ಹಲ್ಲಿನ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ತೀವ್ರ ಹೃದಯಾಘಾತದ ಸಂಕೇತ !ಒಂದು ನಿಮಿಷವೂ ತಡಮಾಡದೆ ಆಸ್ಪತ್ರೆಯತ್ತ ಧಾವಿಸಿ!

ಹಲ್ಲಿನಲ್ಲಿ ಹಠಾತ್ ಕಾಣಿಸಿಕೊಳ್ಳುವ ತೀಕ್ಷ್ಣವಾದ ನೋವು ಬಹಳ ಕಿರಿ ಕಿರಿ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಜನರು ಇದರ ಪರಿಹಾರಕ್ಕೆ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಹೃದಯಾಘಾತದ ಅಪಾಯಕಾರಿ ಚಿಹ್ನೆಯೂ ಆಗಿರಬಹುದು.   

Written by - Ranjitha R K | Last Updated : Jun 5, 2025, 10:47 AM IST
  • ಹಲ್ಲುನೋವು ಹಠಾತ್ ಆಗಿ ಕಾಣಿಸಿಕೊಳ್ಳುತ್ತದೆ ಮತ್ತು ತೀವ್ರವಾಗಿರುತ್ತದೆ.
  • ಸರಿಯಾಗಿ ಔಷಧಿ ತೆಗೆದುಕೊಳ್ಳದಿದ್ದರೆ, ನೋವನ್ನು ಸಹಿಸಿಕೊಳ್ಳುವುದು ಕಷ್ಟ
  • ತೀವ್ರವಾದ ಹಲ್ಲುನೋವು ಹೃದಯಾಘಾತದ ಮುನ್ಸೂಚನೆಯಾಗಿರಬಹುದು
ಹಲ್ಲಿನ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ತೀವ್ರ ಹೃದಯಾಘಾತದ ಸಂಕೇತ !ಒಂದು ನಿಮಿಷವೂ ತಡಮಾಡದೆ ಆಸ್ಪತ್ರೆಯತ್ತ ಧಾವಿಸಿ!

ಬೆಂಗಳೂರು : ಹಲ್ಲುನೋವು ಹಠಾತ್ ಆಗಿ ಕಾಣಿಸಿಕೊಳ್ಳುತ್ತದೆ ಮತ್ತು ತೀವ್ರವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳದಿದ್ದರೆ,  ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.ಹೆಚ್ಚಿನ ಸಮಯ ಜನರು ಹಲ್ಲುನೋವನ್ನು ಹಲ್ಲುಗಳಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆ ಎಂದು  ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಕೆಲವೊಮ್ಮೆ ತೀವ್ರವಾದ ಹಲ್ಲುನೋವು ಮುಂದಿನ ದಿನಗಳಲ್ಲಿ ಹೃದಯಾಘಾತ ಆಗಲಿದೆ ಎನ್ನುವ ಮುನ್ಸೂಚನೆ ಆಗಿರುತ್ತದೆ. 

Add Zee News as a Preferred Source

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ, ದೇಶದಲ್ಲಿ ಹೃದಯಾಘಾತದ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ವೇಗವಾಗಿ ಹೆಚ್ಚುತ್ತಿವೆ. ಪ್ರಸ್ತುತ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಪ್ರತಿ ವರ್ಷ ಸುಮಾರು 28 ಲಕ್ಷ ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ  ಮೃತಪಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಹೃದಯಾಘಾತದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಚಿಕ್ಕ ಮಕ್ಕಳು ಸಹ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ, ಈ ರೋಗದ ಲಕ್ಷಣಗಳನ್ನು ಸಕಾಲದಲ್ಲಿ ಗುರುತಿಸುವುದು ಬಹಳ ಮುಖ್ಯ. ಇಲ್ಲವಾದರೆ ಜೀವವನ್ನೇ ಕಳೆದುಕೊಳ್ಳಬೇಕಾಗಬಹುದು.

ಇದನ್ನೂ ಓದಿ : ಔಷಧಿಯಿಲ್ಲದೇ ಮಧುಮೇಹ ನಿಯಂತ್ರಿಸುವ ಪುಡಿ! ಹಾಲಿಗೆ ಬೆರೆಸಿ ಕುಡಿದ್ರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್..‌

ಹಲ್ಲು ನೋವನ್ನು ನಿರ್ಲಕ್ಷಿಸಬೇಡಿ :
ವೈದ್ಯರ ಪ್ರಕಾರ, ಹೃದಯಾಘಾತಕ್ಕೆ ಮುನ್ನ, ದೇಹವು ಹಲವು ವಿಧಗಳಲ್ಲಿ ಪ್ರತಿಕ್ರಿಯಿಸುತ್ತದೆ ಮತ್ತು ಸಂಕೇತಗಳನ್ನು ನೀಡುತ್ತದೆ. ಆ ಸಂಕೇತಗಳನ್ನು ನಾವು ಎಷ್ಟು ಬೇಗ ಗುರುತಿಸಿಕೊಳ್ಳುತ್ತೇವೆ ಮತ್ತು ಎಷ್ಟು ಬೇಗ ಚಿಕಿತ್ಸೆ  ಪಡೆಯುತ್ತೇವೆ ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಅಂತಹ ಒಂದು ಸಂಕೇತವೆಂದರೆ ಹಲ್ಲುಗಳಲ್ಲಿ ಹಠಾತ್ ಕಾಣಿಸಿಕೊಳ್ಳುವ ತೀಕ್ಷ್ಣವಾದ ನೋವು. 

ಹೃದಯಾಘಾತದ ಚಿಹ್ನೆ : 
ಎಡ ದವಡೆಯಲ್ಲಿ ಇದ್ದಕ್ಕಿದ್ದಂತೆ ತೀವ್ರವಾದ ನೋವು ಕಾಣಿಸಿಕೊಂಡರೆ ಅಥವಾ ಸೈನಸ್ ಸಮಸ್ಯೆಗಳಿದ್ದು, ಇದರೊಂದಿಗೆ, ಉಸಿರಾಟದ ತೊಂದರೆ, ಎದೆಯಲ್ಲಿ ಒತ್ತಡ ಮತ್ತು ಎಡಗೈಯಲ್ಲಿ ಜುಮ್ಮೆನಿಸುವಿಕೆ ಅನುಭವವಾಗಲು ಪ್ರಾರಂಭಿಸುತ್ತದೆ. ಎಡಗೈ, ಕುತ್ತಿಗೆ, ದವಡೆ ಅಥವಾ ಬೆನ್ನಿನಲ್ಲಿ ನೋವು ಪ್ರಾರಂಭವಾದರೆ, ವಿಪರೀತವಾಗಿ ಬೆವರಲು ಪ್ರಾರಂಭಿಸಿದರೆ ಮತ್ತು ವಾಕರಿಕೆ ಯಗುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಹಲ್ಲುನೋವಿನಿಂದ ಪ್ರಾರಂಭವಾಗುವ ಈ ಎಲ್ಲಾ ಲಕ್ಷಣಗಳು ಹೃದಯಾಘಾತದ ಲಕ್ಷಣಗಳಾಗಿವೆ. ಹೀಗಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 

ಇದನ್ನೂ ಓದಿ : ರಾತ್ರಿ ನೀವು ಹಲ್ಲು ಉಜ್ಜದಿದ್ದರೆ ಹೃದಯಾಘಾತ ಸಾಧ್ಯತೆ ಅಧಿಕ..!

ಹೃದಯಾಘಾತವಾದರೆ ಏನು ಮಾಡಬೇಕು? : 
ಹೃದಯಾಘಾತದ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ಹೃದಯ ಆಸ್ಪತ್ರೆಯ ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕು. ಆಂಬ್ಯುಲೆನ್ಸ್ ಬರಲು ಸಾಧ್ಯವಾಗದಿದ್ದರೆ, ನೀವೇ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಧಾವಿಸಬೇಕು. ಆಸ್ಪತ್ರೆ ತಲುಪುವವರೆಗೆ ರೋಗಿಗೆ ಸಿಪಿಆರ್ ನೀಡುವ ಮೂಲಕ ಉಸಿರಾಟದ ಪೂರೈಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಆಸ್ಪತ್ರೆ ತಲುಪಿದ ನಂತರ, ರೋಗಿಯ ಚಿಕಿತ್ಸೆಯನ್ನು ತುರ್ತು ಆಂಜಿಯೋಗ್ರಫಿ ಮಾಡುವ ಮೂಲಕ ಪ್ರಾರಂಭಿಸಲಾಗುತ್ತದೆ. ಇದರಲ್ಲಿ, ಹೃದಯದಲ್ಲಿ ಸ್ಟೆಂಟ್ ಹಾಕಬೇಕೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕೆ ಎಂದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

ಹೃದಯಾಘಾತವನ್ನು ತಪ್ಪಿಸುವ ಮಾರ್ಗಗಳು : 
ವೈದ್ಯರ ಪ್ರಕಾರ, ಹೃದಯಾಘಾತದ ಅಪಾಯವನ್ನು ತಪ್ಪಿಸಲು, ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕು. ಇದಕ್ಕಾಗಿ, ಸಮತೋಲಿತ ಆಹಾರ ಮತ್ತು ದೈನಂದಿನ ವ್ಯಾಯಾಮ ಬಹಳ ಮುಖ್ಯ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ಯೋಗ ಮತ್ತು ಧ್ಯಾನ ಮಾಡಿ. ಕೊಲೆಸ್ಟ್ರಾಲ್ ಮತ್ತು ಸಕ್ಕರೆಯನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಿ. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News