)
Heart Attack Symptoms: ಕೆಟ್ಟ ಆಹಾರ ಪದ್ಧತಿ ಮತ್ತು ಹದಗೆಡುತ್ತಿರುವ ಜೀವನಶೈಲಿಯು ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಇಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುವಂತೆ ಮಾಡುತ್ತಿದೆ. ಇದು ಒಂದು ಕಾಲದಲ್ಲಿ ವಯಸ್ಸಾದವರನ್ನು ಆವರಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಯುವಕರು ಮಧುಮೇಹ, ಅಧಿಕ ರಕ್ತದೊತ್ತಡಕ್ಕೆ ಬಲಿಯಾಗುವುದಲ್ಲದೆ, ಹೃದಯಾಘಾತದಂತಹ ಕಾಯಿಲೆಗಳಿಗೂ ಬಲಿಯಾಗುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತಕ್ಕೆ ಬಲಿಯಾದ ಇಂತಹ ಅನೇಕ ಪ್ರಕರಣಗಳು ಕಂಡುಬಂದಿವೆ. ಇತ್ತೀಚೆಗೆ, ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆಕೆ, ಪುನೀತ್ ರಾಜ್ಕುಮಾರ್, ಸಿದ್ಧಾರ್ಥ್ ಶುಕ್ಲಾ ಅವರಂತಹವರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೃದಯಾಘಾತವನ್ನು ಯಾವುದೇ ಎಚ್ಚರಿಕೆ ಇಲ್ಲದೆ ಇದ್ದಕ್ಕಿದ್ದಂತೆ ಬರುವ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ಇತ್ತೀಚಿನ ಅಧ್ಯಯನವೊಂದು ಹೃದಯಾಘಾತಕ್ಕೆ ಒಂದು ದಶಕದ ಮೊದಲು ದೇಹದಲ್ಲಿ ಒಂದು ಸ್ಥಿತಿಯೂ ಉದ್ಭವಿಸುತ್ತದೆ ಎಂದು ಹೇಳಿಕೊಂಡಿದೆ. ಈ ಸ್ಥಿತಿಯನ್ನು ಆಂಜಿನಾ ಪೆಕ್ಟೋರಿಸ್ ಎಂದು ಕರೆಯಲಾಗುತ್ತದೆ.
ಹೃದಯಾಘಾತ ಇದ್ದಕ್ಕಿದ್ದಂತೆ ಬರುತ್ತದೆ, ಆದರೆ ಅದರ ಸಿದ್ಧತೆ ದೇಹದಲ್ಲಿ ದೀರ್ಘಕಾಲದವರೆಗೆ ನಡೆಯುತ್ತಿರುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಜನರು ಹೃದಯಾಘಾತಕ್ಕೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಸುಲಭವಲ್ಲ, ಆದರೆ ಜಾಗರೂಕರಾಗಿದ್ದರೆ, ನೀವು ಸ್ವಲ್ಪ ಸಮಯದ ಮೊದಲು ರೋಗಲಕ್ಷಣಗಳನ್ನು ಗುರುತಿಸಬಹುದು ಮತ್ತು ಈ ಮಾರಕ ರೋಗವನ್ನು ತಡೆಯಬಹುದು.
ಏಮ್ಸ್ನ ಮಾಜಿ ಸಲಹೆಗಾರ ಮತ್ತು ಸಾವೋಲ್ ಹಾರ್ಟ್ ಸೆಂಟರ್ನ ಸ್ಥಾಪಕ ಮತ್ತು ನಿರ್ದೇಶಕ ಮತ್ತು ಜೀವನಶೈಲಿ ತಜ್ಞ ಡಾ. ಬಿಮಲ್ ಝಾಂಜರ್ ಮಾತನಾಡಿ, ಹೃದಯಾಘಾತಕ್ಕೆ ಮೊದಲು, ನಿಮ್ಮ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನೀವು ಅವುಗಳನ್ನು ಗುರುತಿಸಿದರೆ, ಸುಲಭವಾಗಿ ಹೃದಯ ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು.
ಸ್ವಲ್ಪ ತಲೆನೋವು ಮತ್ತು ಅತ್ಯಂತ ದುರ್ಬಲ ಭಾವನೆ ಹೃದಯಾಘಾತಕ್ಕೆ ಮೊದಲು ಬರುವ ಒಂದು ಸ್ಥಿತಿಯಾಗಿದೆ, ಇದು ನಿಮ್ಮ ಹೃದಯವನ್ನು ರಕ್ಷಿಸಲು ನೀವು ಜಾಗರೂಕರಾಗಿರಬೇಕು ಎಂದು ಹೇಳುವ ಅಲರಾಂ ಎಂದರೂ ತಪ್ಪಾಗಲ್ಲ.
ಮಿತಿ ಮೀರಿ ಬೆವರುವುದು, ಹೆದರಿಕೆ ಮತ್ತು ಮೂರ್ಛೆ ಕೂಡ ಹೃದಯಾಘಾತದ ಲಕ್ಷಣಗಳಾಗಿರಬಹುದು. ಇನ್ನು ಹೃದಯಾಘಾತಕ್ಕೆ ಮೊದಲು ಭುಜದ ನೋವು ಸಹ ಕಾಣಿಸಿಕೊಳ್ಳುತ್ತದೆ. ಈ ನೋವು ಎರಡೂ ತೋಳುಗಳಲ್ಲಿಯೂ ಸಂಭವಿಸಬಹುದು.
ಹೃದಯಾಘಾತದ ಲಕ್ಷಣವೆಂದರೆ ದವಡೆ, ಸೊಂಟ, ವಿಶೇಷವಾಗಿ ಕೈಯ ಎದುರು ಭಾಗದಲ್ಲಿ ನೋವು ಕಾಣಿಸುತ್ತದೆ. ಕೆಲವೊಮ್ಮೆ ದೇಹ ಸಂಪೂರ್ಣ ತಣ್ಣಗಾಗಿ ಬೆವರು ಸುರಿಯಬಹುದು. ಇದೇ ವೇಳೆ ವಾಂತಿ ಕೂಡ ಆಗಬಹುದು.
ಹೆಚ್ಚುವರಿಯಾಗಿ, ವಾಸೊಸ್ಪಾಸ್ಟಿಕ್ ಆಂಜಿನಾದಂತಹ ಹೃದಯ ಸ್ಥಿತಿಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ಎದೆ ನೋವು ಅಥವಾ ಉಸಿರಾಟದ ತೊಂದರೆ ಅನುಭವಿಸುವ ಸ್ವಲ್ಪ ಮೊದಲು ಅಂದರೆ ಅರ್ಧ ಗಂಟೆ ಮೊದಲು ಸುಟ್ಟ ಟೋಸ್ಟ್ನಂತಹ ವಾಸನೆಯನ್ನು ಅನುಭವಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನು ಪ್ಯಾಂಥೋಮ್ ಸ್ಮೆಲ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮೆದುಳಿನ ಗೆಡ್ಡೆಗಳು, ತಲೆಗೆ ಗಾಯ ಅಥವಾ ಕೆಲವು ಔಷಧಿಗಳಂತಹ ಇತರ ಸ್ಥಿತಿಗಳೊಂದಿಗೆ ಸಂಬಂಧ ಹೊಂದಿವೆ.
ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು?
ನಿಮ್ಮ ದೇಹದಲ್ಲಿ ಅಂತಹ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ, ಇದರಿಂದ ದೊಡ್ಡ ಅಪಾಯವನ್ನು ತಪ್ಪಿಸಬಹುದು. ಆಸ್ಪತ್ರೆಗೆ ಹೋಗಿ ತಕ್ಷಣ ಎರಡು ಪರೀಕ್ಷೆಗಳನ್ನು ಮಾಡಿಸಿ, TROP T ಪರೀಕ್ಷೆ ಮತ್ತು ECG. ಇದು ನಿಮಗೆ ಹೃದಯಾಘಾತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಕ್ಷಣ ತಿಳಿಸುತ್ತದೆ.
ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ, ಜೀ ಕನ್ನಡ ನ್ಯೂಸ್ ಅವುಗಳನ್ನು ದೃಢೀಕರಿಸುವುದಿಲ್ಲ. ಅಂತಹ ಯಾವುದೇ ಚಿಕಿತ್ಸೆ/ಔಷಧಿ/ಆಹಾರ ಮತ್ತು ಸಲಹೆಯನ್ನು ಅಳವಡಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ