ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ 'ಉಪ್ಪು'... ಈ ರೀತಿ ಬಳಸಿದ್ರಷ್ಟೇ ಸಿಗುತ್ತೆ ಹೆಚ್ಚಿನ ಪ್ರಯೋಜನ

Salt: 'ಉಪ್ಪು' ಜಾಸ್ತಿಯಾದರೆ ಬಿ‌ಪಿ‌, ಹಿತ-ಮಿತವಾಗಿದ್ರೆ ಆರೋಗ್ಯಕ್ಕಿದೆ ಹಲವಾರು ರೀತಿಯ ಪ್ರಯೋಜನ.  ಹಲವಾರು ರೋಗನೀರೊಧಕ ಗುಣಗಳನ್ನು ಹೊಂದಿರುವ 'ಉಪ್ಪ' ಸೀಮಿತ ಪ್ರಮಾಣದಲ್ಲಿ ಬಳಸಿದರೆ ಇದು ಆರೋಗ್ಯಕ್ಕೆ ವರದಾನವಾಗಿದೆ. 

Written by - Yashaswini V | Last Updated : Mar 12, 2025, 01:33 PM IST
  • ಉಪ್ಪಿನ ಸೇವನೆ ಅತಿಯೂ ಆಗಬಾರದು ಹಾಗೂ ಕಡಿಮೆಯೂ ಆಗಬಾರದು, ಸಮತೋಲವಿದ್ದಷ್ಟು ಒಳ್ಳೆಯದು.
  • ಅತಿಯಾದ ಉಪ್ಪಿನ ಬಳಕೆಯಿಂದ ಮೂಳೆಗಳು ಶಿಥಿಲಗೊಳ್ಳುವಿಕೆ, ಅತಿ ರಕ್ತದೊತ್ತಡ, ಹೃದಯದ ಹಿಗ್ಗುವಿಕೆ, ಕರುಳಿನ ಹುಣ್ಣುಗಳಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ಊಟದ ರುಚಿ ಹೆಚ್ಚಿಸುವ ಉಪ್ಪನ್ನು ಹಿತ-ಮಿತವಾಗಿ ಬಳಸಿದರೆ ಇದು ಆರೋಗ್ಯಕ್ಕೆ ವರದಾನವಾಗಿರುತ್ತದೆ.
ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ 'ಉಪ್ಪು'... ಈ ರೀತಿ ಬಳಸಿದ್ರಷ್ಟೇ ಸಿಗುತ್ತೆ ಹೆಚ್ಚಿನ ಪ್ರಯೋಜನ

Salt For Health: 'ಉಪ್ಪು' ಇಲ್ಲದ ಅಡಿಗೆ ರುಚಿ ಎನಿಸುವುದೇ ಇಲ್ಲ. ಹಾಗಂತ ಉಪ್ಪು ಹೆಚ್ಚಾದರೂ ಅಡಿಗೆ ರುಚಿಯಾಗಿರುವುದಿಲ್ಲ. ಕೇವಲ ಆಹಾರದ ವಿಷಯದಲ್ಲಿ ಮಾತ್ರವಲ್ಲ  ಆರೋಗ್ಯದ ವಿಚಾರದಲ್ಲೂ 'ಉಪ್ಪು' ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಇದೇನಪ್ಪ, ಉಪ್ಪು ಕಡಿಮೆ ಮಾಡಿ, ಉಪ್ಪು ಬಳಸಿದರೆ ರಕ್ತದೊತ್ತಡ ಹೆಚ್ಚಾಗುತ್ತೆ ಅಂತ ಡಾಕ್ಟರ್ ಹೇಳಿದ್ರೆ, ಇವರು ಉಪ್ಪು ತಿನ್ನಲು ಸಲಹೆ ನೀಡುತ್ತಾರಲ್ಲ ಅಂದುಕೊಳ್ಳಬೇಡಿ. ಉಪ್ಪನ್ನು ಜಾಸ್ತಿ ತಿಂದರೆ ಬಿಪಿ ಬರೋದು ಗ್ಯಾರಂಟಿ. ಆದರೆ, ಇದನ್ನು ಸೀಮಿತ ಪ್ರಮಾಣದಲ್ಲಿ ಬಳಸುವುದರಿಂದ ಮಾತ್ರ ಆರೋಗ್ಯಕ್ಕೆ ಪ್ರಯೋಜನವನ್ನು ಪಡೆಯಬಹುದಾಗಿದೆ. 

Add Zee News as a Preferred Source

ಆರೋಗ್ಯಕ್ಕೆ ಉಪ್ಪು: 
ಅತಿ ಕಡಿಮೆ ಪ್ರಮಾಣದಲ್ಲಿ ಉಪ್ಪಿನ ಬಳಕೆಯಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಆರೋಗ್ಯಕ್ಕೆ ಉಪ್ಪಿನ ಪ್ರಯೋಜನವೆಂದರೆ.... 

ತೂಕ ಇಳಿಕೆ: 
ಉಪ್ಪಿನಲ್ಲಿ ಪ್ರಮುಖ ಸೋಡಿಯಮ್ ಕ್ಲೋರೈಡ್‌ನ್ನು ಹೊಂದಿರುತ್ತದೆ, ಸೋಡಿಯಮ್ ಶರೀರದ ಮೂಲಭೂತ ಎಲೆಕ್ಟ್ರೊಲೈಟ್‌ಗಳಲ್ಲಿ ಒಂದಾಗಿದೆ. ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬಿಸಿ ನೀರಿಗೆ,  ಚಿಟಿಕೆ ಉಪ್ಪು ಹಾಕಿ ಕುಡಿಯುವುದರಿಂದ ಹಲವಾರು ಉಪಯೋಗಗಳನ್ನು ಪಡೆಯಬಹುದು. ನಿತ್ಯ ಹೀಗೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು

ಇದನ್ನೂ ಓದಿ- ಪಥ್ಯ ಬೇಕಿಲ್ಲ... ದಿನ ಈ ಮಸಾಲೆ ಬಳಸಿದರೆ ಸಾಕು ಯಾವತ್ತೂ ಹೆಚ್ಚಾಗಲ್ಲ ಶುಗರ್ ಲೆವೆಲ್..!

ಜೀರ್ಣಾಂಗ ವ್ಯವಸ್ಥೆ: 
ಅಷ್ಟೆ ಅಲ್ಲದೆ ದೇಹದ ಜೀರ್ಣಾಂಗ ಸಮಸ್ಯೆ, ಆಮ್ಲೀಯತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಸಹ ಉಪ್ಪು ಲಾಭದಾಯಕವಾಗಿದೆ.  

ಮೂಳೆ ಆರೋಗ್ಯ: 
ಅಷ್ಟೆ ಅಲ್ಲದೆ ಉಪ್ಪು ನೀರಿಲ್ಲಿ ಕ್ಯಾಲ್ಸಿಯಂ ಇರುವುದರಿಂದ, ಮೂಳೆಗಳನ್ನು ಹಾಗೂ ಸ್ನಾಯುಗಳು ಬಲಪಡಿಸುವುದು. ವಿಶೇಷವಾಗಿ ಎಲುಬು, ಕೀಲು ನೋವಿನ ಸಮಸ್ಯೆಯಿಂದ  ಬಳಲುತ್ತಿರುವವರಿಗೆ ಉಪ್ಪು ನೀರು  ಪರಿಣಾಮಕಾರಿಯಾಗಿ ಪ್ರಭಾವ ಬೀರುವುದು. 

ಇದನ್ನೂ ಓದಿ- ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನೋ ಮೊದಲು ಎಚ್ಚರ... ಕಲ್ಲಂಗಡಿ ಕೆಂಪಾಗಿಸಲು ಕೃತಕ ಬಣ್ಣ: ವೈದ್ಯರು ಹೇಳಿದ್ದೇನು... ವಾಚ್ ವಿಡಿಯೋ

ಚರ್ಮದ ಆರೋಗ್ಯ: 
ಉಪ್ಪು ನೀರು ಚರ್ಮ ರಕ್ಷಣೆಗೆ ಕೂಡ ತುಂಬಾ ಒಳ್ಳೆಯದು, ಪಿಂಪಲ್ಸ್  ಹಾಗೂ ಚರ್ಮದ ಅಲರ್ಜಿಯಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News