Alcohol safe tips : ನಿಮಗೆ ಮದ್ಯಪಾನ ಮಾಡುವ ಅಭ್ಯಾಸವಿದೆಯೇ? ಸುರಕ್ಷಿತ ಆರೋಗ್ಯ ಕಾಪಾಡಿಕೊಳ್ಳಲು ನೀವು ಪ್ರತಿದಿನ ಎಷ್ಟು ಮದ್ಯಪಾನ ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ, ಮದ್ಯಪಾನ ಮಾಡುವುದು ಒಳ್ಳೆಯದಲ್ಲ.. ಆದರೆ ವ್ಯಸನೀಗಳಿಗೆ ಸಂಪೂರ್ಣವಾಗಿ ಎಣ್ಣೆ ಬಿಡಲು ಸಾಧ್ಯವಾಗಲ್ಲ, ಬದಲಾಗಿ ಈ ರೀತಿ ಮಧ್ಯ ಸೇವನೆ ಮಾಡಬಹುದು
ತಜ್ಞರ ಪ್ರಕಾರ, ಮಿತವಾದ ಆಲ್ಕೋಹಾಲ್ ಸೇವನೆ ನಿಮ್ಮ ಆರೋಗ್ಯ ಒಳ್ಳೆಯದು. ಆದರೂ ಕೆಲವೊಮ್ಮೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ದೇಹದ ತೂಕ ಮತ್ತು ಚಯಾಪಚಯ ಕ್ರಿಯೆಯು ನೀವು ಎಷ್ಟು ಮದ್ಯ ಸೇವಿಸಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
2023 ರಲ್ಲಿ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನವು ಸಣ್ಣ ಪ್ರಮಾಣದ ಆಲ್ಕೋಹಾಲ್ ಸಹ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಸ್ವಲ್ಪ ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಆಲ್ಕೋಹಾಲ್ ನಿದ್ರೆ, ಸ್ಮರಣಶಕ್ತಿ, ಹಾರ್ಮೋನುಗಳ ಸಮತೋಲನ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆಲ್ಕೋಹಾಲ್ ಯಕೃತ್ತಿನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
(ಸೂಚನೆ: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ ಬರೆಯಲಾಗಿದೆ. ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. Zee Kannada News ಯಾವುದೇ ಸಂದರ್ಭಗಳಲ್ಲಿ ಮದ್ಯಪಾನ ಮಾಡುವುದನ್ನು ಶಿಫಾರಸು ಮಾಡುವುದಿಲ್ಲ.)









