ಮಧುಮೇಹಿಗಳು ತಿಂಗಳಿಗೆ ಎಷ್ಟು ಬಾರಿ ಸಿಹಿತಿಂಡಿಗಳನ್ನು ತಿನ್ನಬಹುದು ಗೊತ್ತೆ..? ತಪ್ಪದೇ ತಿಳಿದುಕೊಳ್ಳಿ..

Diabetes Awareness : ಮಧುಮೇಹವು ಹೆಚ್ಚು ಸಂಸ್ಕರಿಸಿದ ಆಹಾರ, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು, ಶೂನ್ಯ ದೈಹಿಕ ಚಟುವಟಿಕೆ, ತೀವ್ರ ಒತ್ತಡ ಅಥವಾ ಆನುವಂಶಿಕ ಕಾರಣಗಳಿಂದ ಉಂಟಾಗುವ ಜೀವನಶೈಲಿಯ ಕಾಯಿಲೆಯಾಗಿದೆ. ಇದನ್ನು ಸಂಪೂರ್ಣವಾಗಿ ವಾಸಿ ಮಾಡಲು ಆಗಲ್ಲ, ಆದರೆ ನಿಯಂತ್ರಿಸಬಹುದು.. 

Written by - Krishna N K | Last Updated : May 1, 2025, 03:11 PM IST
    • ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಪರಿಗಣಿಸಲಾಗಿದೆ.
    • ಸುಮಾರು ಶೇಕಡಾ 17 ರಷ್ಟು ಜನ ಮಧುಮೇಹಿಗಳು ಇಲ್ಲಿದ್ದಾರೆ.
    • ಜೀವನಶೈಲಿ, ಕಳಪೆ ಆಹಾರ ಪದ್ದತಿಯಿಂದ ಮಧುಮೇಹ ಬರುತ್ತೆ.
ಮಧುಮೇಹಿಗಳು ತಿಂಗಳಿಗೆ ಎಷ್ಟು ಬಾರಿ ಸಿಹಿತಿಂಡಿಗಳನ್ನು ತಿನ್ನಬಹುದು ಗೊತ್ತೆ..? ತಪ್ಪದೇ ತಿಳಿದುಕೊಳ್ಳಿ..

Blood Sugar control : ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಪರಿಗಣಿಸಲಾಗಿದೆ. ಸುಮಾರು ಶೇಕಡಾ 17 ರಷ್ಟು ಜನ ಮಧುಮೇಹಿಗಳು ಇಲ್ಲಿದ್ದಾರೆ.. ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆ, ಹೆಚ್ಚಿನ ಕ್ಯಾಲೋರಿ ಆಹಾರ, ಶೂನ್ಯ ದೈಹಿಕ ಚಟುವಟಿಕೆ, ತೀವ್ರ ಒತ್ತಡ ಅಥವಾ ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ.  

Add Zee News as a Preferred Source

ಈ ಸಮಸ್ಯೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆಹಾರದ ಬಗ್ಗೆ ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ.. ಮಧುಮೇಹಿಗಳು ಸಿಹಿತಿಂಡಿಗಳಿಂದ ದೂರವಿರಬೇಕು ಎಂದು ಕೆಲವರು ಹೇಳುತ್ತಾರೆ. ಹಾಗಿದ್ರೆ, ಮಧುಮೇಹ ರೋಗಿಯೊಬ್ಬರು ಒಂದು ತಿಂಗಳಲ್ಲಿ ಎಷ್ಟು ಬಾರಿ ಸಿಹಿತಿಂಡಿಗಳನ್ನು ತಿನ್ನಬಹುದು..? ಬನ್ನಿ ನೋಡೋಣ..

ಇದನ್ನು ಓದಿ:ಯೂರಿಕ್ ಆಸಿಡ್ ಸಮಸ್ಯೆಗೆ ಈ ಒಣಹಣ್ಣುಗಳು ರಾಮಬಾಣ...

ಒಮ್ಮೆ ಮಧುಮೇಹ ಬಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಸಕ್ಕರೆ ತಿನ್ನುವುದರಿಂದ ಅದು ನೇರವಾಗಿ ರಕ್ತಕ್ಕೆ ಹೋಗುತ್ತದೆ, ಆಗ ಇನ್ಸುಲಿನ್‌ಗೂ ಸಹ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಕಣ್ಣುಗಳು, ಮೂತ್ರಪಿಂಡಗಳು ಮತ್ತು ಹೃದಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ.

ಮಧುಮೇಹಿಗಳು ತಿಂಗಳಿಗೆ ಎಷ್ಟು ಬಾರಿ ಸಿಹಿತಿಂಡಿ ತಿನ್ನಬಹುದು : ಮಧುಮೇಹಿಗಳು ಇತಿ ಮಿತಿಯೊಳಗೆ ಸಿಹಿತಿಂಡಿಗಳನ್ನು ತಿನ್ನಬಹುದು ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿದ್ದರೆ, ಅವರು ತಿಂಗಳಿಗೆ 2-3 ಬಾರಿ ಸ್ವಲ್ಪ ಸಿಹಿತಿಂಡಿ ಸೇವಿಸಬಹುದು. ಆದರೆ ಇದಕ್ಕೂ ಮೊದಲು ವ್ಯದ್ಯರಿಂದ ನಿರ್ದಿಷ್ಟ ಸಲಹೆಯನ್ನು ತೆಗೆದುಕೊಳ್ಳಿ. 

ಇದನ್ನು ಓದಿ:ಔಷಧಿಯ ಅಗತ್ಯವಿಲ್ಲ.. ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಎಲೆ!

ನೆನಪಿನಲ್ಲಿಡಿ : ಮಧುಮೇಹ ರೋಗಿಗಳು, ಸಿಹಿ ತಿನ್ನುವುದನ್ನು ಅದಷ್ಟು ಕಡಿಮೆ ಮಾಡಬೇಕು.. ಸಿಹಿ ಆಹಾರಗಳೊಂದಿಗೆ ಫೈಬರ್ ಅಥವಾ ಪ್ರೋಟೀನ್ ತೆಗೆದುಕೊಳ್ಳುವುದು ಉತ್ತಮ. ದಿನವಿಡೀ ಬ್ರೆಡ್ ಅಥವಾ ಅನ್ನದಂತಹ ಹೆಚ್ಚುವರಿ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಿ. ಸಿಹಿತಿಂಡಿಗಳನ್ನು ತಿಂದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಮರೆಯದಿರಿ. ಡಾರ್ಕ್ ಚಾಕೊಲೇಟ್, ಬೆಲ್ಲ ಆಧಾರಿತ ಉತ್ಪನ್ನಗಳು ಮಿತ ಪ್ರಮಾಣದಲ್ಲಿ ತಿನ್ನಿ. ಸೇಬು, ಪೇರಳೆ ಮತ್ತು ಪಪ್ಪಾಯಿಯಂತಹ ಹಣ್ಣುಗಳು ಸಹ ತಿನ್ನಬಹುದು..

ಸೂಚನೆ : ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ಪಡೆದುಕೊಂಡಿದ್ದೇವೆ. ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News