ಈ ʼಬೀಜʼಗಳನ್ನ ಒಂದು ವಾರ ತಿಂದು ನೋಡಿ: ನಿಮ್ಮ ಸ್ನಾಯು, ಮೂಳೆಗಳು ಉಕ್ಕಿನಂತೆ ಬಲಿಷ್ಠವಾಗುತ್ತವೆ!!

Seeds For Strong Muscles: ನಮ್ಮ ಆಹಾರದಲ್ಲಿ ಆರೋಗ್ಯಕರ ಬೀಜಗಳನ್ನು ಸೇರಿಸಿಕೊಳ್ಳುವುದರಿಂದ ಖನಿಜಗಳು ಮತ್ತು ಜೀವಸತ್ವಗಳು ದೊರೆಯುತ್ತವೆ. ಇದು ಪೌಷ್ಟಿಕ ಆಹಾರವೂ ಆಗಿದೆ. ದೇಹದ ಆರೋಗ್ಯಕ್ಕಾಗಿ ಇವುಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಇದು ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತದೆ. ಈ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ.

Written by - Puttaraj K Alur | Last Updated : Jun 10, 2025, 02:22 PM IST
  • ಅಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿದೆ
  • ಸೂರ್ಯಕಾಂತಿ ಬೀಜಗಳ ಸೇವನೆಯು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು
  • ಎಳ್ಳು ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಈ ʼಬೀಜʼಗಳನ್ನ ಒಂದು ವಾರ ತಿಂದು ನೋಡಿ: ನಿಮ್ಮ ಸ್ನಾಯು, ಮೂಳೆಗಳು ಉಕ್ಕಿನಂತೆ ಬಲಿಷ್ಠವಾಗುತ್ತವೆ!!

Seeds For Strong Muscles: ನಮ್ಮ ಆಹಾರದಲ್ಲಿ ಮುಖ್ಯವಾಗಿ ಆರೋಗ್ಯಕರ ಆಹಾರ ಸೇರಿಸಿಕೊಳ್ಳಬೇಕು. ಇದರಿಂದ ಮೂಳೆಗಳು, ಹಲ್ಲುಗಳು ಮತ್ತು ಕೂದಲು ಆರೋಗ್ಯಕರವಾಗಿ ಬೆಳೆಯುತ್ತವೆ. ಇವು ಚರ್ಮದ ಆರೋಗ್ಯಕ್ಕೂ ಸಹಾಯ ಮಾಡುತ್ತವೆ. ನಮ್ಮ ಆಹಾರದಲ್ಲಿ ಕೆಲವು ರೀತಿಯ ಬೀಜಗಳನ್ನು ಸೇರಿಸುವುದರಿಂದ ದೈಹಿಕ ಆರೋಗ್ಯ ಸುಧಾರಿಸಬಹುದು. ಇವು ಆರೋಗ್ಯಕರ ಕೊಬ್ಬುಗಳು ಹಾಗೂ ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಮುಖ್ಯವಾಗಿ ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ನಮ್ಮ ಮೆದುಳಿನ ಕಾರ್ಯವನ್ನ ಸುಧಾರಿಸಲು ಸಹಾಯ ಮಾಡುತ್ತವೆ. ಇವು ಆರೋಗ್ಯಕರ ಕರುಳಿನ ಚಲನೆಗೆ ಸಹ ಸಹಾಯ ಮಾಡುತ್ತವೆ.

Add Zee News as a Preferred Source

ಈ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣವನ್ನು ಸಹ ಹೊಂದಿವೆ. ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ. ಬೀಜಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇವುಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಆದ್ದರಿಂದ ಇವು ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಹೆಚ್ಚಿನ ಕೊಡುಗೆ ನೀಡುತ್ತವೆ. ನಮ್ಮ ನಿಯಮಿತ ಆಹಾರದಲ್ಲಿ ಬೀಜಗಳನ್ನು ಸೇರಿಸುವುದರಿಂದ ಮೆದುಳಿನ ಬೆಳವಣಿಗೆಯೂ ಸುಧಾರಿಸುತ್ತದೆ. ಇವುಗಳನ್ನು ತಿಂಡಿಯ ರೂಪದಲ್ಲಿಯೂ ತೆಗೆದುಕೊಳ್ಳಬಹುದು.

ಇದನ್ನೂ ಓದಿ: 21 ದಿನ ನಿತ್ಯ ಇದೊಂದು ಪಾನೀಯ ಸೇವಿಸಿಯೇ 21 ಕೆಜಿ ಕಡಿಮೆಯಾದ ಯುವತಿ !ಇಲ್ಲಿ ವ್ಯಾಯಾಮ, ಜಿಮ್ ಡಯೆಟ್ ಯಾವುದೂ ಬೇಕಿಲ್ಲ

ಅಗಸೆ ಬೀಜಗಳು: ನಮ್ಮ ನಿಯಮಿತ ಆಹಾರದಲ್ಲಿ ಅಗಸೆ ಬೀಜಗಳನ್ನು ಸೇರಿಸುವುದು ಬಹಳ ಮುಖ್ಯ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಇದು ಪೌಷ್ಟಿಕ ಆಹಾರವಾಗಿದೆ. ಇದು ರಕ್ತದೊತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಸೂರ್ಯಕಾಂತಿ ಬೀಜಗಳು: ಸೂರ್ಯಕಾಂತಿ ಬೀಜಗಳು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ ಇವುಗಳಲ್ಲಿ ವಿಟಮಿನ್ ʼಇʼ ಕೂಡ ಇರುತ್ತದೆ. ಈ ಬೀಜಗಳು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು. ಸಂಜೆ ತಿಂಡಿಯಾಗಿ ತಿನ್ನುವುದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ಎಳ್ಳು: ನಮ್ಮ ಅಜ್ಜಿಯರ ಕಾಲದಿಂದಲೂ ಎಳ್ಳನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಈ ಎಳ್ಳು ಕಬ್ಬಿಣದಿಂದ ಸಮೃದ್ಧವಾಗಿದೆ. ಇವುಗಳಲ್ಲಿ ಫೈಬರ್ ಮತ್ತು ಪ್ರೋಟೀನ್ ಇರುತ್ತದೆ. ಅವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಒಳ್ಳೆಯ ಕೊಬ್ಬು ಇರುತ್ತದೆ. ಈ ಎಳ್ಳನ್ನು ನಮ್ಮ ನಿಯಮಿತ ಊಟದಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: ಮಕ್ಕಳಲ್ಲಿ ಕೊಬ್ಬಿನ ಲಿವರ್ ಸಮಸ್ಯೆ..! ಈ 3 ತಪ್ಪು ಕಲ್ಪನೆಗಳ ಬಗ್ಗೆ ನಿಮಗೆ ತಿಳಿದಿರಲಿ

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News