ಕಣ್ಣುರಿ ತಡೆಯಲು, ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಗೆ ಪರಿಹಾರವಾಗಿ ಕಣ್ಣಿಗೆ ರೋಸ್ ವಾಟರ್ ಹಾಕಬಹುದೇ? ತಜ್ಞರು ಈ ಬಗ್ಗೆ ಹೇಳುವುದೇನು ?

Rose Water for Eyes: ಕೆಲವರು ರೋಸ್ ವಾಟರ್ ಅನ್ನು ಕ್ಲೆನ್ಸರ್ ಆಗಿ ಬಳಸುತ್ತಾರೆ. ಇನ್ನು ಕೆಲವರು ಟೋನರ್ ಅಥವಾ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದರೆ, ಕೆಲವರು ಕಣ್ಣಿನ ಆರೈಕೆಗೂ  ರೋಜ್ ವಾಟರ್ ಬಳಸುತ್ತಾರೆ.   

Written by - Ranjitha R K | Last Updated : Apr 11, 2025, 02:24 PM IST
  • ಹೆಚ್ಚಿನ ಜನರು ತಮ್ಮ ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಅನ್ನು ಬಳಸುತ್ತಾರೆ
  • ರೋಸ್ ವಾಟರ್ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ
  • ಚರ್ಮವನ್ನು ಮೃದುಗೊಳಿಸಿ ಹೊಳೆಯುವಂತೆ ಮಾಡುತ್ತದೆ.
ಕಣ್ಣುರಿ ತಡೆಯಲು, ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಗೆ ಪರಿಹಾರವಾಗಿ  ಕಣ್ಣಿಗೆ ರೋಸ್ ವಾಟರ್ ಹಾಕಬಹುದೇ? ತಜ್ಞರು ಈ ಬಗ್ಗೆ ಹೇಳುವುದೇನು ?

Rose Water for Eyes: ಹೆಚ್ಚಿನ ಜನರು ತಮ್ಮ ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಅನ್ನು ಬಳಸುತ್ತಾರೆ. ರೋಸ್ ವಾಟರ್ ಚರ್ಮವನ್ನು  ಆರೋಗ್ಯಕರವಾಗಿಟ್ಟುಕೊಳ್ಳುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಚರ್ಮದ ಶುಷ್ಕತೆಯನ್ನು ನಿವಾರಿಸುತ್ತದೆ. ಅಲ್ಲದೆ, ಚರ್ಮವನ್ನು ಮೃದುಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಕೆಲವರು ರೋಸ್ ವಾಟರ್ ಅನ್ನು ಕ್ಲೆನ್ಸರ್ ಆಗಿ ಬಳಸುತ್ತಾರೆ. ಇನ್ನು ಕೆಲವರು ಟೋನರ್ ಅಥವಾ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದರೆ, ಕೆಲವರು ಕಣ್ಣಿನ ಆರೈಕೆಗೂ  ರೋಜ್ ವಾಟರ್ ಬಳಸುತ್ತಾರೆ. 

Add Zee News as a Preferred Source

ಕಣ್ಣುಗಳಲ್ಲಿನ ನೀರು ಕಣ್ಣಿನಿಂದ ಹೊರ ಸುರಿಯುವುದರಿಂದ  ಕಣ್ಣುಗಳಲ್ಲಿರುವ ಎಲ್ಲಾ ಕಣಗಳು ಮತ್ತು ಕೊಳೆ ಹೊರ ಹೋಗುತ್ತದೆ. ರೋಸ್ ವಾಟರ್ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆದರೆ  ಇನ್ನು ಕೆಲವರು ಕಣ್ಣಿಗೆ ರೋಸ್ ವಾಟರ್ ಹಾಕಬಾರದು ಎಂದು ಹೇಳುತ್ತಾರೆ.  

ಇದನ್ನೂ ಓದಿ : ಮಧುಮೇಹ ಕಾಯಿಲೆಗೆ ಕೂದಲು ಉದುರುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ!

ಕಣ್ಣಿಗೆ ರೋಸ್ ವಾಟರ್ ಹಾಕಬಹುದೇ? :
"ಹೌದು, ಕಣ್ಣಿಗೆ ರೋಸ್ ವಾಟರ್ ಹಾಕಬಹುದು. ರೋಸ್ ವಾಟರ್ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ.ರೋಸ್ ವಾಟರ್ ಕಣ್ಣಿನ ಅನೇಕ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.

ರೋಸ್ ವಾಟರ್ ಪಿತ್ತ ನಿವಾರಕ ಎಂದು ಹೇಳಲಾಗುತ್ತದೆ.  ಕಣ್ಣುಗಳು ನಿರ್ಣಾಯಕ ಪಿತ್ತರಸದ ಸ್ಥಳ. ಪಿತ್ತದಲ್ಲಿ ಹೆಚ್ಚಿದ ಉಷ್ಣತೆಯು ಕಣ್ಣು ಉರಿ, ಊತ, ಶುಷ್ಕತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಕಣ್ಣಿಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ತೆಗೆದುಹಾಕಲು ರೋಸ್ ವಾಟರ್ ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಅಲರ್ಜಿಯ ಸಮಸ್ಯೆ ಇದ್ದರೆ , ಕಣ್ಣುಗಳಲ್ಲಿ ರೋಸ್ ವಾಟರ್ ಹಾಕಬಹುದು.

ಇದನ್ನೂ ಓದಿ :  90% ನೀರಿನಂಶವಿರುವ ಈ ಹಣ್ಣನ್ನು ಸೇವಿಸಿದರೆ ಶುಗರ್, ತೂಕ ನಷ್ಟದಿಂದ ಹಿಡಿದು ಮಲಬದ್ದತೆ ವರೆಗೆ ಸರ್ವ ರೋಗಗಳಿಗೂ ಸಿಗುವುದು ಪರಿಹಾರ !

ಕಣ್ಣಿಗೆ ರೋಸ್ ವಾಟರ್ ಹಾಕುವುದರಿಂದಾಗುವ ಪ್ರಯೋಜನಗಳು : 
ಕಣ್ಣಿನ ಕಿರಿಕಿರಿಯನ್ನು ನಿವಾರಿಸಲು ರೋಜ್ ವಾಟರ್ ಹಚ್ಚಿಕೊಳ್ಳುವುದು ಒಳ್ಳೆಯದು.
ಕಣ್ಣಿನ ಆಯಾಸ ಮತ್ತು ತುರಿಕೆಯನ್ನು ಸಹ ರೋಸ್ ವಾಟರ್ ಗುಣಪಡಿಸುತ್ತದೆ.
ಕಣ್ಣಿನ ಕೊಳೆಯನ್ನು ಸ್ವಚ್ಛಗೊಳಿಸಲು ರೋಜ್ ವಾಟರ್ ಸಹಾಯ ಮಾಡುತ್ತದೆ. 
ಕಣ್ಣುಗಳಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಲು ರೋಸ್ ವಾಟರ್ ಸಹಾಯ ಮಾಡುತ್ತದೆ.
ಕಣ್ಣಿನ ಅಲರ್ಜಿ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ರೋಸ್ ವಾಟರ್ ಸಹಾಯಕ. 
ರೋಸ್ ವಾಟರ್ ಕಣ್ಣುಗಳ ಶುಷ್ಕತೆಯನ್ನು ನಿವಾರಿಸುತ್ತದೆ.

ಕಣ್ಣಿಗೆ ರೋಸ್ ವಾಟರ್ ಹಾಕುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ : 
೧.ನಿಮ್ಮ ಕಣ್ಣುಗಳಲ್ಲಿ ರೋಸ್ ವಾಟರ್ ಹಾಕುವ ಮೊದಲು, ಚರ್ಮದ ಮೇಲೆ ಅದು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಪರಿಶೀಲಿಸಬೇಕು.
೨. ಚರ್ಮದ ಮೇಲೆ ರೋಸ್ ವಾಟರ್ ಹಚ್ಚುವುದರಿಂದ ಅಲರ್ಜಿ ಮತ್ತು ಕೆಂಪು ಬಣ್ಣದಂತಹ ಸಮಸ್ಯೆಗಳು ಉಂಟಾದರೆ, ಕಣ್ಣುಗಳಿಗೆ ಅದನ್ನು ಹಚ್ಚಲು ಹೋಗಬೇಡಿ. 
೩. ಕಣ್ಣಿನ ಸೋಂಕು ಇದ್ದರೂ ಸಹ, ನಿಮ್ಮ ಕಣ್ಣಿಗೆ ರೋಸ್ ವಾಟರ್ ಹಾಕಬಾರದು. 
೪. ನಿಮಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ, ತಜ್ಞರ ಸಲಹೆಯ ಮೇರೆಗೆ ಮಾತ್ರ ರೋಸ್ ವಾಟರ್ ಹಚ್ಚಿ.

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News