ದೀರ್ಘ ಸಮಯ 'ಮೂತ್ರ' ಹಿಡಿದಿಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದ್ಯಾ... ಈ ಕಾಯಿಲೆಗಳಿಗೆ ತುತ್ತಾಗಬಹುದು, ಎಚ್ಚರ..!

Holding Pee Side Effects: ಮೂತ್ರ ವಿಸರ್ಜನೆಯು ದೇಹದಿಂದ ತ್ಯಾಜ್ಯವನ್ನು ಹೊರ ಹಾಕುವ ನೈಸರ್ಗಿಕ ಕ್ರಿಯೆ. ಆದರೆ, ಮೂತ್ರವನ್ನು ತಡೆಯುವುದರಿಂದ ಇದು ಹಲವು ಕಾಯಿಲೆಗಳಿಗೆ ಆಹ್ವಾನ ನೀಡಬಹುದು.   

Written by - Yashaswini V | Last Updated : Mar 5, 2025, 01:31 PM IST
  • ಮೂತ್ರ ವಿಸರ್ಜನೆ ನಮ್ಮ ದೇಹದಿಂದ ತ್ಯಾಜ್ಯವನ್ನು ಹೊರ ಹಾಕುವ ನೈಸರ್ಗಿಕ ಪ್ರಕ್ರಿಯೆ ಆಗಿದೆ. ಇದನ್ನು ಪ್ರಕೃತಿ ಕರೆ ಎಂತಲೂ ಹೇಳಲಾಗುತ್ತದೆ.
  • ಕೆಲವೊಮ್ಮೆ (ಅನಿವಾರ್ಯ ಪರಿಸ್ಥಿತಿಗಳಲ್ಲಿ) ಮೂತ್ರ ವಿಸರ್ಜನೆಯಲ್ಲಿ ಒಂದೆರಡು ಗಂಟೆಗಳ ಕಾಲ ಕಂಟ್ರೋಲ್ ಮಾಡುವುದರಿಂದ ಇದು ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ.
  • ಆದರೆ, ಹೆಚ್ಚು ಹೊತ್ತು ಮೂತ್ರ ವಿಸರ್ಜನೆ ತಡೆಯುವ ಅಭ್ಯಾಸವನ್ನು ರೂಢಿಸಿಕೊಂಡರೆ ಮಾತ್ರ ಇದು ದೇಹಕ್ಕೆ ಅಪಾಯಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ.
ದೀರ್ಘ ಸಮಯ 'ಮೂತ್ರ' ಹಿಡಿದಿಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದ್ಯಾ... ಈ ಕಾಯಿಲೆಗಳಿಗೆ ತುತ್ತಾಗಬಹುದು, ಎಚ್ಚರ..!

Holding Urine Effects: ಮೂತ್ರಕೋಶವನ್ನು ನಿಯಮಿತವಾಗಿ ಖಾಲಿ ಮಾಡುವುದು (ಕನಿಷ್ಟ ಮೂರು ಗಂಟೆಗಳಿಗೊಮ್ಮೆ) ಆರೋಗ್ಯಕ್ಕೆ ಒಳ್ಳೆಯದು. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಇದು ಸಾಧ್ಯವಾಗದೆೇ ಇರಬಹುದು. ಆದರೆ, ದೀರ್ಘ ಸಮಯದವರೆಗೆ ಮೂತ್ರ ವಿಸರ್ಜನೆ ಮಾಡದೆ ಇರುವುದು ಅಥವಾ ದೀರ್ಘ ಸಮಯ 'ಮೂತ್ರ' ಹಿಡಿದಿಟ್ಟುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? 

Add Zee News as a Preferred Source

ಮೂತ್ರ ವಿಸರ್ಜನೆ ನಮ್ಮ ದೇಹದಿಂದ ತ್ಯಾಜ್ಯವನ್ನು ಹೊರ ಹಾಕುವ ನೈಸರ್ಗಿಕ ಪ್ರಕ್ರಿಯೆ ಆಗಿದೆ. ಇದನ್ನು ಪ್ರಕೃತಿ ಕರೆ ಎಂತಲೂ ಹೇಳಲಾಗುತ್ತದೆ. ಕೆಲವೊಮ್ಮೆ (ಅನಿವಾರ್ಯ ಪರಿಸ್ಥಿತಿಗಳಲ್ಲಿ) ಮೂತ್ರ ವಿಸರ್ಜನೆಯಲ್ಲಿ ಒಂದೆರಡು ಗಂಟೆಗಳ ಕಾಲ ಕಂಟ್ರೋಲ್ ಮಾಡುವುದರಿಂದ ಇದು ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಹೆಚ್ಚು ಹೊತ್ತು ಮೂತ್ರ ವಿಸರ್ಜನೆ ತಡೆಯುವ ಅಭ್ಯಾಸವನ್ನು ರೂಢಿಸಿಕೊಂಡರೆ ಮಾತ್ರ ಇದು ದೇಹಕ್ಕೆ ಅಪಾಯಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. 

ದೀರ್ಘ ಸಮಯ 'ಮೂತ್ರ' ಹಿಡಿದಿಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದ್ದಲ್ಲಿ ಇಂದೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಇಲ್ಲವೇ, ಗಂಭೀರ ಆರೋಗ್ಯ ಸಮಸ್ಯೆಗೆ ನಿಮ್ಮ ಈ ಅಭ್ಯಾಸವೇ ಕಾರಣವಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಮಾರಣಾಂತಿಕವೂ ಆಗಬಹುದು.  

ಇದನ್ನೂ ಓದಿ- ಊಟಕ್ಕೂ ಅರ್ಧ ತಾಸು ಮೊದಲು ಈ ಮೂರು ಪಾನೀಯಗಳಲ್ಲಿ ಒಂದನ್ನು ಕುಡಿದ್ರೂ ಸಾಕು ಹೆಚ್ಚಾಗಲ್ಲ ಬ್ಲಡ್ ಶುಗರ್ 

ದೀರ್ಘ ಸಮಯ 'ಮೂತ್ರ' ತಡೆಯುವುದರಿಂದ ಏನಾಗುತ್ತದೆ? 
ದೀರ್ಘ ಸಮಯದವರೆಗೆ ಮೂತ್ರ ಹಿಡಿದಿಟ್ಟುಕೊಳ್ಳುವುದರಿಂದ ಇದು ಮೂತ್ರ ನಾಳದಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಜೊತೆಗೆ ಯುಟಿಐ ಅಪಾಯವನ್ನು ತಂದೊಡ್ಡುತ್ತದೆ. 

ಕಿಡ್ನಿ ಸ್ಟೋನ್: 
ದೀರ್ಘ ಸಮಯ ಮೂತ್ರ ತಡೆಯುವುದರಿಂದ ಮೂತ್ರಪಿಂಡಗಳಲ್ಲಿ ಉಪ್ಪು ಮತ್ತು ಖನಿಜಗಳ ಸಂಗ್ರಹವಾಗಿ ಕಲ್ಲುಗಳು ರೂಪುಗೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಎಂತಲೂ ಹೇಳಲಾಗುತ್ತದೆ. 

ಮೂತ್ರ ಕೋಶ ಹಿಗ್ಗುವುದು: 
ದೀರ್ಘಕಾಲದವರೆಗೆ ಮೂತ್ರಕೋಶಗಳಲ್ಲಿ ಯೂರಿನ್ ಸಂಗ್ರಹವಾಗುವುದರಿಂದ ಮೂತ್ರ ಕೋಶ ಹಿಗ್ಗುತ್ತದೆ. ಇದರಿಂದ ಭವಿಷ್ಯದಲ್ಲಿ ಪದೇ ಪದೇ ಮೂತ್ರ ವಿಸರ್ಜಿಸಬೇಕು ಎಂದೆನಿಸುತ್ತದೆ. ರಾತ್ರಿ ವೇಳೆ ಈ ಸಮಸ್ಯೆ ಹೆಚ್ಚು ಬಾಧಿಸುತ್ತದೆ. 

ಇದನ್ನೂ ಓದಿ- ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನೋ ಮೊದಲು ಎಚ್ಚರ... ಕಲ್ಲಂಗಡಿ ಕೆಂಪಾಗಿಸಲು ಕೃತಕ ಬಣ್ಣ: ವೈದ್ಯರು ಹೇಳಿದ್ದೇನು... ವಾಚ್ ವಿಡಿಯೋ​

ದುರ್ಬಲ ಮೂತ್ರಪಿಂಡ: 
ಹೆಚ್ಚು ಕಾಲ ಮೂತ್ರ ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಒತ್ತಡವನ್ನು ಹೆಚ್ಚಿಸುವುದರಿಂದ ಮೂತ್ರಪಿಂಡವನ್ನು ದುರ್ಬಲಗೊಳಿಸುತ್ತದೆ. ಇದು ಹೈ ಬಿಪಿ, ಮಧುಮೇಹದಂತಹ ಸಮಸ್ಯೆಗೂ ಆಹ್ವಾನ ನೀಡಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News