Heatstroke: ಬಿರು ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ದೇಹದಲ್ಲಿ ಕಾಣಿಸಿಕೊಳ್ಳುವ ಸುಸ್ತು, ಆಯಾಸವನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ 'ಹೀಟ್ಸ್ಟ್ರೋಕ್' ಉಂಟಾಗಬಹುದು.

Best Treatment To Prevent Heatstroke: ಬಿಸಿಲು ಬ್ರಹ್ಮಾಂಡವನ್ನೇ ಸುಡುತ್ತಿದೆ. ಈ ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ಮೊದಲಿಗೆ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದೇ ಹೋದಲ್ಲಿ "ಹೀಟ್ಸ್ಟ್ರೋಕ್" ಉಂಟಾಗಬಹುದು. ಈ ಬಿಸಿಲಿನ ಆಘಾತ ಜೀವವನ್ನೇ ತೆಗಿಯಬಹುದು. ಹೀಗಾಗಿ ಸುಡು ಬಿಸಿಲಲ್ಲಿ ಹೀಟ್ ಸ್ಟ್ರೋಕ್ ಅಪಾಯದಿಂದ ತಪ್ಪಿಸಿಕೊಳ್ಳಲು ಈ ಮಹತ್ವದ ಸಲಹೆಗಳನ್ನು ಪಾಲಿಸಿ.
ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿಪರೀತ ಎನಿಸುವಷ್ಟು ಸೂರ್ಯ ತನ್ನ ಕಿರಣಗಳನ್ನು ಝಳಪಿಸುತ್ತಿದ್ದಾನೆ. ರಾಜ್ಯದ ಹಲವು ಕಡೆಗಳಲ್ಲಿ ತಾಪಮಾನ ಈಗಾಗಲೇ 40 ಡಿ.ಸೆ. ಹತ್ತಿರರತ್ತಿರಕ್ಕೆ ಏರುತ್ತಿದ್ದು, ಈ ಬೇಸಿಗೆ ಕಳೆಯುವುದು ಹೇಗಪ್ಪಾ ಎಂಬ ಚಿಂತೆ ಎಲ್ಲರ ಹಲವರನ್ನು ಬಾಧಿಸುತ್ತಿದೆ. ತಂತ್ರಜ್ಞಾನದ ಹೆಸರಿನಲ್ಲಿ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಮನುಷ್ಯನಿಂದಾಗಿ ಎಲ್ಲಾ ಜೀವರಾಶಿಗಳಿಗೂ ಈ ಉಷ್ಣತೆಯ ತಾಪ ಇನ್ನೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂಥ ತೀಕ್ಷ್ಣ ಉರಿ ಸೆಕೆಯಲ್ಲಿ ಬಿಸಿಲಿನ ಆಘಾತದ ಅಪಾಯ ಹೆಚ್ಚುತ್ತದೆ. ಕಾರಣ, ದೇಹದ ತಾಪಮಾನವನ್ನು ಕಾಯ್ದುಕೊಳ್ಳುವ ಸಹಜ ತಂತ್ರಗಳು ಕೆಲವೊಮ್ಮೆ ದೇಹಕ್ಕೇ ಕೈಕೊಟ್ಟಾಗ ಆರೋಗ್ಯ ಏರುಪೇರಾಗುವುದು ನಿಶ್ಚಿತ.
ಬಿರು ಬಿಸಿಲಿನಿಂದಾಗಿ ಸುಸ್ತು, ಆಯಾಸ, ಡಯರಿಯಾ, ವಾಂತಿ, ನಿರ್ಜಲೀಕರಣ, ಮಾನಸಿಕ ಗೊಂದಲ, ಹೀಟ್ ಸ್ಟ್ರೋಕ್ ಮುಂತಾದ ಹಲವು ರೀತಿಯ ಸಮಸ್ಯೆಗಳು ಕಾಡಬಹುದು. ಇದರಿಂದಾಗಿ ಈಗಾಗಲೇ ಇರುವಂಥ ಆರೋಗ್ಯ ಸಮಸ್ಯೆಗಳು ಉಲ್ಭಣಿಸಬಹುದು. ಬಿಸಿಲಿನ ಆಘಾತದಿಂದ ವ್ಯಕ್ತಿಗಳ ವರ್ತನೆಯಲ್ಲೂ ವ್ಯತ್ಯಾಸ ಕಾಣಬಹುದು.
ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ಮೊದಲಿಗೆ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ 'ಹೀಟ್ಸ್ಟ್ರೋಕ್' ಉಂಟಾಗಬಹುದು. ಅಂದರೆ, ಜ್ವರದ ಯಾವುದೇ ಲಕ್ಷಣವಿಲ್ಲದಿದ್ದರೂ, ದೇಹದ ಉಷ್ಣತೆ 104 ಡಿಗ್ರಿ ಫ್ಯಾರನ್ಹೀಟ್ ಅಥವಾ ಅದಕ್ಕಿಂತಲೂ ಹೆಚ್ಚು ತಲುಪಬಹುದು. ಇದಕ್ಕೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಜೀವಕ್ಕೆ ಅಪಾಯ ಉಂಟಾಗಬಹುದು.
ಹೀಟ್ಸ್ಟ್ರೋಕ್ ಲಕ್ಷಣಗಳೇನು?
ದೇಹದ ಉಷ್ಣತೆ ತೀವ್ರವಾಗಿ ಏರಿಕೆಯಾಗುವುದು:
ತೀವ್ರವಾದ ಜ್ವರದಲ್ಲಿ ಏರುವ ದೇಹದ ಉಷ್ಣತೆಯಂತೆಯೇ ದೇಹದ ಉಷ್ಣತೆಯು 40 ಡಿ. ಸೆ. ಅಥವಾ 104 ಡಿ. ಫ್ಯಾರನ್ಹೀಟ್ ತಲುಪುತ್ತದೆ. ಕೆಲವೊಮ್ಮೆ ಅದಕ್ಕಿಂತ ಇದು ಇನ್ನೂ ಅಧಿಕವಾಗಬಹುದು. ಹೃದಯದ ಬಡಿತ ತೀವ್ರಗತಿಯಲ್ಲಿರುತ್ತದೆ. ಚರ್ಮ ಒಣಗುವುದು, ಕೆಂಪಾಗುವುದು ಇಂಥವೆಲ್ಲಾ ಈ ಲಕ್ಷಣಗಳ ಜೊತೆಜೊತೆಗೇ ಕಾಣಬಹುದು.ಈ ಹಂತದಲ್ಲಿ ತಕ್ಷಣ ಎಚ್ಚೆತ್ತುಕೊಂಡರೆ ಕ್ಷೇಮ ಇಲ್ಲವೇ ತಾಪ ನೆತ್ತಿಗೇರಬಹುದು.
ಉಸಿರಾಟದ ಸಮಸ್ಯೆ:
ಹೀಟ್ಸ್ಟ್ರೋಕ್ ಸಂದರ್ಭದಲ್ಲಿ ಹೃದಯದ ಬಡಿತಕ್ಕೆ ಪೂರಕವಾಗಿ ಉಸಿರಾಟವೂ ತೀವ್ರವಾಗಿರುತ್ತದೆ. ಬಡಿತ ಮತ್ತು ಉಸಿರಾಟದ ಮೂಲಕ ಹೆಚ್ಚಿನ ಆಮ್ಲಜನಕ ಒದಗಿಸಿ, ಶರೀರವನ್ನು ತಂಪಾಗಿಸುವ ಯತ್ನವನ್ನು ದೇಹ ತಂತಾನೇ ಮಾಡುತ್ತಿರುತ್ತದೆ. ಈ ಹಂತದಲ್ಲಿ ಉಸಿರಾಟದ ತೊಂದರೆ ಮತ್ತು ಅತೀವ ಬೆವರು ಸಹ ಗೋಚರಿಸಬಹುದು ಅಥವಾ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯಿಂದಾಗಿ ಬೆವರೇ ಬಾರದೆಯೂ ಇರಬಹುದು.
ಮಾನಸಿಕ ಸ್ಥಿತಿ:
ದೇಹದಲ್ಲಿನ ಈ ಬದಲಾವಣೆಯಿಂದ ಮೆದುಳಿನಲ್ಲೂ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಬಿಸಿಲಿನ ಆಘಾತಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಗೊಂದಲ, ಕೋಪ, ದೇಹದ ಅಸಮತೋಲನ, ಕೆಲವೊಮ್ಮೆ ಅಪಸ್ಮಾರವೂ ಕಂಡು ಬರುತ್ತದೆ.
ತೀವ್ರ ತಲೆನೋವು:
ತೀವ್ರವಾದ ತಲೆನೋವು, ತಲೆಸುತ್ತುವುದು, ಹೊಟ್ಟೆ ತೊಳೆಸುವುದು, ವಾಂತಿ- ಇವೆಲ್ಲವೂ ನಿರ್ಜಲೀಕರಣದ ಲಕ್ಷಣಗಳಾಗಿರಬಹುದು. ಮೈ ಮುಟ್ಟಿದರೆ ಬಿಸಿಯ ಅನುಭವ ಮತ್ತು ಚರ್ಮ ಒಣಗಿದಂಥ ಲಕ್ಷಣಗಳು ಕಾಣಬಹುದು. ಮೊದಲಿಗೆ ಸಿಕ್ಕಾಪಟ್ಟೆ ಬೆವರುವ ದೇಹದಿಂದ ಕ್ರಮೇಣ ಒಂದು ಹನಿ ಬೆವರೂ ಬಾರದಿರಬಹುದು. ಇಂಥ ಸಂದರ್ಭಗಳಲ್ಲೂ ಚಿಕಿತ್ಸೆ ಬೇಕಾಗುತ್ತದೆ.
ಮಾಂಸಖಂಡಗಳಲ್ಲಿ ನೋವು:
ಹೀಟ್ಸ್ಟ್ರೋಕ್ ನಿಂದಾಗಿ ಮಾಂಸಖಂಡಗಳಲ್ಲಿ ನೋವು, ಏಳಲಾರದಂಥ ಸುಸ್ತಿನಂತಹ ಲಕ್ಷಣಗಳು ಆರಂಭದಲ್ಲಿ ಬಾಧಿಸಬಹುದು. ಇದನ್ನು ನಿರ್ಲಕ್ಷಿಸಿದರೆ ವ್ಯಕ್ತಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುವ ಸ್ಥಿತಿಯೂ ಬರಬಹುದು. ತೀವ್ರವಾದ ಸೆಖೆಯ ದಿನಗಳಲ್ಲಿ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿದಾಗ ಮೊದಲಿಗೆ ಕಾಣುವ ಲಕ್ಷಣಗಳೆಂದರೆ ಕಾಲು, ತೋಳು ಅಥವಾ ಕಿಬ್ಬೊಟ್ಟೆಯಲ್ಲಿ ನೋವು. ಇಂತಹ ಸಂದರ್ಭವನ್ನು ಸರಿಯಾಗಿ ನಿರ್ವಹಿಸಲು ಚೆನ್ನಾಗಿ ನೀರು, ಒಆರೆಸ್ನಂಥ ಎಲೆಕ್ಟ್ರೋಲೈಟಿಕ್ ಪೇಯಗಳು ದೇಹಕ್ಕೆ ತುರ್ತಾಗಿ ಬೇಕಾಗುತ್ತದೆ.
ದೇಹದ ಬಿಸಿ ಹೆಚ್ಚುತ್ತ ಹೋದಂತೆ ಜೀವಾಪಾಯವೂ ಹೆಚ್ಚುತ್ತಲೇ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಧಾವಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ವ್ಯಕ್ತಿಯ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ವ್ಯಕ್ತಿಯನ್ನು ನೆರಳಿರುವ, ತಂಪಾದ, ತಾಜಾ ಗಾಳಿ ಬರುವ ಜಾಗಕ್ಕೆ ಸ್ಥಳಾಂತರಿಸಿ. ಒಆರೆಸ್ನಂಥ ಎಲೆಕ್ಟ್ರೋಲೈಟಿಕ್ ಪೇಯಗಳನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುತ್ತಿರಿ. ಸಾಧ್ಯವಾದರೆ ಮೈಯನ್ನೆಲ್ಲಾ ತಂಪಾದ ಒದ್ದೆ ಬಟ್ಟೆಯಲ್ಲಿ ಒರೆಸಿ, ಚೆನ್ನಾಗಿ ಗಾಳಿ ಬರುವಂತೆ ನೋಡಿಕೊಳ್ಳಿ.
ಹೀಟ್ ಸ್ಟ್ರೋಕ್ ತಪ್ಪಿಸಲು ಬೆಸ್ಟ್ ಪರಿಹಾರ:
ಹೀಟ್ ಸ್ಟ್ರೋಕ್ ತಪ್ಪಿಸಲು ಎಳನೀರು, ತಂಪು ಪಾನೀಯಗಳನ್ನು (ಸಾಧ್ಯವಾದಷ್ಟು ತಾಜಾ ಹಣ್ಣುಗಳು/ಪಾನೀಯಗಳು) ತೆಗೆದುಕೊಳ್ಳುವುದು ಸೂಕ್ತ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು. ಬೇಕಿರಲಿ ಅಥವಾ ಬೇಡದಿರಲಿ ಕನಿಷ್ಠ ಅರ್ಧಗಂಟೆಗೊಮ್ಮೆಯಾದರೂ ಸ್ವಲ್ಪ ನೀರು ಕುಡಿಯುವುದರಿಂದ ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.