರುವವರು ಸೇವಿಸಬಾರದು
>>ಒಂದು ವಾರ ಅಥವಾ ಎರಡು ವಾರಗಳಲ್ಲಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಬಳಸಬಾರದು
>>18 ವರ್ಷದೊಳಗಿನ ಮಕ್ಕಳು ಸೇವಿಸಬಾರದು
>> ಚರ್ಮದ ಕ್ಯಾನ್ಸರ್ ಇರುವವರು ಬಳಸಬಾರದು
>>ಅಧಿಕ ಕೊಲೆಸ್ಟ್ರಾಲ್, ಮಧುಮೇಹ ರೋಗಿಗಳು ಬಳಸಬಾರದು. 

ಇದನ್ನೂ ಓದಿ-ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಈ ಹಣ್ಣುಗಳ ಎಲೆಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News