Fatty Liver Symptoms On Face: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಅನೇಕ ಜನರನ್ನ ಕಾಡುತ್ತಿದೆ. ಇದು ಮುಖ್ಯವಾಗಿ ಮದ್ಯಪಾನ ಮಾಡುವರನ್ನ ಮಾತ್ರವಲ್ಲದೆ ಮದ್ಯಪಾನ ಮಾಡದವರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಿಮ್ಮ ಮುಖದ ಮೇಲಿನ ಫ್ಯಾಟಿ ಲಿವರ್ ಲಕ್ಷಣಗಳನ್ನ ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಆರೋಗ್ಯ ತಜ್ಞರ ಪ್ರಕಾರ, ಮುಖದ ಮೇಲೆ ಫ್ಯಾಟಿ ಲಿವರ್ ಲಕ್ಷಣಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
ಕಪ್ಪು ವರ್ತುಲಗಳು
ನಿಮಗೆ ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ, ಮುಖದಲ್ಲಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ನಿದ್ರಾಹೀನತೆಯೂ ಇದಕ್ಕೆ ಒಂದು ಕಾರಣ. ಆದರೆ ನೀವು ಚೆನ್ನಾಗಿ ನಿದ್ರೆ ಮಾಡಿದರೂ, ಕಣ್ಣುಗಳ ಸುತ್ತಲೂ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಏಕೆಂದರೆ ಲಿವರ್ ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನ ತೆಗೆದುಹಾಕುತ್ತದೆ. ಅದರ ಕಾರ್ಯ ನಿಧಾನವಾದಾಗ ವಿಷಕಾರಿ ವಸ್ತುಗಳು ಉಳಿಯುತ್ತವೆ. ಪರಿಣಾಮ ರಕ್ತ ಪರಿಚಲನೆ ಸುಧಾರಿಸುವುದಿಲ್ಲ, ಇದು ಕಪ್ಪು ವರ್ತುಲಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಅಂಟಿ ಕುಳಿತ ಕೊಬ್ಬು ಕರಗಿಸುವ ಬ್ರಹ್ಮೌಷಧ ಈ ಮಸಾಲೆ! ನೀರಲ್ಲಿ ಮಿಕ್ಸ್ ಮಾಡಿ ಕುಡಿರಿ ಸಾಕು...
ಫ್ಯಾಟಿ ಲಿವರ್ ಸಮಸ್ಯೆ ಇದ್ದಾಗ ಮುಖದ ಮೇಲೆ ಕೆಂಪು ಚುಕ್ಕೆಗಳು ಸಹ ಕಾಣಿಸಿಕೊಳ್ಳುತ್ತವೆ. ಇವು ಕೆನ್ನೆಗಳ ಮೇಲೆ ಕಾಣಿಸಿಕೊಳ್ಳುವುದನ್ನ ನಾವು ನೋಡುತ್ತೇವೆ. ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಾದಾಗ ಇದು ಸಂಭವಿಸುತ್ತದೆ. ಲಿವರ್ ಕಾರ್ಯವು ದುರ್ಬಲಗೊಂಡಾಗ ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಾಗುತ್ತವೆ. ಕೆನ್ನೆಗಳ ಮೇಲೆ ಕೆಂಪು ಬಣ್ಣದಲ್ಲಿ ಅವು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಫ್ಯಾಟಿ ಲಿವರ್ ಕಾಯಿಲೆ ಇರುವ ಕೆಲವರಿಗೆ ದೇಹದಾದ್ಯಂತ ತುರಿಕೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಖನಿಜಗಳ ಕೊರತೆಯಿದ್ದಾಗಲೂ ಈ ಸ್ಥಿತಿ ಉಂಟಾಗುತ್ತದೆ. ವಿಶೇಷವಾಗಿ ಫ್ಯಾಟಿ ಲಿವರ್ ಇದ್ದಾಗ, ನಮ್ಮ ಕೈಗಳು, ಪಾದಗಳು ಮತ್ತು ಮುಖದ ಮೇಲೆ ತುರಿಕೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಹೆಚ್ಚು ಉಪ್ಪು ಇದ್ದಾಗಲೂ ಇದು ಸಂಭವಿಸುತ್ತದೆ.
ಇದನ್ನೂ ಓದಿ: ಹೃದಯಾಘಾತವಾಗದಂತೆ ರಕ್ಷಿಸುವ ದಿವ್ಯ ಔಷಧ! ಸೇವಿಸುವ ವಿಧಾನ ಹೀಗಿದ್ದರೇ ಸೊಂಟದ ಸುತ್ತಲಿನ ಕೊಬ್ಬು ಸಹ ಕರಗುವುದು..
ಫ್ಯಾಟಿ ಲಿವರ್ ಸಮಸ್ಯೆ ಇದ್ದಾಗ ಕಾಮಾಲೆ ಕೂಡ ಬರುತ್ತದೆ. ಇದರಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಲಕ್ಷಣಗಳು ಮುಖದ ಮೇಲೆ ಸುಲಭವಾಗಿ ಕಂಡುಬರುತ್ತವೆ. ದೇಹದಲ್ಲಿ ಬಿಲಿರುಬಿನ್ ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಫ್ಯಾಟಿ ಲಿವರ್ ಅಥವಾ ಇತರ ಲಿವರ್ ಸಮಸ್ಯೆಗಳಿದ್ದಾಗ ಇದು ಕಾಮಾಲೆಗೂ ಕಾರಣವಾಗಬಹುದು.
ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಫ್ಯಾಟಿ ಲಿವರ್ ಸಮಸ್ಯೆ ಇರುವವರು ಹೆಚ್ಚಾಗಿ ಇತರ ಲಕ್ಷಣಗಳನ್ನು ಕಾಣುತ್ತಾರೆ. ಮುಖ ಊದಿಕೊಂಡು ಕೆಂಪಾಗುವುದನ್ನ ಅವರು ನೋಡಬಹುದು. ಅಷ್ಟೇ ಅಲ್ಲ ಕೆಲವರ ಮುಖದಲ್ಲಿ ಮೊಡವೆಗಳು ಸಹ ಕಾಣಿಸಿಕೊಳ್ಳುತ್ತವೆ. ಇದು ಹಾರ್ಮೋನುಗಳ ಅಸಮತೋಲನಕ್ಕೂ ಕಾರಣವಾಗುತ್ತದೆ. ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)









