ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜಿನ ಸಮಸ್ಯೆ; 68% ಮಕ್ಕಳ ಸಾವಿಗೆ ಅಪೌಷ್ಟಿಕತೆ ಕಾರಣ

ಭಾರತದಲ್ಲಿ, ಅಪೌಷ್ಟಿಕತೆಯ ಗ್ರಾಫ್ ಸುಧಾರಿಸಿದೆ. ಆದಾಗ್ಯೂ, ಇನ್ನೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆಯು ಸಾವಿಗೆ ಮೊದಲ ಕಾರಣವಾಗಿದೆ. ದೇಶದ 68 ಪ್ರತಿಶತ ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ.

Updated: Sep 18, 2019 , 03:44 PM IST
ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜಿನ ಸಮಸ್ಯೆ;  68% ಮಕ್ಕಳ ಸಾವಿಗೆ ಅಪೌಷ್ಟಿಕತೆ ಕಾರಣ

ನವದೆಹಲಿ: ಭಾರತದಲ್ಲಿ, ಅಪೌಷ್ಟಿಕತೆಯ ಗ್ರಾಫ್ ಸುಧಾರಿಸಿದೆ. ಆದಾಗ್ಯೂ, ಇನ್ನೂ ಅಪೌಷ್ಟಿಕತೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಮೊದಲ ಕಾರಣವಾಗಿದೆ. ದೇಶದ 68 ಪ್ರತಿಶತ ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಐಸಿಎಂಆರ್ನಲ್ಲಿ  ಇಂಡಿಯಾ ಸ್ಟೇಟ್ ಲೆವೆಲ್ ಡಿಸೀಸಸ್ ವರದಿ(India State Level Disease Burden Report)ಯನ್ನು ಬಿಡುಗಡೆ ಮಾಡಲಾಗಿದೆ. 

ವರದಿಯ ಪ್ರಕಾರ, ಅಪೌಷ್ಟಿಕತೆ ವಾರ್ಷಿಕ ಒಂದು ಶೇಕಡಾ ದರದಲ್ಲಿ ಕಡಿಮೆಯಾಗಿದೆ. ಆದರೆ 1990 ಮತ್ತು 2017 ರ ನಡುವೆ, ಅಪೌಷ್ಟಿಕತೆಯಿಂದಾಗಿ ಮರಣ ಹೊಂದುವ ಮಕ್ಕಳ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಯಾಗಿದೆ. ಆದರೆ 68 ಪ್ರತಿಶತ ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ ಎಂದು ಹೇಳಲಾಗಿದೆ.

21% ಮಕ್ಕಳು ಕಡಿಮೆ ತೂಕದಿಂದ ಜನಿಸುತ್ತಾರೆ:
ಈ ಅಧ್ಯಯನವನ್ನು ದಿ ಲ್ಯಾನ್ಸೆಟ್ನಲ್ಲಿಯೂ ಪ್ರಕಟಿಸಲಾಗಿದೆ. ಅಧ್ಯಯನದ ಪ್ರಕಾರ, ಶೇಕಡಾ 21 ರಷ್ಟು ಮಕ್ಕಳು ಕಡಿಮೆ ತೂಕದೊಂದಿಗೆ ಜನಿಸಿದ್ದಾರೆ. ಜನನದ ಸಮಯದಲ್ಲಿ, ಹಲವು ಮಕ್ಕಳ ತೂಕವು 2.5 ಕೆಜಿಗಿಂತ ಕಡಿಮೆಯಿರುತ್ತಿತ್ತು. ಅಂತಹ ಮಕ್ಕಳ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಇದಕ್ಕೆ ವಿರುದ್ಧವಾಗಿ 12 ಪ್ರತಿಶತದಷ್ಟು ಮಕ್ಕಳು ಅಧಿಕ ತೂಕ ಹೊಂದಿರುತ್ತಿದ್ದರು. ಅಂತಹ ಮಕ್ಕಳ ಸಂಖ್ಯೆ ಪ್ರತಿ ರಾಜ್ಯದಲ್ಲೂ ಹೆಚ್ಚುತ್ತಿದೆ. ಸ್ಥೂಲಕಾಯದ ಮಕ್ಕಳು 5 ಪ್ರತಿಶತದಷ್ಟು ಬೆಳೆಯುತ್ತಿದ್ದಾರೆ ಎಂದು ಅಧ್ಯಯನವು ತೋರಿಸಿದೆ.

ಮಧ್ಯಪ್ರದೇಶದಲ್ಲಿ ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಅಧಿಕ:
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತದಲ್ಲಿ ಶೇಕಡಾ 39 ರಷ್ಟು ಮಕ್ಕಳು ಕಡಿಮೆ ಬೆಳವಣಿಗೆಯನ್ನು ಹೊಂದಿದ್ದಾರೆ. ಇವುಗಳಲ್ಲಿ ಗರಿಷ್ಠ 49 ಪ್ರತಿಶತದಷ್ಟು ಮಕ್ಕಳು ಉತ್ತರ ಪ್ರದೇಶದಲ್ಲಿದ್ದಾರೆ. 33% ಕಡಿಮೆ ತೂಕದ ಮಕ್ಕಳು ಭಾರತದಲ್ಲಿದ್ದು, ಅದರಲ್ಲಿ 42 ಪ್ರತಿಶತದಷ್ಟು ಮಕ್ಕಳು ಜಾರ್ಖಂಡ್‌ನಲ್ಲಿದ್ದಾರೆ. ಭಾರತದಲ್ಲಿ ರಕ್ತಹೀನತೆ ಸಮಸ್ಯೆ ಸುಮಾರು 60 ಪ್ರತಿಶತದಷ್ಟಿದೆ. ಅದೇ ಸಮಯದಲ್ಲಿ, 54 ಪ್ರತಿಶತದಷ್ಟು ಮಹಿಳೆಯರು ರಕ್ತಹೀನತೆಗೆ ಬಲಿಯಾಗುತ್ತಾರೆ. ರಕ್ತಹೀನತೆಯ ಸಮಸ್ಯೆ ದೆಹಲಿಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.