ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಯಾವ ಹಿಟ್ಟಿನ ಚಪಾತಿ ಹೆಚ್ಚು ಪ್ರಯೋಜನಕಾರಿ?

ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹೆಚ್ಚು ಚಪಾತಿ ತಿನ್ನುವುದರಿಂದ ಬೊಜ್ಜು ಕೂಡ ಬೇಗನೆ ಹೆಚ್ಚಾಗುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ನೀವು ಪ್ರತಿದಿನ ಎಷ್ಟು ಚಪಾತಿ ತಿನ್ನಬೇಕು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Jun 20, 2025, 12:14 PM IST
  • ತೂಕ ಇಳಿಸಿಕೊಳ್ಳಲು ಯಾವುದೇ ವ್ಯಕ್ತಿ ದಿನಕ್ಕೆ 1800-2000 ಕ್ಯಾಲೊರಿಗಳನ್ನು ಸೇವಿಸಬೇಕು
  • ಇದರಲ್ಲಿ ನೀವು 225-325 ಕ್ಯಾಲೊರಿಗಳನ್ನು ಕಾರ್ಬೋಹೈಡ್ರೇಟ್‌ಗಳಿಂದ ಪಡೆಯಬಹುದು
  • 1 ಚಪಾತಿ ತಿಂದರೆ ದೇಹಕ್ಕೆ 15 ಗ್ರಾಂ ಕಾರ್ಬೋಹೈಡ್ರೇಟ್‌ & 70 ಗ್ರಾಂ ಕ್ಯಾಲೊರಿ ಸಿಗುತ್ತದೆ
ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಯಾವ ಹಿಟ್ಟಿನ ಚಪಾತಿ ಹೆಚ್ಚು ಪ್ರಯೋಜನಕಾರಿ?

Diet & Weight Loss: ನಮ್ಮ ಆಹಾರದಲ್ಲಿ ಚಪಾತಿ/ರೊಟ್ಟಿ ಇಲ್ಲದ ಹೊರತು ಹೊಟ್ಟೆ ತುಂಬುವುದಿಲ್ಲ. ಚಪಾತಿ ಇಲ್ಲದೆ ಭಾರತೀಯರ ಊಟ ಅಪೂರ್ಣವೆಂದೇ ಹೇಳಬಹುದು. ಹೆಚ್ಚಿನ ಜನರು ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಚಪಾತಿ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಆಹಾರದಲ್ಲಿ ರೊಟ್ಟಿಯ ಪ್ರಮಾಣವನ್ನು ಮಿತಿಗೊಳಿಸಬೇಕು. ವಿಶೇಷವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಗೋಧಿ ಚಪಾತಿ ಬೊಜ್ಜುತನಕ್ಕೆ ಕಾರಣವಾಗಬಹುದು.

ಹೀಗಾಗಿ ತೂಕ ಇಳಿಸಿಕೊಳ್ಳಲು ಮೊದಲು ಕಾರ್ಬೋಹೈಡ್ರೇಟ್ ನಿಯಂತ್ರಣದತ್ತ ಗಮನಹರಿಸುವುದು ಮುಖ್ಯ. ನೀವು ದಿನವಿಡೀ ಲೆಕ್ಕಿಸದೆ ನಿಮಗೆ ಬೇಕಾದಷ್ಟು ಚಪಾತಿ ತಿನ್ನುತ್ತಿದ್ದರೆ ಮೊದಲು ಈ ಅಭ್ಯಾಸವನ್ನು ಬದಲಾಯಿಸಿ. ಇದು ತಕ್ಷಣ ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ. ತೂಕ ಇಳಿಸಿಕೊಳ್ಳಲು ನೀವು ಚಪಾತಿ ಮಾತ್ರವಲ್ಲದೆ ದಿನವಿಡೀ ನಿಮ್ಮ ಒಟ್ಟು ಕ್ಯಾಲೊರಿ ಸೇವನೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಆಹಾರ ತಜ್ಞೆ ಸ್ವಾತಿ ಸಿಂಗ್ ಹೇಳುತ್ತಾರೆ. ಆದ್ದರಿಂದ ಮೊದಲನೆಯದಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಸೇವನೆಯ ಬಗ್ಗೆ ಗಮನ ಹರಿಸಬೇಕು. 

ಇದನ್ನೂ ಓದಿ: ಮಧುಮೇಹಕ್ಕೆ ಮದ್ದು ಮನೆಯಲ್ಲೇ ಇರುವ ಈ ಮಸಾಲೆ! ಮಲಗುವ ಮುನ್ನ ಹಾಲಿಗೆ ಬೆರೆಸಿ ಕುಡಿದ್ರೆ ಏರುಪೇರಾಗಲ್ಲ ಶುಗರ್..‌

ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು?  

ತೂಕ ಇಳಿಸಿಕೊಳ್ಳಲು ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 1800-2000 ಕ್ಯಾಲೊರಿಗಳನ್ನು ಸೇವಿಸಬೇಕು. ಇದರಲ್ಲಿ ನೀವು 225 ರಿಂದ 325 ಕ್ಯಾಲೊರಿಗಳನ್ನು ಕಾರ್ಬೋಹೈಡ್ರೇಟ್‌ಗಳಿಂದ ಪಡೆಯಬಹುದು. ಇದು ಬೊಜ್ಜು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 1 ಚಪಾತಿ ತಿನ್ನುವುದರಿಂದ ದೇಹಕ್ಕೆ ಸುಮಾರು 15 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು 70 ಗ್ರಾಂ ಕ್ಯಾಲೊರಿಗಳು ದೊರೆಯುತ್ತವೆ. ಸಾಮಾನ್ಯ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಪ್ರತಿದಿನ ಆಹಾರದಿಂದ 150 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಮಹಿಳೆ ದಿನಕ್ಕೆ 3-4ಕ್ಕಿಂತ ಹೆಚ್ಚು ಸಣ್ಣ ಚಪಾತಿಗಳನ್ನ ತಿನ್ನಬಾರದು ಮತ್ತು ಪುರುಷರು ದಿನಕ್ಕೆ 5-6ಕ್ಕಿಂತ ಹೆಚ್ಚು ಚಪಾತಿಗಳನ್ನ ತಿನ್ನಬಾರದು.

ಯಾವ ಹಿಟ್ಟಿನ ಚಪಾತಿ ಉತ್ತಮ?

ಬೊಜ್ಜು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಚಪಾತಿಯ ಪ್ರಮಾಣವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ನಿಮ್ಮ ಹಿಟ್ಟನ್ನು ಬದಲಾಯಿಸುವುದು ಸಹ ಪರಿಣಾಮಕಾರಿ. ಬೊಜ್ಜು ಕಡಿಮೆ ಮಾಡಲು ಗೋಧಿಯ ಬದಲಿಗೆ ಬಹುಧಾನ್ಯ ಹಿಟ್ಟಿನ ಚಪಾತಿ ಸೇವಿಸಬೇಕು. ರಾಗಿ, ಜೋಳ ಮತ್ತು ರಾಗಿ ರೊಟ್ಟಿ ತಿನ್ನಿರಿ. ಜೋಳದ ರೊಟ್ಟಿ ಬೊಜ್ಜು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ ಮತ್ತು ತೂಕವನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ರಾತ್ರಿ ಮಲಗಿರುವಾಗ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿವೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..

ಮಧ್ಯಾಹ್ನದ ಊಟಕ್ಕೆ ಏನು ತಿನ್ನಬೇಕು?

ತೂಕ ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ರೊಟ್ಟಿಯ ಪ್ರಮಾಣವನ್ನು ಕಡಿಮೆ ಮಾಡಿ. ಸಲಾಡ್‌, ತರಕಾರಿಗಳು ಮತ್ತು ದ್ರವ ಪದಾರ್ಥಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಊಟದ ತಟ್ಟೆಯಲ್ಲಿ 1 ಬಟ್ಟಲು ಬೇಳೆ, 1 ಬಟ್ಟಲು ಮೊಸರು ಮತ್ತು 1 ಪ್ಲೇಟ್ ಸಲಾಡ್ ಇರಬೇಕು. ದಿನವಿಡೀ 3 ಲೀಟರ್ ನೀರು ಕುಡಿಯಿರಿ ಮತ್ತು ಚೆನ್ನಾಗಿ ನಿದ್ರೆ ಮಾಡಿ. ಇದು ತೂಕ ಇಳಿಸಿಕೊಳ್ಳಲು ಸುಲಭವಾಗುತ್ತದೆ. ಇದಲ್ಲದೆ ಪ್ರತಿದಿನ ಅರ್ಧ ಗಂಟೆ ಫಿಟ್ನೆಸ್ ಚಟುವಟಿಕೆಯನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News