ಆಹಾರಗಳನ್ನು ರಕ್ಷಿಸಲು ಮತ್ತು ಹಾಳಾಗಂದತೆ ನೋಡಿಕೊಂಡು ಸಮರ್ಪಕವಾಗಿ ಬಳಸಲು ಹೆಚ್ಚುವರಿ ಪದಾರ್ಥಗಳನ್ನು ರೆಫ್ರಿಜರೇಟರ್ನಲ್ಲಿ ಇಡುವ ಮೊದಲು ಎಚ್ಚರ.. ಕೆಲವು ಆಹಾರಗಳು ತೇವಾಂಶದಲ್ಲಿ ಪ್ರತಿಕ್ರಿಯಿಸಿ ವಿಷವಾಗಿ ಪರಿಣಮಿಸಬಹುದು.

Foods to avoid in Fridge: ದೀರ್ಘಕಾಲ ಆಹಾರ ಕೆಡದಂತೆ ಸಂರಕ್ಷಿಸಲು ಸಾಮಾನ್ಯವಾಗಿ ಫ್ರಿಡ್ಜ್ನ್ನು ಬಳಸುತ್ತೇವೆ. ಇದರಿಂದ ಆಹಾರವನ್ನು ಹೆಚ್ಚು ಕಾಲ ಹಾಳಾಗದಂತೆ ಇಡಬಹುದು. ಆದರೆ ಕೆಲವೊಂದು ಆಹಾರಗಳನ್ನು ಫ್ರಿಡ್ಜ್ನಲ್ಲಿಟ್ಟ ನಂತರ ಮತ್ತೆ ತಿನ್ನುವುದು ಆರೋಗ್ಯಕ್ಕೆ ದುಷ್ಪರಿಣಾಮಕಾರಿಯಾಗಬಹುದು ಎಂಬುದನ್ನು ಬಹುತೇಕ ಮಂದಿಗೆ ಅರಿವಿರುವುದಿಲ್ಲ. ಕೆಲವು ಆಹಾರ ಪದಾರ್ಥಗಳು ಫ್ರಿಡ್ಜ್ನ ತಂಪಿನಲ್ಲಿ ರಾಸಾಯನಿಕ ಬದಲಾವಣೆಗೊಳಗಾಗುತ್ತವೆ, ಈ ರೀತಿಯ ಆಹಾರಗಳನ್ನು ನಾವು ಸೇವಿಸಿದಾಗ ನಮ್ಮ ಜೀರ್ಣಕ್ರಿಯೆಗೆ ಇದು ತೊಂದರೆ ಉಂಟುಮಾಡಬಹುದು.
ವಾಸ್ತವವಾಗಿ, ಬಹುತೇಕ ಮನೆಗಳಲ್ಲಿ ಉಳಿದ ಅನ್ನ, ತರಕಾರಿ ಅಥವಾ ಇಡ್ಲಿ-ದೋಸೆ ಹಿಟ್ಟು, ಬಾಯಿಲ್ ಮಾಡಿದ ಅಲೂಗಡ್ಡೆ, ಮೊಸರು ಅಥವಾ ಎಣ್ಣೆಯಲ್ಲಿ ಕರಿದ ಭಕ್ಷ್ಯಗಳನ್ನು ಫ್ರಿಡ್ಜ್ನಲ್ಲಿ ಇಟ್ಟು ಮತ್ತೆ ಬಿಸಿಮಾಡಿಕೊಂಡು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಈ ಆಹಾರಗಳಲ್ಲಿ ಸೋಂಕು ಹರಡುವಿಕೆಗೆ ಹೆಚ್ಚು ಎಂಬುದನ್ನು ನಾವು ನಿರ್ಲಕ್ಷ್ಯಿಸುತ್ತೇವೆ. ದೀರ್ಘ ಸಮಯದವರೆಗೆ ರೆಫ್ರಿಜರೇಟರ್ ನಲ್ಲಿ ಇಟ್ಟ ಆಹಾರದೊಳಗೆ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆದಿರಬಹುದು. ಹಾಗೆ ಈ ಆಹಾರವನ್ನು ತಿಂದರೆ, ಆಹಾರ ವಿಷಬಾಧೆ (Food Poisoning), ಗ್ಯಾಸ್ಟ್ರಿಕ್ ಸಮಸ್ಯೆಗಳು, ಅಲರ್ಜಿ, ಡೈರಿಯಾ ಸಮಸ್ಯೆಗಳು ಎದುರಾಗಬಹುದು.
ಅನ್ನ, ಬೇಯಿಸಿದ ಕಾಳುಗಳು ಅಥವಾ ಕೆಲ ತರಕಾರಿಗಳು, ಮೊಸರು, ಮೊಟ್ಟೆ, ಮಾಂಸಹಾರ ಅಥವಾ ಮೀನಿನಂತಹ ಆಹಾರ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿಟ್ಟರೂ ಸಹ ಅವುಗಳನ್ನು ಮಿತಿಮೀರಿ ಹೆಚ್ಚಿನ ಕಾಲ ಇಡಬಾರದು. ವಿಶೇಷವಾಗಿ ಬಿಸಿ ಬಿಸಿ ಅನ್ನವನ್ನು ತಕ್ಷಣ ಫ್ರಿಡ್ಜ್ನಲ್ಲಿ ಇಡುವುದು ತಪ್ಪು. ಬಿಸಿ ಆಹಾರ ಫ್ರಿಡ್ಜ್ನ ಒಳಗಿನ ತಾಪಮಾನವನ್ನು ಬದಲಾಯಿಸಬಹುದು, ಇದು ಅನ್ನದೊಂದಿಗೆ ಬೆರೆಸಿ ತಿನ್ನುವ ಇತರ ಆಹಾರಗಳ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಈ ಬಗ್ಗೆ ವೈದ್ಯರು ಸಹ ಮಾಹಿತಿ ಹಂಚಿಕೊಂಡಿದ್ದು, ಫ್ರಿಡ್ಜ್ನಲ್ಲಿಟ್ಟ ಆಹಾರವನ್ನು 1 ಅಥವಾ 2 ದಿನಕ್ಕಿಂತ ಹೆಚ್ಚು ಸಮಯ ಉಳಿಸಬಾರದು. ಉಪ್ಪು, ಬೆಲ್ಲ, ಮೊಸರು, ಮತ್ತು ಇತರ ನಿಜವಾದ ತಂಪುಪಾನೀಯ ಪದಾರ್ಥಗಳನ್ನು ಹೊರತುಪಡಿಸಿ ಇತರ ಆಹಾರಗಳನ್ನು ಫ್ರಿಡ್ಜ್ನಲ್ಲಿಟ್ಟು ಬಳಸುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದಿದ್ದಾರೆ.