ಈ ಪುಟ್ಟ ತರಕಾರಿ ಕೀಲುಗಳಲ್ಲಿ ಅಂಟಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ನೀರಾಗಿಸುತ್ತದೆ !ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಏಕೈಕ ತರಕಾರಿ ಇದು !

Uric Acid control tips :ನಮ್ಮ ದೇಹದಲ್ಲಿ ಪ್ಯೂರಿನ್ ನ ಅಧಿಕ ಸೇವನೆಯಿಂದ, ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ದೇಹವು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಅದು ಸ್ಫಟಿಕಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.

Written by - Ranjitha R K | Last Updated : Apr 10, 2025, 03:46 PM IST
  • ಕೀಲುಗಳಲ್ಲಿ ಯೂರಿಕ್ ಆಸಿಡ್ ಸೇರಿಕೊಳ್ಳುವುದು ಬಹಳ ಸಾಮಾನ್ಯ ಸಮಸ್ಯೆ
  • ಗೌಟ್, ಸಂಧಿವಾತ ಮತ್ತು ಊತದಂತಹ ಸಮಸ್ಯೆಗಳಿಗೆ ಕಾರಣವಾಗಿದೆ
  • ಯೂರಿಕ್ ಆಸಿಡ್ ಕಾರಣದಿಂದ ನೋವು ವಿಪರೀತ ಹೆಚ್ಚಾಗುತ್ತದೆ.
ಈ ಪುಟ್ಟ ತರಕಾರಿ ಕೀಲುಗಳಲ್ಲಿ ಅಂಟಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ನೀರಾಗಿಸುತ್ತದೆ !ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಏಕೈಕ ತರಕಾರಿ ಇದು !

Uric Acid control tips : ಇತ್ತೀಚಿನ ದಿನಗಳಲ್ಲಿ ಕೀಲುಗಳಲ್ಲಿ ಯೂರಿಕ್ ಆಸಿಡ್ ಸೇರಿಕೊಳ್ಳುವುದು ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ, ಜನರಿಗೆ ಗೌಟ್, ಸಂಧಿವಾತ ಮತ್ತು ಊತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೀಲುಗಳಲ್ಲಿ ಅಂಟಿಕೊಂಡಿರುವ ಯೂರಿಕ್ ಆಸಿಡ್ ಕಾರಣದಿಂದ ನೋವು ವಿಪರೀತ ಹೆಚ್ಚಾಗುತ್ತದೆ. 

Add Zee News as a Preferred Source

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ರೂಪುಗೊಳ್ಳುವ ಒಂದು ರೀತಿಯ ರಾಸಾಯನಿಕವಾಗಿದ್ದು, ಇದನ್ನು ಮೂತ್ರಪಿಂಡಗಳ ಮೂಲಕ ಫಿಲ್ಟರ್ ಮಾಡಲಾಗುತ್ತದೆ. ಆದರೆ ಹಲವು ಬಾರಿ, ನಮ್ಮ ದೇಹದಲ್ಲಿ ಪ್ಯೂರಿನ್ ನ ಅಧಿಕ ಸೇವನೆಯಿಂದ, ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ದೇಹವು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಅದು ಸ್ಫಟಿಕಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ : ಸಾಸಿವೆ ಎಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಅರೆ ಕ್ಷಣದಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು!ಕೇಶ ರಾಶಿ ಮೊಣಕಾಲುದ್ದ ಬೆಳೆಯಲು ಕೂಡಾ ಇದೇ ಮದ್ದು!

ಯೂರಿಕ್ ಆಮ್ಲ ಹೆಚ್ಚಾಗಲು ಕಾರಣಗಳು:
ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ ಯೂರಿಕ್ ಆಮ್ಲ ಹೆಚ್ಚಾಗಬಹುದು. ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.  ಮಾಂಸ, ಸಮುದ್ರಾಹಾರ, ಮಸೂರ, ಬೀನ್ಸ್ ಮತ್ತು ಅಣಬೆಗಳನ್ನು ತಿನ್ನುವುದರಿಂದ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ. ಆಹಾರದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುವುದರಿಂದ ಯೂರಿಕ್ ಆಮ್ಲವೂ ಹೆಚ್ಚಾಗುತ್ತದೆ.

ಯೂರಿಕ್ ಆಸಿಡ್ ಹೆಚ್ಚಾಗಿದ್ದರೆ ಅದನ್ನು ದೇಹದಿಂದ ಹೊರ ಹಾಕುವಲ್ಲಿ ತೊಂಡೆಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 
ಯೂರಿಕ್  ಆಸಿಡ್ ಸಮಸ್ಯೆಯನ್ನು ತೊಡೆದುಹಾಕಲು, ವೈದ್ಯರು ಮೊದಲು ಆಹಾರವನ್ನು ಬದಲಾಯಿಸಲು ಶಿಫಾರಸು ಮಾಡುತ್ತಾರೆ. ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ   ಅನೇಕ ಹಣ್ಣುಗಳು ಮತ್ತು ತರಕಾರಿಗಳಿವೆ. ಅಂಥಹ ಒಂದು ತರಕಾರಿ ತೊಂಡೆಕಾಯಿ.

ಇದನ್ನೂ ಓದಿ : ಸಮಗ್ರ ಆರೋಗ್ಯಕ್ಕೆ ಪತಂಜಲಿ ಯೋಗಾಭ್ಯಾಸಗಳನ್ನು ಸುವರ್ಣ ಮಾನದಂಡ ಎಂದು ಪರಿಗಣಿಸಲು ಕಾರಣವೇನು ಗೊತ್ತಾ...!

ತೊಂದೆಕಾಯಿಯಲ್ಲಿರುವ ಫೈಬರ್, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಯೂರಿಕ್ ಆಸಿಡ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. 

ಉರಿಯೂತವನ್ನು ನಿವಾರಿಸುವಲ್ಲಿ ಸಹಾಯಕ :
ಇದಲ್ಲದೆ, ತೊಂಡೆಕಾಯಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಕೀಲುಗಳಲ್ಲಿನ ಉರಿಯೂತವನ್ನು ನಿವಾರಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದೇ ಕಾರಣಕ್ಕೆ ತೊಂಡೆಕಾಯಿ  ಸೇವಿಸುವುದರಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಸ್ಫಟಿಕ ಕರಗಿ ಹೊರಬರುತ್ತದೆ ಮತ್ತು ಕೀಲುಗಳಲ್ಲಿನ ನೋವು ಮತ್ತು ಊತದಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ 20 ನಿಮಿಷಗಳ ಕಾಲ ವಾಕ್ ಮಾಡಿದರೆ ಸಾಕು ದೇಹ ತೂಕ ಸುಲಭವಾಗಿ ಕಳೆದುಕೊಳ್ಳಬಹುದು !

ಯೂರಿಕ್ ಆಸಿಡ್ ಸಮಸ್ಯೆಯನ್ನು ತೊಡೆದುಹಾಕಲು, ತೊಂಡೆಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.  ಸ್ಟಫ್ಡ್  ತೊಂಡೆಕಾಯಿ, ತೊಂಡೆಕಾಯಿ ಪಲ್ಯ, ಹುಳಿ ಹೀಗೆ ನಿಮಗೆ ಯಾವ ರೀತಿ ಅನುಕೂಲವೋ ಆ ರೀತಿ ತೊಂಡೆಕಾಯಿಯನ್ನು ಸೇವಿಸಬಹುದು. ತೊಂಡೆಕಾಯಿ ನೀರನ್ನು ಸೇವಿಸುವ ಮೂಲಕ ಕೂಡಾ ಯೂರಿಕ್ ಆಸಿಡ್ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದಕ್ಕಾಗಿ, ರಾತ್ರಿ ಮಲಗುವ ಮುನ್ನ, ತೊಂಡೆಕಾಯಿಯನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News