Home Remedies: ಇತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿ, ಕಳಪೆ ಜೀವನಶೈಲಿಯಿಂದಾಗಿ ದೇಹದಲ್ಲಿ ಯೂರಿಕ್ ಆಮ್ಲದ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಬಹಳಷ್ಟು ಮಂದಿ ಸ್ಥೂಲಕಾಯತೆ, ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ. ಇವೆರಡನ್ನೂ ನಿಯಂತ್ರಿಸಲು ಕೆಲವು ಮನೆಮದ್ದುಗಳು ತುಂಬಾ ಲಾಭದಾಯಕವೆಂದು ಸಾಬೀತುಪಡಿಸುತ್ತವೆ.
ಯೂರಿಕ್ ಆಮ್ಲ ಸಮಸ್ಯೆ:
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೀಲುಗಳಲ್ಲಿ ಹರಳುಗಳ ರೂಪದಲ್ಲಿ ಒಂದು ರೀತಿಯ ಆಸಿಡ್ ಸಂಗ್ರಹವಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದು ಕೀಲುಗಳಲ್ಲಿ ಅತೀವವಾದ ಅಸಹನೀಯ ನೋವು, ಊತವನ್ನು ಉಂಟು ಮಾಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಗೌಟ್ ಎಂತಲೂ ಕರೆಯಲಾಗುತ್ತದೆ.
ತೂಕ ಹೆಚ್ಚಳ:
ಬದಲಾದ ಒತ್ತಡಭರಿತ ಜೀವನಶೈಲಿಯಲ್ಲಿ 100ರಲ್ಲಿ ಶೇ.80ರಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ ತೂಕ ಹೆಚ್ಚಳ. ತೂಕ ಹೆಚ್ಚಳದಿಂದ ಹೃದಯದ ಆರೋಗ್ಯ, ಮಂಡಿ ನೋವಿನಂತಹ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಮಧುಮೇಹ, ರಕ್ತದೊತ್ತಡ ಸಮಸ್ಯೆಗಳಿಗೂ ಕೂಡ ಮೂಲ ಕಾರಣವಾಗಬಹುದು.
ಹೆಚ್ಚಾಗುತ್ತಿರುವ ತೂಕ ಹಾಗೂ ಯೂರಿಕ್ ಆಸಿಡ್ ಸಮಸ್ಯೆಗೆ ಮನೆಮದ್ದುಗಳ ಬಳಕೆ ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ಎರಡು ಮನೆಮದ್ದುಗಳೆಂದರೆ:
ಅಗಸೆ ಬೀಜ:
ಅಗಸೆ ಬೀಜ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಅಧಿಕವಾಗಿದೆ. ಒಂದು ಸ್ಪೂನ್ ಅಗಸೆ ಬೀಜವನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅದನ್ನು ಸೋಸಿ ಆ ನೀರನ್ನು ಕುಡಿಯುವುದರಿಂದ ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಮ್ಲ ಕರಗಿ ನೀರಾಗುತ್ತದೆ. ಅಲ್ಲದೆ, ಅಗಸೆ ಬೀಜದ ನಿಯಮಿತ ಬಳಕೆಯಿಂದ ಆರೋಗ್ಯಕರವಾಗಿ ತೂಕವನ್ನೂ ಇಳಿಕೆ ಮಾಡಬಹುದು.
ಆಪಲ್ ಸೈಡರ್ ವಿನೆಗರ್:
ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಡಿಟಾಕ್ಸ್ ಆಗಿ ಕಾರ್ಯ ನಿರ್ವಹಿಸುತ್ತದೆ. ನಿತ್ಯ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಸ್ಪೂನ್ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದರಿಂದ ಯೂರಿಕ್ ಆಮ್ಲದ ಸಮಸ್ಯೆಯಿಂದ ಪರಿಹಾರ ಪಡೆಯುವುದರೊಂದಿಗೆ ತೂಕ ಇಳಿಕೆಗೂ ಸಹಕಾರಿ ಆಗಿದೆ.
ಇದನ್ನೂ ಓದಿ- ವಾರದಲ್ಲಿ ಒಂದೇ ಒಂದು ದಿನ ಈ ರೀತಿ ಮಾಡಿದ್ರೂ ಡೊಳ್ಳು ಹೊಟ್ಟೆ ಕರಗಿ ಚಪ್ಪಟೆ ಆಗುತ್ತೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









