ಒಂದು ದಿನಕ್ಕೆ ಎಷ್ಟು ಸಿಗರೇಟ್ ಸೇದಿದ್ರೆ ಒಳ್ಳೆಯದು ಗೊತ್ತೆ..? ತಜ್ಞರು ಹೀಗಂತಾರೆ..
Cigarettes side effects : ಸಾಮಾನ್ಯವಾಗಿ ಜನರು ದಿನಕ್ಕೆ 1-2 ಸಿಗರೇಟ್ ಸೇದುತ್ತಾರೆ ಅಲ್ಲದೆ, ಇಷ್ಟು ಸಿಗರೇಟ್ ಸೇವನೆ ಮಾಡಿದ್ರೆ, ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಕೆಲವರು ದಿನಕ್ಕೆ 3-4 ಸಿಗರೇಟುಗಳನ್ನು ಸಾಮಾನ್ಯವೆಂದು ಪರಿಗಣಿಸುತ್ತಾರೆ. ಆದರೆ ತಜ್ಞರು ಇದು ತಪ್ಪು ಎಂದು ಹೇಳುತ್ತಾರೆ. ಈಗ ಪ್ರಶ್ನೆಯೆಂದರೆ ದಿನಕ್ಕೆ ಎಷ್ಟು ಸಿಗರೇಟ್ ಸೇದುವುದು ಸುರಕ್ಷಿತ..? ವೈದ್ಯರು ಹೇಳೋದು ಏನು..? ಬನ್ನಿ ತಿಳಿಯೋಣ..
Cigarettes case : ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಸಿಗರೇಟ್ ಸೇದುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದು. ಸಿಗರೇಟ್‌ಗಳು ತಂಬಾಕನ್ನು ಹೊಂದಿರುತ್ತವೆ, ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಸಿಗರೇಟ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಹೌದು.. ಸಿಗರೇಟ್ ನಿಕೋಟಿನ್ ಅನ್ನು ಹೊಂದಿರುತ್ತದೆ, ಇದು ವ್ಯಕ್ತಿಯನ್ನು ವ್ಯಸನಿಯಾಗುವಂತೆ ಮಾಡುತ್ತದೆ. ಒಬ್ಬ ವ್ಯಕ್ತಿಯು ಒಮ್ಮೆ ಧೂಮಪಾನ ಮಾಡಲು ಪ್ರಾರಂಭಿಸಿದರೆ, ಅವನು ಹಗಲಿನಲ್ಲಿ ಪದೇ ಪದೇ ಧೂಮಪಾನ ಮಾಡುತ್ತಾನೆ. ಈಗ ಪ್ರಶ್ನೆ ಏನೆಂದರೆ, ದಿನಕ್ಕೆ ಒಂದು ಅಥವಾ ಎರಡು ಸಿಗರೇಟ್ ಸೇದುವುದು ಸುರಕ್ಷಿತವೇ? ಧೂಮಪಾನದ ಮಿತಿ ಏಷ್ಟು..? ತಿಳಿಯೋಣ ಬನ್ನಿ.
ಇದನ್ನೂ ಓದಿ:ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?
ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಪ್ರಿವೆಂಟಿವ್ ಹೆಲ್ತ್ ವಿಭಾಗದ ನಿರ್ದೇಶಕರು ದಿನದಲ್ಲಿ ಒಂದು ಸಿಗರೇಟ್ ಸೇವನೆ ಕೂಡ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ, ನೀವು ಹೆಚ್ಚು ಸಿಗರೇಟ್ ಸೇದಿದರೆ ಅದು ಹೆಚ್ಚು ಹಾನಿ ಮಾಡುತ್ತದೆ. ನೀವು ಕಡಿಮೆ ಸಿಗರೇಟ್ ಸೇವನೆ ಮಾಡಿದ್ರೆ, ನಿಧಾನವಾಗಿ ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ನೀವು ದಿನಕ್ಕೆ 10-15 ಅಥವಾ 20 ಸಿಗರೇಟ್ ಸೇದುತ್ತಿದ್ದರೆ, ತಕ್ಷಣವೇ ಈ ಅಭ್ಯಾಸವನ್ನು ನಿಲ್ಲಿಸಿ, ಕನಿಷ್ಠ ಒಂದು ಸಿಗರೇಟ್ ಸೇದಲು ಪ್ರಯತ್ನಿಸಿ. ನೀವು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿದರೆ, ಅದು ನಿಮಗೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ನೀವು ವೈದ್ಯರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.
ಇದನ್ನೂ ಓದಿ: Godzilla x Kong : ಸದ್ದು ಮಾಡಲು ರೆಡಿಯಾದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್..! ಸಿನಿಮಾ ಟ್ರೇಲರ್ ಗೆ ಫ್ಯಾನ್ಸ್ ಫಿದಾ
ಸಿಗರೇಟ್ ಸೇವನೆಯು ನಿಮ್ಮ ಶ್ವಾಸಕೋಶ, ಹೃದಯ ಮತ್ತು ಮೆದುಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಧೂಮಪಾನವು ಶ್ವಾಸಕೋಶದ ಕಾಯಿಲೆ, ಹೃದಯಾಘಾತ, ಮೆದುಳಿನ ಪಾರ್ಶ್ವವಾಯು, ಕ್ಯಾನ್ಸರ್, ಮಧುಮೇಹ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರು ಸಿಗರೇಟ್ ಸೇವನೆಯಿಂದ ದೂರವಿರಬೇಕು. ಎಲ್ಲಾ ವಯಸ್ಸಿನ ಜನರು ಸಿಗರೇಟ್ ನಿಂದ ದೂರವಿರಬೇಕು.
ವೈದ್ಯರ ಪ್ರಕಾರ, ಸಿಗರೇಟ್ ಹೊಗೆ ನಮ್ಮ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಮೊದಲೇ ನಾವು ವಾಸಿಸುವ ಸ್ಥಳಗಳಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿದೆ, ಅಂತಹ ವಾತಾವರಣದಲ್ಲಿ ಸಿಗರೇಟ್ ಸೇದುವುದು ಶ್ವಾಸಕೋಶದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ?
ನಮ್ಮ ಕಿಡ್ನಿ ಮೇಲೂ ಸಿಗರೇಟ್ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ಸಿಗರೇಟ್ ಸೇದುವುದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ ರೋಗಿಗಳಿಗೆ ಸಿಗರೇಟ್ ತುಂಬಾ ಅಪಾಯಕಾರಿ. ಆಸ್ತಮಾ ಅಥವಾ ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸಿಗರೇಟ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.