Who Should Avoid Paneer: ಸಸ್ಯಹಾರಿಗಳು ಬಹಳ ಪ್ರೀತಿಯಿಂದ ತಿನ್ನುವ ಆಹಾರ ಎಂದರೆ ಅದು ಪನ್ನಿರ್, ಕೆಲವೊಮ್ಮೆ ಮಾಂಸಹಾರಿಗಳು ಸಹ ಪನ್ನಿರ್ ಖಾದ್ಯಗಳನ್ನು ಬಹಳ ಇಷ್ಟಪಟ್ಟು ಇಂತಾರೆ. ಈ ರೀತಿ ಎಲ್ಲರ ಅಚ್ಚುಮೆಚ್ಚಾಗಿರುವ "ಪನ್ನಿರ್" ದೇಹಕ್ಕೆ ಆರೋಗ್ಯಕರವೂ ಹೌದು. ಇದರಲ್ಲಿ ಅಧಿಕ ಪ್ರೋಟೀನ್ ಅಂಶವಿದೆ, ಆದರೆ ಕೆಲವು ಆರೋಗ್ಯ ಸಮಸ್ಯೆ ಇದ್ದವರು ಪನ್ನೀರ್‌ನ್ನು ಸೇವಿಸುವುದು ಒಳ್ಳೆಯದಲ್ಲ. ಒಂದುವೇಳೆ ತಿಂದರೆ ಅಡ್ಡಪರಿಣಾಮ ಉಂಟಾಗಬಹುದು.
ಯಾವುದೇ ಸಮಾರಂಭಗಳಲ್ಲಿ ಪನೀರ್‌ನಿಂದ ಮಾಡಿದ ಖಾದ್ಯಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ತರಕಾರಿ ಪ್ರಿಯರಿಗಂತೂ ಇದು ಆಹಾರದಲ್ಲಿ ಇರಲೇಬೇಕು. ಪನೀರ್‌ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ. ಹಾಗಾಗಿ, ಆರೋಗ್ಯಕ್ಕೆ ಇದನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, ಇದನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಕೆಲವು ಆರೋಗ್ಯ ಸಮಸ್ಯೆ ಇದ್ದವರು ಪನೀರ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ ಎನ್ನಲಾಗುತ್ತದೆ.
ಇದನ್ನೂ ಓದಿ- ಒಂದು ಟೊಮಾಟೊದಿಂದ ಕಡು ಕಪ್ಪಾಗುತ್ತೆ ಬಿಳಿ ಕೂದಲು, ತುರಿಕೆ, ತಲೆಹೊಟ್ಟಿನ ಸಮಸ್ಯೆಯಿಂದಲೂ ಸಿಗುತ್ತೆ ಪರಿಹಾರ
ಯಾರಿಗೆಲ್ಲಾ ಪನೀರ್ ಹಾನಿಕಾರಕ:
ಮೊದಲನೇಯದಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಪನೀರ್ ಅನ್ನು ಹೆಚ್ಚಾಗಿ ತಿನ್ನಬಾರದು. ಒಂದುವೇಳೆ ಹೊಟ್ಟೆ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗಿ ಅತೀಸಾರಕ್ಕೆ ಕಾರಣವಾಗಬಹುದು. ಇದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ ಟ್ರಬಲ್ ಆಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. ಹಾಗಾಗಿ ಉದರ ಸಂಬಂಧಿತ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಪನೀರ್ ತಿನ್ನುವುದನ್ನು ತಪ್ಪಿಸಿದರೆ ಒಳಿತು.
ಅಲರ್ಜಿ ಇರುವವರು ಸಹ ಪನೀರ್ ತಿನ್ನದಿದ್ದರೆ ಒಳ್ಳೆಯದು. ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದವರು ಇದನ್ನು ಆದಷ್ಟು ತ್ಯಜಿಸುವಂತೆ ಸೂಚನೆ ನೀಡಲಾಗುತ್ತದೆ. ಏಕೆಂದರೆ ಪನೀರ್ ನಲ್ಲಿ ಕಡಿಮೆ ಲ್ಯಾಕ್ಟೋಸ್ ಇದ್ದರೂ ಸಹ ಇದನ್ನು ತಿನ್ನಬೇಡಿ ಇಲ್ಲವೇ ಕಡಿಮೆ ಪ್ರಮಾಣದಲ್ಲಿ ತಿನ್ನಿ.
ಇದನ್ನೂ ಓದಿ- ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ 'ಉಪ್ಪು'... ಈ ರೀತಿ ಬಳಸಿದ್ರಷ್ಟೇ ಸಿಗುತ್ತೆ ಹೆಚ್ಚಿನ ಪ್ರಯೋಜನ
ಪನೀರ್ನಲ್ಲಿ ಕೊಬ್ಬಿನಾಂಶ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಹೃದಯ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆ ಇದ್ದವರಿಗೆ ಪನೀರ್ ಉತ್ತಮ ಆಹಾರವಲ್ಲ. ಬದಲಿಗೆ ಇದು ನಿಮ್ಮ ಸಮಸ್ಯೆಗಳನ್ನು ಉಲ್ಬಣಿಸಬಹುದು.
ಅಧಿಕ ರಕ್ತದೊತ್ತಡ ಇರುವವರು ಸಹ ಆದಷ್ಟು ಪನೀರ್ ಸೇವನೆ ತ್ಯಜಿಸಬೇಕು. ಏಕೆಂದರೆ, ಪನೀರ್‌ನಲ್ಲಿ ಸೋಡಿಯಂ ಹೆಚ್ಚಾಗಿದ್ದು ಇದರ ಸೇವನೆಯಿಂದ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









