)
Symptoms of kidney problems: ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಅತಿಯಾದ ಒತ್ತಡದ ಸಮಸ್ಯೆಯಿಂದ ಇಂದು ಅನೇಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದ ಹಿಂಭಾಗದಲ್ಲಿ ಅಥವಾ ಪಕ್ಕದಲ್ಲಿ ನೋವು, ಆಗಾಗ ಮೂತ್ರ ವಿಸರ್ಜನೆ, ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ, ಕಾಲುಗಳು, ಪಾದಗಳು ಮತ್ತು ಕಣ್ಣುಗಳ ಸುತ್ತ ಊತ, ಸುಸ್ತು, ವಾಕರಿಕೆ, ವಾಂತಿ, ಹಸಿವಿನ ಕೊರತೆ ಮತ್ತು ತುರಿಕೆ ಚರ್ಮ. ಈ ಲಕ್ಷಣಗಳು ಕಂಡುಬಂದರೆ ನೀವು ಕೂಡಲೇ ವೈದ್ಯರನ್ನ ಸಂಪರ್ಕಿಸುವುದು ಬಹಳ ಮುಖ್ಯ. ಏಕೆಂದರೆ ಇವು ಕಿಡ್ನಿ ವೈಫಲ್ಯದ ಲಕ್ಷಣಗಳಾಗಿರುವುದು. ಕಿಡ್ನಿ ವೈಫಲ್ಯದ ಸಂಕೇತಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಇದ್ರೆ ತೀವ್ರ ಹೊಟ್ಟೆ ನೋವು ಬರುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಸಂಕೇತ ಆಗಿರಬಹುದು. ಪಾದಗಳಲ್ಲಿ ಊತ, ಕಡಿಮೆ ಉಸಿರಾಟ, ನಿದ್ರಾಹೀನತೆ, ಅತಿಯಾದ ಅಥವಾ ಕಡಿಮೆ ಮೂತ್ರವಿಸರ್ಜನೆ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣಗಳಾಗಿವೆ. ಆಗಾಗ ವಾಕರಿಕೆ, ವಾಂತಿ ಮತ್ತು ಹಸಿವಾಗದಿರುವುದು ಸಹ ಕಿಡ್ನಿ ಸಮಸ್ಯೆಯ ಲಕ್ಷಣವಾಗಿರುತ್ತದೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳಿದ್ದಾಗ ಅಂದರೆ ಕಿಡ್ನಿ ಸ್ಟೋನ್ ಆದಾಗ ಸೊಂಟದ ಸುತ್ತಲೂ ಊತ ಕಂಡು ಬರುತ್ತದೆ. ಪಕ್ಕೆಲುಬುಗಳ ಸುತ್ತಲೂ ನೋವಿರುತ್ತದೆ. ಮೂತ್ರಕೋಶದಲ್ಲಿ ಉರಿಯೂತ ಹೆಚ್ಚಾಗುವುದು ಸಹ ಭವಿಷ್ಯದಲ್ಲಿ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ.
ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಾಗ ಕಂಡುಬರುವ ಮೊದಲ ಲಕ್ಷಣವೆಂದರೆ ಕೆಳ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು. ದಿನದಿಂದ ದಿನಕ್ಕೆ ಅನೇಕರಲ್ಲಿ ಬಿಪಿ ಮತ್ತು ಮಧುಮೇಹದ ಜೊತೆಗೆ ಮೂತ್ರಪಿಂಡದ ಸಮಸ್ಯೆಯೂ ಹೆಚ್ಚುತ್ತಿದೆ. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರಲ್ಲಿ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)