)
How to control uric acid
: ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನ ತಕ್ಷಣ ಪರಿಹರಿಸದಿದ್ದರೆ, ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಯೂರಿಕ್ ಆಮ್ಲದ ಮಟ್ಟವನ್ನ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಬಹುದಾದ ಕೆಲವು ಪೋಷಕಾಂಶ-ಭರಿತ ಆಹಾರಗಳು ಮತ್ತು ಪಾನೀಯಗಳ ಬಗ್ಗೆ ತಿಳಿಯಿರಿ...
ದೇಹದಿಂದ ಯೂರಿಕ್ ಆಮ್ಲವನ್ನ ತೆಗೆದುಹಾಕಲು, ನೀವು ವಿಟಮಿನ್ ʼಸಿʼ ಸಮೃದ್ಧವಾಗಿರುವ ಆಹಾರವನ್ನ ಸೇವಿಸಬಹುದು. ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನ ನಿಯಂತ್ರಿಸಲು ನೀವು ಕಿತ್ತಳೆ, ಸಿಹಿ ನಿಂಬೆಹಣ್ಣು, ಟ್ಯಾಂಗರಿನ್, ಅನಾನಸ್ ಮತ್ತು ಕಿವಿಗಳಂತಹ ಹಣ್ಣುಗಳನ್ನ ಸೇವಿಸಬಹುದು.
ಆಪಲ್ ಸೈಡರ್ ವಿನೆಗರ್ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನ ನಿವಾರಿಸುವಲ್ಲಿ ಪರಿಣಾಮಕಾರಿ. ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯಿರಿ. ವೈದ್ಯರ ಸಲಹೆ ಮೇರೆಗೆ ನೀವು ನಿಮ್ಮ ಆಹಾರದಲ್ಲಿ ಆಪಲ್ ಸೈಡರ್ ವಿನೆಗರ್ ಸೇರಿಸಿಕೊಳ್ಳಬಹುದು.
ಒಮೆಗಾ-3 ಕೊಬ್ಬಿನಾಮ್ಲ ಭರಿತ ಆಹಾರಗಳು ಯೂರಿಕ್ ಆಮ್ಲದ ಮಟ್ಟವನ್ನ ನಿಯಂತ್ರಿಸಲು ಸಹಾಯಕವಾಗಬಹುದು. ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ವಾಲ್ನಟ್ಗಳು ಗಮನಾರ್ಹ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳನ್ನ ಹೊಂದಿರುತ್ತವೆ.
ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಆಹಾರಗಳು ಮತ್ತು ಪಾನೀಯಗಳನ್ನ ನಿಮ್ಮ ಆಹಾರ ಯೋಜನೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸಿಕೊಳ್ಳಬೇಕು. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಯೂರಿಕ್ ಆಮ್ಲದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಮುಕ್ತಿ ಬೇಕಾದ್ರೆ ಉತ್ತಮ ಜೀವನಶೈಲಿ ಮುಖ್ಯ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)