ಮಕ್ಕಳಲ್ಲೂ ಹೆಚ್ಚುತ್ತಿದೆ ಹಾರ್ಟ್ ಅಟ್ಯಾಕ್ ಸಮಸ್ಯೆ !ಕಿರಿಯರಿರಲಿ, ಹಿರಿಯರೇ ಇರಲಿ ಹೃದಯದಲ್ಲಿ ಬ್ಲೋಕೆಜ್ ಇದ್ದಾಗ ಗೋಚರಿಸುವ ಲಕ್ಷಣ ಇದು!

Warning Signs And Symptoms Of Heart Blockage :  ಹೀಗಾಗುವುದಕ್ಕೆ ಇಂಥದ್ದೇ ನಿಖರವಾದ ಕಾರಣ ಎನ್ನುವುದು ಇನ್ನು ಕೂಡಾ ಖಾತರಿಯಾಗಿಲ್ಲ. ಆದರೆ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹ ಕೆಲವು ಸಂಕೇತಗಳನ್ನು ನೀಡುತ್ತವೆ.    

Written by - Ranjitha R K | Last Updated : Feb 24, 2025, 03:28 PM IST
  • ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಅನ್ನುವುದು ಶೀತ ಜ್ವರದಂತೆ ಬಾಧಿಸುತ್ತಿದೆ
  • ಒಂದು ಕಾಲದಲ್ಲಿ ವಯಸ್ಸಾದವರಿಗೆ ಹೃದಾಯಾಘಾತವಾಗುತ್ತಿತ್ತು.
  • ನಂತರ ಇದು ಮಧ್ಯ ವಯಸ್ಕರಲ್ಲಿಯೂ ಕಾಣಿಸತೊಡಗಿತ್ತು.
ಮಕ್ಕಳಲ್ಲೂ ಹೆಚ್ಚುತ್ತಿದೆ ಹಾರ್ಟ್ ಅಟ್ಯಾಕ್ ಸಮಸ್ಯೆ !ಕಿರಿಯರಿರಲಿ, ಹಿರಿಯರೇ ಇರಲಿ ಹೃದಯದಲ್ಲಿ ಬ್ಲೋಕೆಜ್ ಇದ್ದಾಗ ಗೋಚರಿಸುವ ಲಕ್ಷಣ ಇದು!

Warning Signs And Symptoms Of Heart Blockage : ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಅನ್ನುವುದು ಶೀತ ಜ್ವರದಂತೆ ಬಾಧಿಸುತ್ತಿದೆ. ಒಂದು ಕಾಲದಲ್ಲಿ ವಯಸ್ಸಾದವರಿಗೆ ಹೃದಾಯಾಘಾತವಾಗುತ್ತಿತ್ತು. ನಂತರ ಇದು ಮಧ್ಯ ವಯಸ್ಕರಲ್ಲಿಯೂ ಕಾಣಿಸತೊಡಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗುವುದಕ್ಕೆ ಇಂಥದ್ದೇ ನಿಖರವಾದ ಕಾರಣ ಎನ್ನುವುದು ಇನ್ನು ಕೂಡಾ ಖಾತರಿಯಾಗಿಲ್ಲ. ಆದರೆ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹ ಕೆಲವು ಸಂಕೇತಗಳನ್ನು ನೀಡುತ್ತವೆ.  

Add Zee News as a Preferred Source

ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ.ಈ ಹಾರ್ಟ್ ಬ್ಲಾಕ್ ಅನ್ನುವುದು ಮೂರು ಹಂತಗಳಲ್ಲಿ ಆಗುತ್ತದೆ. ಈ ಪೈಕಿ ಮೂರನೇ ಹಂತದಲ್ಲಿ ಪ್ರಾಣ ಹೋಗುವ ಅಪಾಯವಿರುತ್ತದೆ. ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ ಸಾಮಾನ್ಯವಾಗಿ ಇದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. 

ಇದನ್ನೂ ಓದಿ : ಇನ್ನೇನು ಬೇಸಿಗೆ ಬಂತು..ಈ ಕೂಲ್ ಡ್ರಿಂಕ್ಸ್ ಗಳನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ..! ಇಲ್ಲದಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ..!

ಉಸಿರಾಟದ ಸಮಸ್ಯೆ : 
ಕೆಲವೊಮ್ಮೆ  ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸದಾ ಏರುಸಿರು ತೆಗೆದುಕೊಳ್ಳುತ್ತಿರಬೇಕು ಎನಿಸುತ್ತದೆ. ಪ್ರತಿ ಬಾರಿ ಉಸಿರಾಟ ಬಹಳ ತ್ರಾಸದಾಯಕವಾಗಿರುತ್ತದೆ. ಈ ರೀತಿಯ ಉಸಿರಾಟದ ಸಮಸ್ಯೆ ಉಂಟಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. 

ಮೂರ್ಛೆ ಹೋಗುವುದು : 
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹಾರ್ಟ್ ನಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು. ಇದರೊಂದಿಗೆ,ಹೃದಯ ಬಡಿತದ ವೇಗ ವಿಪರೀತವಾಗಿ  ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿಯೂ ವೈದ್ಯರನ್ನು ಸಂಪರ್ಕಿಸಿ.

ಎದೆ ನೋವು : 
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ,ಆಸಿಡಿಟಿ ಎಂದೇ ನಿರ್ಲಕ್ಷಿಸುತ್ತಾರೆ.ಆದರೆ, ಈ ಸಮಸ್ಯೆ  ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಎದೆ ಮತ್ತು ಸುತ್ತ ಮುತ್ತ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ ವೈದ್ಯರನ್ನು ಸಂಪರ್ಕಿಸಿ.  

ಇದನ್ನೂ ಓದಿ : ಇನ್ನೇನು ಬೇಸಿಗೆ ಬಂತು..ಈ ಕೂಲ್ ಡ್ರಿಂಕ್ಸ್ ಗಳನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ..! ಇಲ್ಲದಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ..!

ತಲೆಸುತ್ತುವುದು : 
ತಲೆ ಸುತ್ತುವುದು ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣ ವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.

ವಾಕರಿಕೆ : 
ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿಸಮಸ್ಯೆ ಕಾಣಿಸಿಕೊಂಡರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. ಆದರೆ  ಈ ಲಕ್ಷಣ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.  

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News