ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಹೊರಗೆ ಹೋದರೆ, ಒಂದು ಸೊಳ್ಳೆಯೂ ನಿಮ್ಮನನ್ನ ಕಚ್ಚಲ್ಲ..!

Mosquito skin oil : ಸೊಳ್ಳೆಗಳ ಹೆಸರು ಕೇಳಿದರೆ ಜನರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಏಕೆಂದರೆ ಸೊಳ್ಳೆ ಕಡಿತವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಜನರು ಉದ್ಯಾನಗಳಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವುದನ್ನು ಸಹ ತಪ್ಪಿಸುತ್ತಾರೆ. ಆದರೆ ಈಗ ನೀವು ಹಾಗೆ ಮಾಡಬೇಕಾಗಿಲ್ಲ.. ಅದಕ್ಕೆ ಸರಳ ಉಪಾಯವೊಂದು ಇಲ್ಲಿದೆ..

Written by - Krishna N K | Last Updated : May 22, 2025, 08:39 PM IST
    • ಬೇಸಿಗೆ ಮತ್ತು ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ.
    • ಸೊಳ್ಳೆಗಳ ಹೆಸರು ಕೇಳಿದರೆ ಜನರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ.
    • ಸೊಳ್ಳೆ ಕಡಿತವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಹೊರಗೆ ಹೋದರೆ, ಒಂದು ಸೊಳ್ಳೆಯೂ ನಿಮ್ಮನನ್ನ ಕಚ್ಚಲ್ಲ..!

Mansoon Health tips : ಬೇಸಿಗೆ ಮತ್ತು ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸೊಳ್ಳೆಗಳನ್ನು ತಪ್ಪಿಸಲು, ಮನೆಯಲ್ಲಿ ನೀವು ಸೊಳ್ಳೆ ನಿವಾರಕ ದ್ರವ್ಯವನ್ನು ಸಿಂಪಡಿಸಬಹುದು.. ಕಡ್ಡಿಗಳನ್ನು ಬಳಸಬಹುದು. ಆದರೆ ಮನೆಯಿಂದ ಹೊರಗೆ ಹೋಗುವಾಗ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. 

ಸೊಳ್ಳೆ ಕಡಿತವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಸಂಜೆಯೂ ಮನೆಯಿಂದ ಹೊರಗೆ ಹೋಗಲು ಹೆದರುತ್ತಾರೆ. ಆದರೆ ಈಗ ನೀವು ಹಾಗೆ ಮಾಡುವ ಅಗತ್ಯವಿಲ್ಲ. ಮನೆಯಿಂದ ಹೊರಗೆ ಹೋಗುವಾಗ ಬೇವಿನ ಎಣ್ಣೆಯನ್ನು ಹಚ್ಚಿಕೊಂಡರೆ ಒಂದು ಸೊಳ್ಳೆಯೂ ನಿಮ್ಮ ಹತ್ತಿರ ಬರಲ್ಲ. 

ಇದನ್ನೂ ಓದಿ:ಸಂಧಿವಾತ ರೋಗಿಗಳಿಗೆ ಕೀಲು ನೋವು ಕಡಿಮೆ ಮಾಡುವ ಯೋಗಾಸನಗಳು

ಬೇವಿನ ಎಣ್ಣೆ : ಪ್ರಾಚೀನ ಕಾಲದಿಂದಲೂ ಬೇವಿನ ಎಣ್ಣೆಯನ್ನು ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಈ ಎಣ್ಣೆ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನೀವು ಇದನ್ನು ನಿಮ್ಮ ದೇಹದ ಮೇಲೆ ಹಚ್ಚಿಕೊಂಡರೆ, ಅದು ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸೊಳ್ಳೆಗಳನ್ನು ತಪ್ಪಿಸಲು ಇದು ನೈಸರ್ಗಿಕ ಮತ್ತು ಸುರಕ್ಷಿತ ಮಾರ್ಗವಾಗಿದೆ. 

ಬಳಸುವ ವಿಧಾನ : ಒಮ್ಮೆ ನೀವು ಬೇವಿನ ಎಣ್ಣೆ ಹಚ್ಚಿಕೊಂಡರೆ ಅದು 4 ರಿಂದ 6 ಗಂಟೆಗಳ ಕಾಲ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಬೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಿ.. ಬೇವಿನ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ಅಲರ್ಜಿ ಉಂಟಾಗುತ್ತದೆ, ಆದ್ದರಿಂದ ಅದನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದು ಉತ್ತಮ. 

ಇದನ್ನೂ ಓದಿ:40 ವರ್ಷದ ನಂತರ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ತಪ್ಪದೇ ʼಈʼ ಪರೀಕ್ಷೆಗಳನ್ನ ಮಾಡಿಸಿಕೊಳ್ಳಬೇಕು!!

ಈ ಬೇವಿನ ಎಣ್ಣೆ ಸೊಳ್ಳೆಗಳನ್ನು ದೂರವಿಡಲು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಮಾರ್ಗವಾಗಿದೆ. ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದ್ದರಿಂದ ನೀವು ಯಾವುದೇ ಚಿಂತೆಯಿಲ್ಲದೆ ಬೇವಿನ ಎಣ್ಣೆಯನ್ನು ಹಚ್ಚಬಹುದು.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News