ಟೋಪಿ ಧರಿಸಿದರೆ ಕೂದಲು ಉದುರುತ್ತದೆಯೇ..? ಬೋಳು ತಲೆ ಪ್ರಾರಂಭಕ್ಕೂ ಮುನ್ನ ತಿಳಿದುಕೊಳ್ಳಿ

Hair Care tips : ಕೆಲವರು ಫ್ಯಾಷನ್‌ಗಾಗಿ ಟೋಪಿಗಳನ್ನು ಧರಿಸುತ್ತಾರೆ, ಇನ್ನು ಕೆಲವರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಕಿಕೊಳ್ಳುತ್ತಾರೆ.. ಕೆಲವರು ಧಾರ್ಮಿಕ ಕಾರಣಗಳಿಗಾಗಿ ಧರಿಸುತ್ತಾರೆ. ಕೆಲವು ಜನರು ಕ್ರೀಡೆಗಳ ಸಮಯದಲ್ಲಿಯೂ ಹ್ಯಾಟ್‌ ಧರಿಸುತ್ತಾರೆ. ಕಾರಣ ಏನೇ ಇರಲಿ ಆದರೆ ಟೋಫಿ ಧರಿಸಿದರೆ ಬೋಳು ಅಥವಾ ಕೂದಲು ಉದುರುತ್ತದೆಯೇ..? ಬನ್ನಿ ಈ ಕುರಿತು ತಿಳಿಯೋಣ..

Written by - Krishna N K | Last Updated : Apr 4, 2025, 04:22 PM IST
    • ಟೋಫಿ ಧರಿಸಿದರೆ ಬೋಳು ಅಥವಾ ಕೂದಲು ಉದುರುತ್ತದೆಯೇ..?
    • 98 ದಂಪತಿ ಮೇಲೆ ನಡೆಸಿದ ಪ್ರಯೋಗದಲ್ಲಿ ಶಾಕಿಂಗ್‌ ವರದಿ ಬಹಿರಂಗವಾಗಿದೆ.
    • ಕೂದಲು ಉದುರುವಿಕೆಗೆ ಕಾರಣವೇನೆಂದು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ.
ಟೋಪಿ ಧರಿಸಿದರೆ ಕೂದಲು ಉದುರುತ್ತದೆಯೇ..? ಬೋಳು ತಲೆ ಪ್ರಾರಂಭಕ್ಕೂ ಮುನ್ನ ತಿಳಿದುಕೊಳ್ಳಿ

Hair care routine : ಈ ಕುರಿತು ಡಾ. ಜಾನ್ ಆಂಥೋನಿಯವರು 98 ದಂಪತಿ ಮೇಲೆ ನಡೆಸಿದ ಪ್ರಯೋಗದಲ್ಲಿ ಶಾಕಿಂಗ್‌ ವರದಿ ಬಹಿರಂಗವಾಗಿದೆ. ಕೂದಲು ಉದುರುವಿಕೆಗೆ ಕಾರಣವೇನೆಂದು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ವ್ಯದ್ಯರು ತಿಳಿಸಿದ್ದಾರೆ.. ಪುರುಷರು ಮತ್ತು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ವಿಭಿನ್ನ ಕಾರಣಗಳಿವೆ. ಇದಕ್ಕೆ ಕಾರಣಗಳು ಜೀನ್‌ಗಳು, ಲಿಂಗ, ವಯಸ್ಸು, ಹಾರ್ಮೋನುಗಳು, ವೈದ್ಯಕೀಯ ಪರಿಸ್ಥಿತಿಗಳು, ಪೋಷಣೆ ಇತ್ಯಾದಿ.

Add Zee News as a Preferred Source

ನೀವು ಟೋಪಿ ಧರಿಸಿದಾಗ, ತಲೆಯ ಮೇಲೆ ಒತ್ತಡ ಬೀಳುತ್ತದೆ, ಇದು ನೆತ್ತಿಯ ಚರ್ಮವನ್ನು ಬಿಗಿಗೊಳಿಸಲು ಕಾರಣವಾಗಬಹುದು. ಇದರಿಂದ ತಲೆಬುರುಡೆಯಲ್ಲಿ ಉರಿ, ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಮತ್ತೊಂದೆಡೆ, ನೀವು ಬಿಗಿಯಾದ ಟೋಪಿ ಧರಿಸಿದರೆ, ಅದು ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ..

ಇದನ್ನೂ ಓದಿ:ಡೀಪ್‌ ನೆಕ್‌ ಬಟ್ಟೆ ಧರಿಸಿ ಮೈ ಮೆರೆತ ಬೋಲ್ಡ್‌ ಬ್ಯೂಟಿ... ಕಾಣಬಾರದ್ದೆಲ್ಲ ಕಂಡಾಯ್ತು! ನಟಿಯ ವಿಡಿಯೋ ವೈರಲ್

ಬಿಗಿಯಾದ ಟೋಪಿ ಧರಿಸಿದರೆ ತಲೆ ಸಂಕುಚಿತಗೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ, ಇದು ಕೂದಲು ಕಿರುಚೀಲಗಳನ್ನು ದುರ್ಬಲಗೊಳಿಸುತ್ತದೆ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂದು ಡಾ. ಆಂಟನಿ ಹೇಳಿದರು. 

ಈ ಕೂದಲು ಉದುರುವಿಕೆ ತಾತ್ಕಾಲಿಕವಾಗಿರುತ್ತದೆ ಮತ್ತು ನೀವು ಟೋಪಿ ತೆಗೆದಾಗ ಎಲ್ಲವೂ ಮತ್ತೆ ಸರಿಯಾಗುತ್ತದೆ, ಆದರೆ ನೀವು ನಿಯಮಿತವಾಗಿ ಟೋಪಿ ಧರಿಸಿದರೆ, ಅದು ಶಾಶ್ವತ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ಹೆಚ್ಚು ಹೊತ್ತು ಟೋಪಿಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಅಗತ್ಯವಿದ್ದಾಗ ಮಾತ್ರ ಅವುಗಳನ್ನು ಧರಿಸಿ. ಆದರೆ, ಟೋಪಿಗಳನ್ನು ಧರಿಸುವುದರಿಂದಲೇ ಕೂದಲು ಉದುರುವಿಕೆ ಉಂಟಾಗುತ್ತದೆ ಎಂದು ಇನ್ನೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News