ದೇಹದಲ್ಲಿ ಈ ರೀತಿಯ ತೊಂದರೆ ಪದೇ ಪದೇ ಕಾಣಿಸ್ತಾ ಇದೆಯಾ ಹಾಗಿದ್ರೆ ಹುಷಾರ್‌...! ಇದರಿಂದ ಕಿಡ್ನಿಫೇಲ್ ಆಗುವ ಸಾಧ್ಯತೆ ಹೆಚ್ಚು

ಮೂತ್ರಪಿಂಡವು ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದು, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರತೆಗೆದು ರಕ್ತವನ್ನು ಶುದ್ದೀಕರಿಸುತ್ತದೆ. 

Written by - Manjunath Naragund | Last Updated : Mar 6, 2025, 04:26 PM IST
  • ಕಿಡ್ನಿಯಲ್ಲಿ ಸಮಸ್ಯೆ ಏನಾದರು ಉಂಟಾದರೆ ಮೊದಲು ಸೊಂಟದ ಕೆಳಭಾಗದಲ್ಲಿ ವಿಪರೀತ ನೋವು ಕಾಣೀಸಿಳ್ಳುತ್ತದೆ
  • ಅಪೌಷ್ಠಿಕ ಆಹಾರಪದ್ದತಿ, ಹಾರ್ಮೋನುಗಳ ಅಸಮತೋಲನ ಮುಂತಾದವುಗಳಿಂದ ಮನುಷ್ಯ ಮತ್ತಷ್ಟು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾನೆ.
  • ಮೂತ್ರಪಿಂಡದ ಕೆಲಸದಲ್ಲಿ ಏನಾದರು ತೊಂದರೆ ಕಂಡುಬಂದರೆ ಇದು ವಿಪರೀತ ಹೊಟ್ಟೆ ನೋವನ್ನು ನೀಡುತ್ತದೆ.
ದೇಹದಲ್ಲಿ ಈ ರೀತಿಯ ತೊಂದರೆ ಪದೇ ಪದೇ ಕಾಣಿಸ್ತಾ ಇದೆಯಾ ಹಾಗಿದ್ರೆ ಹುಷಾರ್‌...! ಇದರಿಂದ ಕಿಡ್ನಿಫೇಲ್ ಆಗುವ ಸಾಧ್ಯತೆ ಹೆಚ್ಚು
ಸಾಂದರ್ಭಿಕ ಚಿತ್ರ

ಈಗಿನ ಬದಲಾವಣೆಯ ಜಗತ್ತಿನಲ್ಲಿ ಒತ್ತಡದ ಜೀವನಶೈಲಿಗೆ ಸಿಲುಕಿ ನಾವು ಆರೋಗ್ಯದ ಕಡೆಗೆ ಗಮನ ಹರಿಸದೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ.ಅಷ್ಟೇ ಅಲ್ಲದೆ ಅಪೌಷ್ಠಿಕ ಆಹಾರಪದ್ದತಿ, ಹಾರ್ಮೋನುಗಳ ಅಸಮತೋಲನ ಮುಂತಾದವುಗಳಿಂದ ಮನುಷ್ಯ ಮತ್ತಷ್ಟು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾನೆ.ಸಣ್ಣ ವಯಸ್ಸಿನಲ್ಲಿಯೇ ದಿನೇ ದಿನೇ ಬಿಪಿ ಹಾಗೂ ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ, ಇದರಿಂದಾಗಿ ಹಲವು ಜನರು ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದಾರೆ.

Add Zee News as a Preferred Source

ಸಾಮಾನ್ಯವಾಗಿ ಕಿಡ್ನಿ ಸಮಸ್ಯೆ ಉಂಟಾಗುವ ಮೊದಲು ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳೂತ್ತದೆ. ಒಂದು ವೇಳೆ ಈ ರೀತಿ ಗುಣಲಕ್ಷಣಗಳು ಏನಾದರು ಕಾಣಿಸಿಕೊಂಡರೆ ವೈದ್ಯರನ್ನು  ಸಂಪರ್ಕಿಸುವುದು ಒಳ್ಳೆಯದು.

ಮೂತ್ರಪಿಂಡವು ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದು, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರತೆಗೆದು ರಕ್ತವನ್ನು ಶುದ್ದೀಕರಿಸುತ್ತದೆ. ಒಂದು ವೇಳೆ  ಈ ಮೂತ್ರಪಿಂಡಕ್ಕೆ ಏನಾದರೂ ಸಮಸ್ಯೆಯಾದರೆ ಅದು ದೇಹದ ಇತರ ಭಾಗಗಳಲ್ಲಿ ತೊಂದರೆ ಕಾಣಿಸಿಕೊಳ್ಳುವ ಮೂಲಕ ಸೂಚನೆ ನೀಡುತ್ತದೆ.

ಇಂತಹ ಸಮಸ್ಯೆಗಳನ್ನು ಸಣ್ಣದಿದ್ದಾಗಲೇ ಗಮನಿಸಿ ಅದಕ್ಕೆ ಪರಿಹಾರ ಕೋಡುಕೊಳ್ಳಬೇಕು, ಇಲ್ಲದಿದ್ದರೆ ಇದು ಮುಂದೆ ದೊಡ್ಡ ಸಮಸ್ಯೆಯಾಗಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ.

ಕಿಡ್ನಿ ವೈಫಲ್ಯವಾಗುವ ಸೂಚನೆ ಇದ್ದರೆ ದೇಹದ ಈ ಭಾಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸೊಂಟದ ನೋವು:

ಕಿಡ್ನಿಯಲ್ಲಿ ಸಮಸ್ಯೆ ಏನಾದರು ಉಂಟಾದರೆ ಮೊದಲು ಸೊಂಟದ ಕೆಳಭಾಗದಲ್ಲಿ ವಿಪರೀತ ನೋವು ಕಾಣೀಸಿಳ್ಳುತ್ತದೆ. ಮೋತ್ರ ಪಿಂಡದಲ್ಲಿ ಊತ ಏನಾದರು ಹೆಚ್ಚಾದರೆ ಇದು ಮುಂದೆ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆಯೇ ಹೆಚ್ಚು.

ತೊಡೆಸಂದು ನೋವು:

ಮೂತ್ರಪಿಂಡದಲ್ಲಿ ಏನಾದರು ಕಲ್ಲುಗಳಾಗಿದ್ದರೆ ತೊಡೆಸಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಊತ ಅಥವಾ ನೂವು ಕಾಣೀಸಿಕೊಳ್ಳುತ್ತದೆ, ಈ ನೋವು ಪಕ್ಕೆಲುಬುಗಳ ಸುತ್ತಲೂ ಹರಡುವ ಸಾಧ್ಯತೆ ಹೆಚ್ಚು.

ಹೊಟ್ಟೆ ನೋವು:

ಮೂತ್ರಪಿಂಡದ ಕೆಲಸದಲ್ಲಿ ಏನಾದರು ತೊಂದರೆ ಕಂಡುಬಂದರೆ ಇದು ವಿಪರೀತ ಹೊಟ್ಟೆ ನೋವನ್ನು ನೀಡುತ್ತದೆ.ಕೆಲವೋಮ್ಮೆ ಇದು ಕಿಡ್ನಿ ವಫಲ್ಯದ ಸಮಸ್ಯೆಯು ಸಹ ಆಗಿರಬಹುದು.   

ವೃಷಣಗಳ ನೋವು:

ಒಂದುವೇಳೆ ಮೂತ್ರಪಿಂಡದ ಸಮಸ್ಯೆ ಏನಾದರು ಹೆಚ್ಚಾಗಿದ್ದರೆ ನೋವು ಹೊಟ್ಟೆಯಿಂದ ವೃಷಣಗಳಿಗೆ ಹರಡುವ ಸಾಧ್ಯತೆ ಹೆಚ್ಚು, ಸಾಮಾನ್ಯವಾಗಿ ಮೂತ್ರ ನಾಳಗಳಿಂದ ಕಲ್ಲುಗಳು ಹೊರಬರುವ ಸಮಸ್ಯೆ ಇದ್ದರೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

ಈ ರೀತಿಯ ಅಪಾಯಕಾರಿ ಸಮಸ್ಯೆಗಳು ಬರೆದಂತೆ ತಡೆಯಲು ಕೆಲವು ಸರಳ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ ದಿನಕ್ಕೆ ೨ ರಿಂದ ೩ ಲೀಟರ್‌ನೀರು ಕುಡಿಯಬೇಕು.ಮತ್ತು ಆರೋಗ್ಯಕರ ಜೀವನಶೈಲಿ ರೂಡಿಮಾಡಿಕೊಳ್ಳುವುದು.ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮೂತ್ರಪಿಂಡದ ಸಮಸ್ಯೆಯನ್ನು ಕಾಡಿಮೆ ಮಾಡಬಹುದು.

ಸೂಚನೆ: ಈ ಮೇಲಿನ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಮೇಲೆ ನೀಡಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Trending News