Toothache Problem: ಹಲ್ಲು ನೋವಿನಿಂದ ಕ್ಷಣಾರ್ಧದಲ್ಲಿ ಪರಿಹಾರ ಪಡೆಯಲು ಮನೆಮದ್ದು
Toothache Problem: ನೀವು ಎಂದಾದರೂ ತೀವ್ರವಾದ ಹಲ್ಲು ನೋವನ್ನು ಅನುಭವಿಸಿದ್ದೀರಾ.... ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಹಲ್ಲು ನೋವು ಕೂಡ ಒಂದು. ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮಗೆ ಪರಿಹಾರ ನೀಡಬಹುದು.
ಹಲ್ಲು ನೋವಿಗೆ ಮನೆಮದ್ದು: ಸಾಮಾನ್ಯವಾಗಿ ಅನೇಕ ಜನರು ತಮ್ಮ ಹಲ್ಲುನೋವಿನ ಬಗ್ಗೆ ತುಂಬಾ ಚಿಂತಿತರಾಗಿರುವುದನ್ನು ನಾವು ಸುತ್ತಮುತ್ತಲೂ ನೋಡಿಯೇ ಇರುತ್ತೇವೆ. ಇದಕ್ಕೆ ಕ್ಯಾಲ್ಸಿಯಂ ಕೊರತೆ, ಹಲ್ಲು ಹುಳುಕಾಗಿರುವುದು, ಬ್ಯಾಕ್ಟೀರಿಯಾ ಹೀಗೆ ಇತ್ಯಾದಿ ಕಾರಣಗಳಿರಬಹುದು. ನೋವಿನಿಂದ ತಕ್ಷಣ ಪರಿಹಾರ ಪಡೆಯಲು ಜನರು ಪೈನ್ ಕಿಲ್ಲರ್ ಮಾತ್ರೆಗಳನ್ನು ಬಳಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಪದೇ ಪದೇ ಈ ರೀತಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇದು ಹಾನಿಕಾರಕವೆಂದು ಸಾಬೀತುಪಡಿಸಬಹುದು. ಏಕೆಂದರೆ ಹಲವಾರು ಔಷಧಿಗಳು ನಮ್ಮ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಹಲ್ಲು ನೋವು ಕಾಣಿಸಿಕೊಂಡಾಗ ನೋವುನಿವಾರಕ ಔಷಧಿಗಳ ಬದಲಿಗೆ ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ನಿಮಗೆ ಸಹಕಾರಿ ಆಗಿವೆ. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ...
ನಿಮ್ಮ ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಹಲ್ಲು ನೋವು ನಿವಾರಿಸಿ:
ಲವಂಗ :
ಲವಂಗವನ್ನು ಹಲ್ಲುನೋವುಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಈ ಪರಿಹಾರವು ಶತಮಾನಗಳಿಂದಲೂ ಬಹಳ ಪ್ರಯೋಜನಕಾರಿ ಎಂದು ಸಾಬೀತು ಪಡಿಸಿದೆ. ಲವಂಗವನ್ನು ಆಯುರ್ವೇದ ಔಷಧವೆಂದು ಪರಿಗಣಿಸಲಾಗುತ್ತದೆ, ಇದು ಹಲ್ಲುನೋವುಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಲ್ಲಿನ ಸಮಸ್ಯೆಗಳಿಗೆ ಎರಡರಿಂದ ಮೂರು ಲವಂಗವನ್ನು ತೆಗೆದುಕೊಂಡು ಸ್ವಲ್ಪ ಚೂರು ಮಾಡಿ ಹಲ್ಲಿನ ಕೆಳಗೆ ಇಟ್ಟುಕೊಳ್ಳುವುದರಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ- Weight Loss Fruit: ಈ ಒಂದು ಹಣ್ಣು ಸೇವನೆಯಿಂದ ಕಡಿಮೆ ಆಗುತ್ತಂತೆ ತೂಕ!
ಇಂಗು:
ಹಲ್ಲಿನ ನೋವಿಗೆ ಇಂಗು ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ, ಇದನ್ನು ಬಳಸಲು, ಎರಡರಿಂದ ಮೂರು ಚಿಟಿಕೆ ಇಂಗಿಗೆ ಎರಡರಿಂದ ನಾಲ್ಕು ಹನಿ ನಿಂಬೆ ರಸವನ್ನು ಬೆರೆಸಿ ನಂತರ ಆ ಪೇಸ್ಟ್‌ನಿಂದ ಹಲ್ಲುಗಳಿಗೆ ಮಸಾಜ್ ಮಾಡಿದರೆ ನಿಮಗೆ ಪರಿಹಾರ ಸಿಗುತ್ತದೆ.
ಕಲ್ಲು ಉಪ್ಪು:
ಕಲ್ಲು ಉಪ್ಪನ್ನು ಅನೇಕ ವಿಷಯಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇದು ಹಲ್ಲುನೋವಿಗೆ ಪರಿಪೂರ್ಣ ಪರಿಹಾರವಾಗಿದೆ. ನೀವು ಹಲ್ಲುನೋವು ಹೋಗಲಾಡಿಸಲು ಬಯಸಿದರೆ, ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪನ್ನು ಬೆರೆಸಿ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸಿ. ದಿನಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಗಾರ್ಗ್ಲಿಂಗ್ ಮಾಡುವುದು ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ- Yellow Teeth: ಹಳದಿ ಹಲ್ಲುಗಳಿಗೆ ಸರಳ ಮನೆಮದ್ದು!
ಈರುಳ್ಳಿ:
ನಿಮ್ಮ ಹಲ್ಲುಗಳಲ್ಲಿ ನೋವಿದ್ದರೆ, ನಂತರ ನೀವು ಈರುಳ್ಳಿಯನ್ನು ಬಳಸುವುದರಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಈರುಳ್ಳಿಯನ್ನು ಹೋಳುಗಳಾಗಿ ಕತ್ತರಿಸಿ ನೋವು ಇರುವ ಕಡೆ ಇಟ್ಟು ಚೆನ್ನಾಗಿ ಅಗಿಯುತ್ತಿದ್ದರೆ ಪರಿಹಾರ ಸಿಗುತ್ತದೆ, ನೋವಿನಲ್ಲಿ ಈರುಳ್ಳಿ ರಸ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.