ಬಿಪಿ, ಸಕ್ಕರೆ, ಬೊಜ್ಜು ಅಥವಾ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರೆ ʼಈʼ ಮನೆಮದ್ದುಗಳನ್ನ ಟ್ರೈ ಮಾಡಿ!!

Home remedies: 100 ವರ್ಷಗಳವರೆಗೆ ಆರೋಗ್ಯವಾಗಿರಬೇಕೆಂದು ಎಲ್ಲರಿಗೂ ಆಸೆ. ಆದರೆ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿರುವ ಎಲ್ಲಾ ಗಂಭೀರ ಕಾಯಿಲೆಗಳಿಗೆ ಇಲ್ಲಿವೆ ಪವರ್‌ಫುಲ್‌ ಮನೆಮದ್ದುಗಳು.

Written by - Puttaraj K Alur | Last Updated : Apr 4, 2025, 10:20 PM IST
  • ಕೋವಿಡ್ ಸಾಂಕ್ರಾಮಿಕದ ನಂತರ ಹೃದಯಾಘಾತ ಪ್ರಕರಣಗಳು ನಿಲ್ಲುತ್ತಿಲ್ಲ
  • ಭಾರತದಲ್ಲಿ ಕೋಟ್ಯಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ
  • ನಾವು 100 ವರ್ಷಗಳವರೆಗೆ ಆರೋಗ್ಯವಾಗಿರಲು ಏನು ಮಾಡಬೇಕು??
ಬಿಪಿ, ಸಕ್ಕರೆ, ಬೊಜ್ಜು ಅಥವಾ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರೆ ʼಈʼ ಮನೆಮದ್ದುಗಳನ್ನ ಟ್ರೈ ಮಾಡಿ!!

Best home remedies: ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ನಿಲ್ಲುತ್ತಿಲ್ಲ. ಅನೇಕರ ಹೃದಯ ದುರ್ಬಲವಾಗಿದೆ. ಹೃದಯದ ಆರೋಗ್ಯಕ್ಕೆ ಅನೇಕ ಶತ್ರುಗಳಿವೆ. ಅದರಲ್ಲಿ ಒಂದು ಸಕ್ಕರೆ ಮತ್ತು ಬಿಪಿ. ಭಾರತವು ಈಗಾಗಲೇ ಮಧುಮೇಹದ ರಾಜಧಾನಿಯಾಗಿದೆ. ದೇಶದ ಕೋಟ್ಯಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಕೆಲಸ ಮಾಡುವುದು-ಮೊಬೈಲ್ ಫೋನ್-ಆನ್‌ಲೈನ್ ಅಧ್ಯಯ ಮುಂತಾದವುಗಳಿಂದ ಮಧುಮೇಹ ದೊಡ್ಡ ಸಮಸ್ಯೆಯಾಗಿದೆ. ಕೊರೊನಾದ ನಂತರ ದುರ್ಬಲ ಶ್ವಾಸಕೋಶಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅನಿಯಂತ್ರಿತ ಕೋಪವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು 100 ವರ್ಷಗಳವರೆಗೆ ಆರೋಗ್ಯವಾಗಿರಲು ಏನು ಮಾಡಬೇಕು?? ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿರುವ ಎಲ್ಲಾ ಗಂಭೀರ ಕಾಯಿಲೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಯಿರಿ. 

Add Zee News as a Preferred Source

100 ವರ್ಷ ಆರೋಗ್ಯವಾಗಲು: ಸೂಕ್ಷ್ಮ ವ್ಯಾಯಾಮಗಳು, ಸೂರ್ಯ ನಮಸ್ಕಾರ, ಸರ್ವಾಂಗಾಸನ, ಹೆಡ್‌ಸ್ಟ್ಯಾಂಡ್‌ ಮತ್ತು ಪ್ರಾಣಾಯಾಮ ಮಾಡಿರಿ.

ಇದನ್ನೂ ಓದಿ: ರಾತ್ರಿ ಮಲಗುವಾಗ ಮೊಬೈಲ್‌ ಅನ್ನು ಎಷ್ಟು ದೂರ ಇಟ್ಟುಕೊಳ್ಳಬೇಕು?

ಬೊಜ್ಜು ಕರಗಿಸಲು: ಓರೆಯಾದ ತಾಡಾಸನ, ಪಾದ ಹಸ್ತಾಸನ, ಸ್ಥಿತಕೋಣಾಸನ, ಭುಜಂಗಾಸನ ಮತತು ಉತ್ತಾನಪಾದಾಸನ ಮಾಡಿರಿ.

ತೂಕ ಇಳಿಸಿಕೊಳ್ಳಲು: ಶುಂಠಿ-ನಿಂಬೆ ಚಹಾ ಕುಡಿಯಿರಿ. ರಾತ್ರಿಯಲ್ಲಿ 1 ಟೀ ಚಮಚ ತ್ರಿಫಲವನ್ನು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ. ಅಲ್ಲದೆ 3-6 ಗ್ರಾಂ ದಾಲ್ಚಿನ್ನಿಯನ್ನು 200 ಗ್ರಾಂ ನೀರಿನಲ್ಲಿ ಕುದಿಸಿ 1 ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ.

ಸಕ್ಕರೆ ನಿಯಂತ್ರಿಸಲು: ಸೌತೆಕಾಯಿ-ಹಾಗಿಡ ಟೊಮೆಟೊ ರಸ ಮತ್ತು ಗಿಲೋಯ್ ಕಷಾಯ ಕುಡಿಯಿರಿ. ಅಲ್ಲದೆ ಪ್ರತಿದಿನ 15 ನಿಮಿಷಗಳ ಕಾಲ ಮಂಡೂಕಾಸನ, ಯೋಗಮುದ್ರಾಸನ, ಕಪಾಲಭಾತಿ, ಥೈರಾಯ್ಡ್, ಉಸ್ಟ್ರಾಾಸನ, ಮತ್ಸ್ಯಾಸನ, ಸರ್ವಾಂಗಾಸನ, ಸಿಂಹಾಸನ ಮತ್ತು ಪ್ರಾಣಾಯಾಮವನ್ನು ಮಾಡಿರಿ.       

ಥೈರಾಯ್ಡ್‌ನಲ್ಲಿ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ: ಮುಲೇಥಿ, ತುಳಸಿ, ತ್ರಿಫಲ, ಅಶ್ವಗಂಧ ಬಿಸಿ ಹಾಲು, ಕೊತ್ತಂಬರಿ ರಸ ಮತ್ತು ಅಲೋವೆರಾ ಜ್ಯೂಸ್ ಸೇವಿಸಿರಿ.                                  

ಹೃದಯ ಬಲಗೊಳ್ಳಲು ನೈಸರ್ಗಿಕ ಪರಿಹಾರ: ಅರ್ಜುನ್ ತೊಗಟೆ 1 ಟೀ ಚಮಚ, ದಾಲ್ಚಿನ್ನಿ 2 ಗ್ರಾಂ ಮತ್ತು 5 ತುಳಸಿ ಎಲೆಗಳನ್ನ ಕುದಿಸಿ ಕಷಾಯ ತಯಾರಿಸಿ ಪ್ರತಿದಿನ ಕುಡಿಯುವುದರಿಂದ ಅಡಚಣೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಹೇರ್‌ ಕಲರ್‌ ಅವಶ್ಯಕತೆಯೇ ಇಲ್ಲ.. ಈ ಎಲೆ ಕುದಿಸಿ ಹಚ್ಚಿದ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿಕೂದಲು! ತಲೆಹೊಟ್ಟಿಗೂ ಇದೇ ಮದ್ದು.. 

ಶ್ವಾಸಕೋಶಗಳು ಉಕ್ಕಿನಂತೆ ಆಗಲು ಏನು ಮಾಡಬೇಕು?: ಪ್ರಾಣಾಯಾಮ ಮಾಡಿ, ಅರಿಶಿನ ಹಾಲು ಕುಡಿಯಿರಿ, ಬಿಸಿ ನೀರು ಕುಡಿಯಿರಿ ಮತ್ತು ನಾಸ್ಯಮ್-ಸ್ಟೀಮ್ ತೆಗೆದುಕೊಳ್ಳಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News