Throat Cancer: ಕ್ಯಾನ್ಸರ್ ಹೆಸರು ಕೇಳಿದ ತಕ್ಷಣ ಬಹುತೇಕ ಜನರು ಭಯಭೀತರಾಗಲು ಪ್ರಾರಂಭಿಸುತ್ತಾರೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಅಂದರೆ, ಈ ಅಪಾಯಕಾರಿ ರೋಗವನ್ನು ಬೇಗ ಗುರುತಿಸಿದರೆ, ರೋಗಿಯ ಆರೋಗ್ಯಕ್ಕೆ ಆಗುವ ಹಾನಿ ಕಡಿಮೆ ಎಂದು ನಿಮಗೆ ತಿಳಿದಿದೆಯೇ? ಗಂಟಲು ಕ್ಯಾನ್ಸರ್‌ನ ಲಕ್ಷಣಗಳನ್ನು ಸಣ್ಣದಾಗಿ ಪರಿಗಣಿಸಿ ನಿರ್ಲಕ್ಷಿಸುವ ತಪ್ಪನ್ನು ನೀವು ಮಾಡುತ್ತಿದ್ದೀರಾ? ನಿಮ್ಮಲ್ಲಿ ಕೆಲವು ಲಕ್ಷಣಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.
ನಿರಂತರ ಕೆಮ್ಮು ಮತ್ತು ಗಂಟಲು ನೋವು
ಸಾಮಾನ್ಯವಾಗಿ ಜನರು ಕೆಮ್ಮಿನ ಸಮಸ್ಯೆಗೆ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಎರಡು ವಾರಗಳಿಗಿಂತಲೂ ಹೆಚ್ಚು ಕಾಲ ಕೆಮ್ಮಿನ ಸಮಸ್ಯೆ ಗಂಟಲಿನ ಕ್ಯಾನ್ಸರ್‌ನ ಸಂಕೇತವೆಂದು ಸಾಬೀತುಪಡಿಸಬಹುದು. ಇದರೊಂದಿಗೆ ಗಂಟಲು ನೋವಿನ ಸಮಸ್ಯೆ ಎರಡು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ನೀವು ಜಾಗರೂಕರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮನ್ನು ಪರೀಕ್ಷಿಸಿಕೊಳ್ಳಬೇಕು.
ಇದನ್ನೂ ಓದಿ: ಯೂರಿಕ್ ಆಮ್ಲ ಹೆಚ್ಚಾದಾಗ ದೇಹದ ಈ ಭಾಗಗಳಲ್ಲಿ ನೋವು ಉಂಟಾಗುತ್ತದೆ? ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ...
ಧ್ವನಿಯಲ್ಲಿ ಬದಲಾವಣೆ
ಆರೋಗ್ಯ ತಜ್ಞರ ಪ್ರಕಾರ, ಗಂಟಲು ಕ್ಯಾನ್ಸರ್ ಧ್ವನಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ನಿಮ್ಮ ಧ್ವನಿ ಬದಲಾಗುತ್ತಿದ್ದರೆ ಅಥವಾ ನಿಮ್ಮ ಧ್ವನಿ ಭಾರವಾಗುತ್ತಿದ್ದರೆ, ನಿಮಗೆ ಗಂಟಲು ಕ್ಯಾನ್ಸರ್ ಇರಬಹುದು. ಇದಲ್ಲದೆ ನಿಮಗೆ ಏನನ್ನಾದರೂ ನುಂಗಲು ತೊಂದರೆಯಾಗುತ್ತಿದ್ದರೆ, ಈ ಲಕ್ಷಣವು ಸಹ ಗಂಟಲು ಕ್ಯಾನ್ಸರ್ ಅನ್ನು ಸೂಚಿಸುತ್ತದೆ.
ಗಮನಿಸಬೇಕಾದ ವಿಷಯ
ಗಂಟಲಿನಲ್ಲಿ ನೋವು ಅಥವಾ ಕಿವಿಯಲ್ಲಿ ನೋವು, ಇಂತಹ ಲಕ್ಷಣಗಳು ಸಹ ಗಂಟಲು ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು. ಕುತ್ತಿಗೆಯಲ್ಲಿ ಗಡ್ಡೆ ಕಂಡುಬಂದರೆ, ನೀವು ತಕ್ಷಣವೇ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಇಂತಹ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಳ್ಳುವುದು ಸಹ ಗಂಟಲು ಕ್ಯಾನ್ಸರ್‌ನ ಸಾಧ್ಯತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸುತ್ತದೆ, ಆದ್ದರಿಂದ ತಕ್ಷಣವೇ ನಿಮ್ಮ ಆರೋಗ್ಯವನ್ನ ತಪಾಸಣೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಶ್ವಾಸಕೋಶಗಳು ದುರ್ಬಲವಾಗುತ್ತಿವೆ ಎಂದರ್ಥ!!
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)









